ನಿತ್ಯ ನೀತಿ : ಸಾಧಕರಾಗಬೇಕಾದರೆ ಸೋಲಿಗೂ ಸಿದ್ಧರಿರಬೇಕು, ತಾಳ್ಮೆ ಮತ್ತು ಛಲವೆಂಬ ಆಯುಧಗಳು ನಮ್ಮ ಜೊತೆಯಿರಬೇಕು.
ಪಂಚಾಂಗ : ಶುಕ್ರವಾರ 23-01-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಪೂ.ಭಾ. / ಯೋಗ: ಪರಿಘ / ಕರಣ: ಬವ
ಸೂರ್ಯೋದಯ : 06.47
ಸೂರ್ಯಾಸ್ತ : 6.16
ರಾಹುಕಾಲ : 10.30-12.00
ಯಮಗಂಡ ಕಾಲ : 3.00- 4.30
ಗುಳಿಕ ಕಾಲ : 7.30-9.00
ರಾಶಿ ಭವಿಷ್ಯ
ಮೇಷ: ಸಂಗಾತಿಯೊಡನೆ ಉತ್ತಮ ಬಾಂಧವ್ಯ ಹೊಂದುವಿರಿ. ವಿದ್ಯಾರ್ಥಿಗಳಿಗೆ ಅನುಕೂಲ.
ವೃಷಭ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.
ಮಿಥುನ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.
ಕಟಕ: ಸ್ವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವುಗಳಾಗಲಿವೆ.
ಸಿಂಹ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮ ವಾಗಿ ನೆರವೇರಲಿವೆ.
ಕನ್ಯಾ: ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಪೊಲೀಸ್ ಅಧಿಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ.
ವೃಶ್ಚಿಕ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.
ಧನುಸ್ಸು: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮಕರ: ಅಜೀರ್ಣ ಮತ್ತು ಉದರಕ್ಕೆ ಸಂಬಂ ಸಿದ ಅನಾರೋಗ್ಯ ಎದುರಾಗಲಿದೆ.
ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.
ಮೀನ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.
