ಮುಂಬೈ, ನ.2- ವಿಶ್ವಕಪ್‍ನಂತಹ ಮಹಾಟೂರ್ನಿಯಲ್ಲಿ ತವರಿನ ಅಂಗಳದಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವುದು ತುಂಬಾ ಹೆಮ್ಮೆ ತಂದಿದೆ ಎಂದು ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣ ದಲ್ಲಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ವಿಶ್ವಕಪ್ ಪಂದ್ಯದ ಟಾಸ್ ವೇಳೆ ಮಾತನಾಡಿದ ರೋಹಿತ್ ಶರ್ಮಾ, ನಾನು ಟಾಸ್ ಗೆದ್ದಿದ್ದರೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ, ಮೈದಾನ ಕೂಡ ಬ್ಯಾಟಿಂಗ್‍ಗೆ ಹೆಚ್ಚು ಸಹಕರಿಸುತ್ತಿದೆ. ಸಂಜೆ ಸಮಯದಲ್ಲಿ ಕ್ರೀಡಾಂಗಣಕ್ಕೆ ಅಳವಡಿಸಿರುವ ಲೈಟ್‍ಗಳ ನಡುವೆ ಬೌಲಿಂಗ್ ಮಾಡಲು ಹೆಚ್ಚು ತಿರುವು ಸಿಗಲಿದೆ.
ನಮ್ಮ ವೇಗದ ಬೌಲರ್‍ಗಳು ಕೂಡ ಉತ್ತಮ ಬೌಲಿಂಗ್ ಸಂಘಟಿಸುತ್ತಿದ್ದಾರೆ. ನಾನು ಹುಟ್ಟಿ ಬೆಳೆದ ಕ್ರೀಡಾಂಗಣದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಪ್ರತಿನಿಸುತ್ತಿರುವುದಕ್ಕೆ ತುಂಬಾ ಹೆಮ್ಮೆ ಎನಿಸಿದೆ' ಎಂದು ಹೇಳಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ನಯಾಪೈಸೆ ಬರ ಪರಿಹಾರ ನೀಡಿಲ್ಲ : ಪರಮೇಶ್ವರ್
ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ನಮಗೆ ಒಳ್ಳೆಯ ಆರಂಭ ಸಿಕ್ಕಿದ್ದು ಅದನ್ನು ಮುಂದುವರಿಸಿಕೊಂಡು ಹೋಗಲು ಬಯಸುತ್ತೇವೆ. ಟೂರ್ನಿಯಲ್ಲಿ ಸತತ ಗೆಲುವಿನೊಂದಿಗೆ ತಂಡವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳುವುದು ತುಂಬಾ ಸವಾಲಿನ ಕೆಲಸವಾಗಿರುವುದರಿಂದ ತಂಡದ ಪ್ಲೇಯಿಂಗ್ 11ನಲ್ಲಿ ಯಾವುದೇ ಬದಲಾವಣೆ ಮಾಡದೆ ಹಿಂದಿನ ಪಂದ್ಯದಲ್ಲಿದ್ದ ತಂಡದೊಂದಿಗೆ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸುತ್ತಿದ್ದೇವೆ’ ಎಂದು ರೋಹಿತ್ ಶರ್ಮಾ ತಿಳಿಸಿದರು.