ಡಾಕಾ,ನ.27- ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲಿನ ದಾಳಿಗಳು ಮತ್ತಷ್ಟು ತೀವ್ರಗೊಂಡಿದ್ದು, ಹಿಂಸಾತಕ ಕೃತ್ಯದಲ್ಲಿ ವಕೀಲರೊಬ್ಬರ ಹತ್ಯೆಯಾಗಿದೆ. ಬಾಂಗ್ಲಾ ದೇಶದಲ್ಲಿ ಇಸ್ಕಾನ್ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಚಿನಯ್ ಕೃಷ್ಣದಾಸ್ ಬ್ರಹಚಾರಿ ಅವರನ್ನು ಸ್ಥಳೀಯ ಪೊಲೀಸರು ಬಲವಂತವಾಗಿ ಬಂಧಿಸಿದ ಬಳಿಕ ಹಿಂಸಾಚಾರ ಭುಗಿಲೆದ್ದಿದೆ.
ಸನಾತನ ಜಾಗರಣ ಮಂಚ್, ಪುಂಡರೀಕ್ ಧಾಮದ ಪ್ರಾಂಶುಪಾಲರಾಗಿರುವ ಚಿನಯ್ ಕೃಷ್ಣದಾಸ್ ಇತ್ತೀಚೆಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹಿಂಸಾಚಾರ ಹೆಚ್ಚಾಗುತ್ತಿದೆ. ಅದನ್ನು ತಡೆಯುವಲ್ಲಿ ಮೊಹಮದ್ ಯೂನಸ್ ಅವರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದ್ದರು.
ಶೇಖ್ ಹಸೀನಾ ಅವರು ಅಧಿಕಾರದಿಂದ ನಿರ್ಗಮಿಸಿದ ಬಳಿಕ ಬಾಂಗ್ಲಾ ದೇಶದಲ್ಲಿ ಹಿಂಸಾಚಾರಗಳು ಮಿತಿಮೀರಿವೆ. ಹಿಂದೂಗಳನ್ನು ಹೊರಹಾಕಿ ಬಾಂಗ್ಲಾದಲ್ಲಿ ಶಾಂತಿ ಮೂಡಿಸಬಹುದು ಎಂದು ಭಾವಿಸಿದರೆ ಅದು ತಪ್ಪು ಕಲ್ಪನೆ. ಪ್ರಜಾಪ್ರಭುತ್ವವೇ ಇಲ್ಲದಂತಾಗುತ್ತದೆ. ಆಘ್ಘಾನಿಸ್ತಾನ, ಸಿರಿಯಾ ದೇಶಕ್ಕೆ ಆದ ಗತಿಯೇ ಬಾಂಗ್ಲಾ ದೇಶ ದೇಶಕ್ಕೂ ಎದುರಾಗಲಿದೆ ಎಂದು ಹೇಳಿದರು.
ಈ ಕಾರಣಕ್ಕೆ ಚಿನಯ್ ಕೃಷ್ಣದಾಸ್ ವಿರದ್ಧ ಪ್ರಕರಣ ದಾಖಲಿಸಿ ಬಂಧಿಸುವ ತಯಾರಿ ನಡೆದಿತ್ತು. ಈ ಕಾರಣಕ್ಕೆ ಅವರು ಭಾರತದತ್ತ ಪ್ರಯಾಣಿಸಲು ಮುಂದಾಗಿದ್ದರು. ವಿಮಾನನಿಲ್ದಾಣದಲ್ಲಿ ಚಿನಯ್ ಕೃಷ್ಣದಾಸ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಕರೆದೊಯ್ಯುವಾಗ ಪ್ರತಿಭಟನೆಗಳು ತೀವ್ರಗೊಂಡವು.
ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಲಾಠಿಚಾರ್ಜ್ ನಡೆಸಿ ಅರ್ಶ್ವವಾಯು ಶೆಲ್ಗಳನ್ನು ಸಿಡಿಸಲಾಯಿತು. ಇಂತಹ ಕೃತ್ಯದಲ್ಲಿ ಸೈಫೂಲ್ಲಾ ಆಲಿಫ್ ಎಂಬ ವಕೀಲರ ಸಂಘ ಸದಸ್ಯ ಮೃತಪಟ್ಟಿದ್ದಾರೆ. ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡುತ್ತಿದ್ದ ಆಲಿಫ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.