ಥಾಣೆ, ನ.12-ಚುನಾವಣಾ ಅಧಿಕಾರಿಗಳು ಬಿಲ್ಡರ್ ಬಂಗಲೆ ಮತ್ತು ವ್ಯಾನ್‌ನಲ್ಲಿ ಸಾಗಿಸುತ್ತಿದ್ದ 3.7 ಕೋಟಿ ರೂಪಾಯಿ ಹಣವನ್ನು ಇಲ್ಲಿ ವಶಪಡಿಸಿಕೊಂಡಿದ್ದಾರೆ.ಮಾಹಿತಿ ಸುಳಿವಿನ ಮೇರೆಗೆ ಪೊಲೀಸರು ಹಾಗು ಚುನಾವಣಾ ಅಧಿಕಾರಿಗಳ ತಂಡ ಕಳೆದ ರಾತ್ರಿ ನವಿ ಮುಂಬೈನ ನೆರೂಲ್ ಪ್ರದೇಶದಲ್ಲಿರುವ ಮನೆಯೊಂದರ ಮೇಲೆ ಮೇಲೆ ದಾಳಿ ನಡೆಸಿ ಅಲ್ಲಿಂದ 2.5 ಕೋಟಿ ರೂಪಾಯಿ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಣದ ಮೂಲ ಮತ್ತು ಅದು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು. ಮತ್ತೊಂದು ಕಾರ್ಯಾಚರಣೆಯಲ್ಲಿ, ಫ್ಲೈಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು ಭಿವಂಡಿಯಿಂದ ಕಲ್ಯಾಣ್ ಕಡೆಗೆ ಹೋಗುತ್ತಿದ್ದಾಗ ವಾಹನವು ಬಾಪಗಾಂವ್ ಬಳಿ ನಿಲ್ಲಿಸಿ ತಪಾಸನೆ ನಡೆಸಿದಾಗ 1.2 ಕೋಟಿ ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ವಾಹನದಲ್ಲಿದ್ದವರು ಹಣದ ಬಗ್ಗೆ ತೃಪ್ತಿಕರ ಪುರಾವೆಗಳನ್ನು ನೀಡಲು ಸಾಧ್ಯವಾಗದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಇದೇ ನವೆಂಬರ್ 20 ರಂದು ರಾಜ್ಯ ವಿಧಾನಸಭಾ ಚುನಾವಣೆ ನಿಗದಿಯಾಗಿದ್ದು ಭಾರಿ ಪ್ರಮಾಣದಲ್ಲಿ ಅಕ್ರಮ ಹಣ ಸಾಗಾಣಿಕೆ ಪತ್ತೆಯಾಗಿದೆ.