Friday, January 24, 2025
Homeಕ್ರೀಡಾ ಸುದ್ದಿ | Sportsರಣಜಿಯಲ್ಲೂ ಟೀಮ್‌ ಇಂಡಿಯಾ ಆಟಗಾರರ ಪ್ಲಾಫ್‌ ಶೋ

ರಣಜಿಯಲ್ಲೂ ಟೀಮ್‌ ಇಂಡಿಯಾ ಆಟಗಾರರ ಪ್ಲಾಫ್‌ ಶೋ

Rishabh Pant latest batter to fail after Rohit, Gill, Jaiswal on difficult first day

ನವದೆಹಲಿ, ಜ.23- ನ್ಯೂಜಿಲ್ಯಾಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಸರಣಿಗಳಲ್ಲಿ ಕಳಪೆ ಆಟ ಪ್ರದರ್ಶಿಸಿ ಮುಖಭಂಗ ಅನುಭವಿಸಿದ್ದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರರು ರಣಜಿ ಟೂರ್ನಿ ಯಲ್ಲೂ ದೊಡ್ಡ ಮೊತ್ತ ಗಳಿಸುವಲ್ಲಿ ಎಡವಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

ನಿರಾಸೆ ಮೂಡಿಸಿದ ಹಿಟ್‌ಮ್ಯಾನ್‌:
ಒಂಭತ್ತು ವರ್ಷಗಳ ನಂತರ ರಣಜಿ ಟೂರ್ನಿ ಆಡುತ್ತಿರುವ ಹಿಟ್‌ ಮ್ಯಾನ ರೋಹಿತ್‌ ಶರ್ಮಾ ಅವರ ಆಟವನ್ನು ಕಣ್ತುಂಬಿಕೊಳ್ಳಲು ಮೈದಾನಕ್ಕೆ ಬಂದಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಯಿತು. ಜಮು ಕಾಶೀರ ವಿರುದ್ಧ ದ ಪಂದ್ಯದಲ್ಲಿ ರಾಷ್ಟ್ರೀಯ ತಂಡದ ಜೊತೆಗಾರ ಯಶಸ್ವಿ ಜೈಸ್ವಾಲ್‌ ರೊಂದಿಗೆ ಅಖಾಡಕ್ಕೆ ಇಳಿದರು.

ಆದರೆ ಉಮರ್‌ ನಜಿ ಮಿರ್‌ ಅವರ ಬೌಲಿಂಗ್‌ ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ರೋಹಿತ್‌ ಶರ್ಮಾ (3 ರನ್‌)ಗೆ ವಿಕೆಟ್‌ ಒಪ್ಪಿಸಿದರೆ, ಯಶಸ್ವಿ ಜೈಸ್ವಾಲ್‌ (4 ರನ್‌) ಗೆ ಔಟಾಗಿ ಪೆವಿಲಿಯನ್‌ ತೊರೆದರು. ಅಲ್ಲದೆ ಅಜೆಂಕ್ಯಾ ರಹಾನೆ (12 ರನ್‌), ಶ್ರೇಯಸ್‌‍ ಅಯ್ಯರ್‌ (11 ರನ್‌) ಅವರು ಕೂಡ ಲಘುವಾಗಿ ವಿಕೆಟ್‌ ಒಪ್ಪಿಸಿದ್ದರಿಂದ ಭೋಜನ ವಿರಾಮದ ವೇಳೆಗೆ ಮುಂಬೈ 110/7 ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು.

ಎಡವಿದ ಗಿಲ್‌, ಪಂತ್‌:
ನವದೆಹಲಿ ಪರ 6 ವರ್ಷಗಳ ನಂತರ ರಣಜಿ ಪಂದ್ಯ ಆಡಿದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಕೇವಲ 1 ರನ್‌ ಗಳಿಸಿ ಸೌರಾಷ್ಟ್ರದ ಡಿ. ಜಡೇಜಾ ಬೌಲಿಂಗ್‌ ವಿಕೆಟ್‌ ಚೆಲ್ಲಿದರೆ, ಕರ್ನಾಟಕ ವಿರುದ್ಧದ ಪಂದ್ಯದಲ್ಲಿ ಪಂಜಾಬ್‌ ತಂಡದ ನಾಯಕತ್ವ ವಹಿಸಿರುವ ಶುಭಮನ್‌ ಗಿಲ್‌ ಕೇವಲ 4 ರನ್‌ ಗಳಿಸಿ ಅಭಿಲಾಶ್‌ ಶೆಟ್ಟಿ ಬೌಲಿಂಗ್‌ ನಲ್ಲಿ ವಿಕೆಟ್‌ ಒಪ್ಪಿಸಿರುವುದು ಚಾಂಪಿಯನ್‌್ಸ ಟ್ರೋಫಿಯಲ್ಲಿ ಈ ಆಟಗಾರರು ರನ್‌ ಗಳಿಸುತ್ತಾರೆಯೇ ಎಂಬ ಚಿಂತೆ ಮೂಡಿಸಿದೆ.

RELATED ARTICLES

Latest News