ಹಾವೇರಿ,ನ.13- ಅಮೆರಿಕದಿಂದ ಬಂದು ಯುವತಿಯೊಬ್ಬರು ಮತ ಚಲಾಯಿಸಿ ಗಮನ ಸೆಳೆದಿರುವ ಘಟನೆ ಶಿಗ್ಗಾಂವಿ ಉಪಚುನಾವಣೆ ವೇಳೆ ನಡೆದಿದೆ.ಅಮೆರಿಕದಿಂದ ಕಳೆದ ರಾತ್ರಿ ಬಂದ ಅನುಷಾ ತನ್ನ ತಾಯಿ ಜೊತೆಗೆ ಆಗಮಿಸಿ ಶಿಗ್ಗಾಂವಿ ನಗರದ ಮಮ್ಲೇದೇಸಾಯಿ ಶಾಲೆಯ ಆಗಮಿಸಿ ಮತದಾನ ಮಾಡಿದ್ದಾರೆ. ಆ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.
ಮತದಾನದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನುಷಾ, ನಾನು ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿದ್ದೇನೆ. ಇದು ನನ್ನ ಲಕ್. ಕಡ್ಡಾಯ ಮತದಾನ ಮಾಡುವುದು ಎಲ್ಲರ ಹಕ್ಕು. ಈಗ ಮತದಾನ ಮಾಡಿದ್ದು ವಾಪಸ್ ಹೋಗುವ ತಯಾರಿಯಲ್ಲಿದ್ದೇವೆ ಎಂದು ತಿಳಿಸಿದರು.
ನಾಯಕತ್ವ ಗುಣ ಇರುವ ವ್ಯಕ್ತಿಯನ್ನು ಆರಿಸುವುದು ನಮೆಲ್ಲರ ಕರ್ತವ್ಯ. ಎಂಥವರು ಆಯ್ಕೆಯಾಗಿ ಬಂದರೆ ನಮ ಕ್ಷೇತ್ರ ಉನ್ನತಿ ಪಡೆಯುತ್ತದೆ ಎಂಬುದನ್ನು ಆಲೋಚನೆ ಮಾಡಿ ವೋಟ್ ಮಾಡಿದ್ದೇನೆ ಎಂದು ಹೇಳಿದರು.