Monday, December 2, 2024
Homeಬೆಂಗಳೂರುಹೊತ್ತಿ ಉರಿದ ಸ್ಕೂಟರ್‌

ಹೊತ್ತಿ ಉರಿದ ಸ್ಕೂಟರ್‌

Scooter caught fire

ಬೆಂಗಳೂರು,ನ.21– ಚಲಿಸುತ್ತಿದ್ದ ಸ್ಕೂಟರ್‌ ಏಕಾಏಕಿ ಆಫ್‌ ಆಗಿದ್ದರಿಂದ ಸವಾರ ರಸ್ತೆ ಬದಿ ನಿಲ್ಲಿಸಿ ಆನ್‌ ಮಾಡುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ.ಹೆಬ್ಬಾಳದ ಭದ್ರಪ್ಪ ಲೇಔಟ್‌ ಸಮೀಪ ಇಂದು ಬೆಳಿಗ್ಗೆ 9.40ರ ಸುಮಾರಿನಲ್ಲಿ ಸ್ಕೂಟರ್‌ ಚಾಲನೆ ಮಾಡಿಕೊಂಡು ಸವಾರ ಬರುತ್ತಿದ್ದಾಗ ಏಕಾಏಕಿ ನಿಂತಿದೆ.

ಸವಾರ ರಸ್ತೆ ಬದಿ ನಿಲ್ಲಿಸಿ ಆನ್‌ ಮಾಡುತ್ತಿದ್ದಂತೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ನೋಡನೋಡುತ್ತಿದ್ದಂತೆ ಬೆಂಕಿ ಸಂಪೂರ್ಣ ಸ್ಕೂಟರ್‌ ಅನ್ನು ಆವರಿಸಿಕೊಂಡಿದ್ದರಿಂದ ಸವಾರ ಏನು ಮಾಡಬೇಕೆಂದು ತೋಚದೆ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ತಡೆದು ನಿಲ್ಲಿಸಿ ನಂತರ ಬೆಂಕಿಯನ್ನು ನಂದಿಸಿದ್ದಾರೆ.

RELATED ARTICLES

Latest News