ದಾವಣಗೆರೆ,ಡಿ.22- ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕುಂದೂರು ಗ್ರಾಮದ ಶಿಕ್ಷಕ ಕೆ.ಜಿ.ಕರಿಬಸಪ್ಪನವರು ಥೈಲ್ಯಾಂಡ್‌ನಲ್ಲಿ ನಡೆದ ಅಂತರಾಷ್ಟ್ರೀಯ ಯೋಗಾಸನಾ ಸ್ಪರ್ಧೆಯ ಶಿಬಿರದಲ್ಲಿ ದ್ವೀತಿಯ ಸ್ಥಾನ ಪಡೆದು ಬೆಳ್ಳಿ ನಾಣ್ಯ ಪದಕ ಪ್ರಶಸ್ತಿಗೆ ಭಾಜನರಾದ ಇವರನ್ನು ಹೊನ್ನಾಳಿ ಶಾಸಕರಾದ ಡಿ.ಜಿ.ಶಾಂತನಗೌಡ ಅವರು ಸನಾನಿಸಿ ಗೌರವಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯಕ್ಕನಹಳ್ಳಿಯಲ್ಲಿ 50-60 ವರ್ಷದವರ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿ ನಿಧಿಸಿದ್ದರು. ತಾಲೂಕಿಗೆ ಗೌರವತಂದ ಇವರ ಸಾಧನೆಗೆ ಶಾಸಕ ಶಾಂತನಗೌಡರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇವರನ್ನು ಬರುವ ಜ.26ರ ಗಣರಾಜ್ಯೋತ್ಸವದಂದು ತಾಲೂಕು ವತಿಯಿಂದ ಸನಾನಿಸಿ ಗೌರವಿಸಲಾಗುದು ಎಂದು ತಿಳಿಸಿದರು.