Sunday, January 25, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-01-2026)

Today's Horoscope

ನಿತ್ಯ ನೀತಿ : ಕಾಡುವ ಬಡತ ನಾಳೆ ಹೋಗಬಹುದು. ಇಲ್ಲದ ಸಿರಿತನ ಮುಂದೆ ಬರಬಹುದು. ಆದರೆ, ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ , ಪ್ರೀತಿ ಮತ್ತೆ ಬರುವುದಿಲ್ಲ.

ಪಂಚಾಂಗ : ಭಾನುವಾರ, 25-01-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ಸಪ್ತಮಿ / ನಕ್ಷತ್ರ: ರೇವತಿ / ಯೋಗ: ಸಿದ್ಧ / ಕರಣ: ಗರಜೆ
ಸೂರ್ಯೋದಯ – 06.47
ಸೂರ್ಯಾಸ್ತ – 6.17
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :

ಮೇಷ: ಸಮಾಧಾನದಿಂದ ವಿಚಾರ ವಿನಿಮಯ ಮಾಡಿಕೊಂಡರೆ ಸಮಸ್ಯೆ ಗಳಿಗೆ ಪರಿಹಾರ ಸಿಗಲಿದೆ.
ವೃಷಭ: ಆರ್ಥಿಕವಾಗಿ ಅನುಕೂಲಕರ ದಿನವಾಗಿದೆ. ಕಾರ್ಮಿಕರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ.
ಮಿಥುನ: ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಸ್ನೇಹಿತ ರಿಗೆ ಸಹಾಯ ಮಾಡುವಿರಿ.

ಕಟಕ: ಎಲ್ಲರಿಂದಲೂ ತಪ್ಪಾಗುವುದು ಸಹಜ. ಧೈರ್ಯವಾಗಿ ಮುನ್ನುಗ್ಗಬೇಕು.
ಸಿಂಹ: ಕೆಲಸಗಳು ಸರಾಗ ವಾಗಿ ನಡೆದು ಮನಸ್ಸು ನಿರಾಳ ವಾಗಲಿದೆ. ಉತ್ತಮ ದಿನ.
ಕನ್ಯಾ: ತಾಂತ್ರಿಕ ಕ್ಷೇತ್ರ ದವರಿಗೆ ಮೇಲಾಧಿಕಾರಿ ಗಳಿಂದ ಹೆಚ್ಚಿನ ಒತ್ತಡಗಳು ಎದುರಾಗಲಿವೆ.

ತುಲಾ: ಸ್ನೇಹಿತರು ಹಾಗೂ ನೆರೆಹೊರೆಯವರಿಂದ ಆರ್ಥಿಕವಾಗಿ ನೆರವು ದೊರೆಯಲಿದೆ.
ವೃಶ್ಚಿಕ: ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಬಹು ದಿನಗಳ ಕನಸು ನನಸಾಗಲಿದೆ.
ಧನುಸ್ಸು: ಇತರರಲ್ಲಿರುವ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವಿರಿ.

ಮಕರ: ಮಕ್ಕಳ ವಿಷಯದಲ್ಲಿ ಜಾಗ್ರತೆಯಿಂದಿರಿ. ಶತ್ರುಗಳ ಕಾಟ ಹೆಚ್ಚಾಗಲಿದೆ.
ಕುಂಭ: ಗಣ್ಯ ವ್ಯಕ್ತಿಗಳ ಭೇಟಿಯಿಂದ ಮನಸ್ಸಿಗೆ ಸಂತಸವಾಗಲಿದೆ. ದೂರ ಪ್ರಯಾಣ ಮಾಡುವಿರಿ.
ಮೀನ: ಮೇಲಾಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯಲಿದೆ.

RELATED ARTICLES

Latest News