ಬೆಂಗಳೂರು, ಜ.18- ಪಾಕಿಸ್ತಾನದ ಆತಿಥ್ಯದಲ್ಲಿ ಫೆ. 19 ರಿಂದ ನಡೆಯಲಿರುವ ಚಾಂಪಿಯನ್‌್ಸ ಟ್ರೋಫಿಗೆ ಇಂದು ಬಿಸಿಸಿಐ ಬಲಿಷ್ಠ 16 ಸದಸ್ಯರ ತಂಡವನ್ನು ಪ್ರಕಟಿಸಿದ್ದು ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಿದರೆ, ಶುಭಮನ್ ಗಿಲ್ ಗೆ ಉಪನಾಯಕನ ಪಟ್ಟ ದಕ್ಕಿತು. ಕನ್ನಡಿಗ ಲೋಕೇಶ್ ರಾಹುಲ್ ಗೂ ಸ್ಥಾನ ಕಲ್ಪಿಸಲಾಗಿದೆ.
2023ರ ಏಕದಿನ ವಿಶ್ವಕಪ್ ನಂತರ ಅನುಭವಿ ವೇಗಿ ಮೊಹಮದ್ ಶಮಿ ಅವರು ತಂಡಕ್ಕೆ ಮರಳಿದರೆ, ಜಸ್ ಪ್ರೀತ್ ಬೂಮ್ರಾಗೂ ಸ್ಥಾನ ಕಲ್ಪಿಸಲಾಗಿದೆ.
ಚಾಂಪಿಯನ್‌್ಸ ಟ್ರೋಫಿ ಭಾರತ ತಂಡ ಇಂತಿದೆ:
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯರ್, ಕೆ.ಎಲ್.ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ.