Tuesday, January 27, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-01-2026)

Today's Horoscope

ನಿತ್ಯ ನೀತಿ : `ಬಯಕೆ ಹೆಚ್ಚಾದಷ್ಟು ಬಂಧನ ಗಟ್ಟಿಯಾಗುತ್ತದೆ. ಬಯಕೆ ಕಡಿಮೆಯಾದಷ್ಟು ಮನಸ್ಸು ಹಗುರವಾಗುತ್ತದೆ. ಬಂಧನ ಕತ್ತರಿಸುವ ಕತ್ತಿ ಒಂದೇ ಅದು ಅರಿವಿನ ಬೆಳಕು’. – ಶ್ರೀ ಸಿದ್ದೇಶ್ವರ ಸ್ವಾಮೀಜಿ

ಪಂಚಾಂಗ : ಮಂಗಳವಾರ, 27-01-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ನವಮಿ / ನಕ್ಷತ್ರ: ಭರಣಿ / ಯೋಗ: ಶುಕ್ಲ / ಕರಣ: ಬಾಲವ
ಸೂರ್ಯೋದಯ – 06.47
ಸೂರ್ಯಾಸ್ತ – 6.18
ರಾಹುಕಾಲ – 3.00-4.30
ಯಮಗಂಡ ಕಾಲ – 9.00-10.30
ಗುಳಿಕ ಕಾಲ – 12.00-1.30

ರಾಶಿಭವಿಷ್ಯ :

ಮೇಷ: ಕಚೇರಿಯಲ್ಲಿ ಹಿರಿಯರಿಂದ ಪ್ರಶಂಸೆ ಸಿಗಲಿದೆ. ಆಪ್ತಮಿತ್ರನ ಹಠಾತ್‌ ಭೇಟಿಯಾಗಲಿದೆ.
ವೃಷಭ: ಅಂದುಕೊಂಡಿದ್ದ ಕೆಲಸಗಳು ಉತ್ತಮ ವಾಗಿ ನೆರವೇರುವುದರಿಂದ ನೆಮದಿ ಇರುವುದು.
ಮಿಥುನ: ಧೈರ್ಯ ಹೆಚ್ಚಾಗಿರುತ್ತದೆ. ಕಡಿಮೆ ಶ್ರಮದಲ್ಲಿ ಉತ್ತಮ ಲಾಭ ಪಡೆಯಬಹುದು.

ಕಟಕ: ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು.
ಸಿಂಹ: ಲೇವಾದೇವಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗಲಿದೆ.
ಕನ್ಯಾ: ವೈಜ್ಞಾನಿಕ ಮತ್ತು ತಾಂತ್ರಿಕ ಕ್ಷೇತ್ರದಲ್ಲಿರುವವರು ಸೋಲು ಒಪ್ಪಿಕೊಳ್ಳುವ ಮನಸ್ಥಿತಿ ರೂಢಿಸಿಕೊಳ್ಳಿ.

ತುಲಾ: ಸಂದಿಗ್ಧ ಪರಿಸ್ಥಿತಿ ಯನ್ನು ಧೈರ್ಯದಿಂದ ಎದುರಿಸಲು ಸಿದ್ಧರಾಗಿ.
ವೃಶ್ಚಿಕ: ದೈನಂದಿನ ಕೆಲಸಗಳು ನಿರಾತಂಕವಾಗಿ ನಡೆಯಲಿವೆ.
ಧನುಸ್ಸು: ಸ್ನೇಹಿತರಿಂದ ಅಪೇಕ್ಷಿಸುವ ಸಹಕಾರ ಸಿಗಲಿದೆ. ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.

ಮಕರ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಕುಂಭ: ಸಂಗಾತಿಯ ಅನಾರೋಗ್ಯದ ಸಮಸ್ಯೆ ಕಾಡಲಿದೆ. ಶತ್ರುಗಳ ಕಾಟ.
ಮೀನ: ವೃತ್ತಿಯಲ್ಲಿ ನಿಮ ಅನುಭವ ಹಾಗೂ ಪರಿಶ್ರಮಕ್ಕೆ ಸೂಕ್ತ ಸ್ಥಾನಮಾನ ಸಿಗಲಿದೆ.

RELATED ARTICLES

Latest News