Thursday, December 12, 2024
Homeಬೆಂಗಳೂರುಪೋಷಕರನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಏರ್ ಹೋಸ್ಟರ್ ಅಪಘಾತದಲ್ಲಿ ಸಾವು

ಪೋಷಕರನ್ನು ನೋಡಲು ಬೆಂಗಳೂರಿಗೆ ಬಂದಿದ್ದ ಏರ್ ಹೋಸ್ಟರ್ ಅಪಘಾತದಲ್ಲಿ ಸಾವು

Air hostess who had come to Bengaluru to see parents dies in accident


ಬೆಂಗಳೂರು,ನ.21- ಪೋಷಕರನ್ನು ನೋಡಲು ನಗರಕ್ಕೆ ಬಂದಿದ್ದ ಹಾಕಾಂಗ್ ಏರ್ವೋಸ್ಟರ್ ಸ್ವಯಂ ಅಪಘಾತದಲ್ಲಿ ಇಂದು ಬೆಳಗಿನ ಜಾವ ಮೃತಪಟ್ಟಿರುವ ಘಟನೆ ಆರ್ಆರ್ನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಆರ್ಆರ್ನಗರದ ಎಚ್ವಿಹಳ್ಳಿ, ಎಂಜಿ ಬಡಾವಣೆ ನಿವಾಸಿ ಪ್ರಖ್ಯಾತ್(26) ಮೃತಪಟ್ಟಿರುವ ಏರ್ವೋಸ್ಟರ್.

ಪ್ರಖ್ಯಾತ್ ಅವರು ಹಾಕಾಂಗ್ನಲ್ಲಿ ಏರ್ವೋಸ್ಟರ್ ಆಗಿದ್ದು, ನಗರದಲ್ಲಿ ನೆಲೆಸಿರುವ ತಂದೆತಾಯಿ ನೋಡಲು ಬಂದಿದ್ದರು. ಇಂದು ಮುಂಜಾನೆ 6 ಗಂಟೆ ವಿಮಾನದಲ್ಲಿ ಪ್ರಖ್ಯಾತ ಅವರು ಹಾಕಾಂಗ್ಗೆ ಹೋಗಬೇಕಾಗಿತ್ತು.

ಈ ನಡುವೆ ಸ್ನೇಹಿತರು ಕಾಫಿ ಕುಡಿಯಲು ಕರೆದಿದ್ದರಿಂದ ಮಧ್ಯರಾತ್ರಿ ಮೈಸೂರು ರಸ್ತೆಯ ರಾಜರಾಜೇಶ್ವರಿ ಗೇಟ್ ಬಳಿ ಬೈಕ್ನಲ್ಲಿ ಬಂದು ಸ್ನೇಹಿತರನ್ನು ಮಾತನಾಡಿಸಿ ಕಾಫಿ ಕುಡಿದು ವಾಪಸ್ ಬೈಕ್ನಲ್ಲಿ ಮನೆಗೆ ಹಿಂದಿರುಗುತ್ತಿದ್ದರು.

ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಆರ್ಆರ್ನಗರದ ಜಯಣ್ಣ ಸರ್ಕಲ್ ಬಳಿಯ ಬಿಎಸ್ಎನ್ಎಲ್ ಕಚೇರಿ ಮುಂಭಾಗ ಬರುತ್ತಿದ್ದಂತೆ ಬೈಕ್ ನಿಯಂತ್ರಣತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಉರುಳಿದ ಪರಿಣಾಮ ಪ್ರಖ್ಯಾತ್ ತಲೆ, ಮುಖಕ್ಕೆ ಗಂಭೀರ ಪೆಟ್ಟಾಗಿದೆ.

ಆ ಸಂದರ್ಭದಲ್ಲಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಹೋಗುತ್ತಿದ್ದವರು ಗಮನಿಸಿ ತಕ್ಷಣ ಕಾರು ನಿಲ್ಲಿಸಿ ಪ್ರಖ್ಯಾತ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮಾರ್ಗಮಧ್ಯೆ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಸುದ್ದಿ ತಿಳಿದು ಕೆಂಗೇರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News