Friday, February 7, 2025
Homeಜಿಲ್ಲಾ ಸುದ್ದಿಗಳು | District Newsಪರ ಸ್ತ್ರೀ ಜೊತೆ ಸಲುಗೆಯಿಂದಿದ್ದ ಪತಿಯ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ

ಪರ ಸ್ತ್ರೀ ಜೊತೆ ಸಲುಗೆಯಿಂದಿದ್ದ ಪತಿಯ ಕಾಲು ಮುರಿಯಲು ಸುಪಾರಿ ಕೊಟ್ಟ ಪತ್ನಿ

Wife Supari to break Husband legs

ಕಲಬುರಗಿ,ಫೆ.7-ಪರ ಸ್ತ್ರೀ ಜೊತೆ ಸಲುಗೆಯಿಂದ ಇದ್ದ ಪತಿಯ ಎರಡು ಕಾಲು ಮುರಿಯಲು ಆತನ ಪತ್ನಿಯೇ ಸುಪಾರಿ ನೀಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ.

ಅತ್ತರ ಕಂಪೌಡ್‌ ನಿವಾಸಿ ವೆಂಕಟೇಶ್‌ ಕಾಲು ಮುರಿದುಕೊಂಡು ನರಳುತ್ತಿದ್ದು,ಸುಪಾರಿ ನೀಡಿದ ಪತ್ನಿ ಉಮಾದೇವಿ ಹಾಗೂ ಡೀಲ್‌ ಪಡೆದಿದ್ದ ಆರೀಫ್‌, ಮನಹೋರ, ಸುನೀಲ್‌ ಎಂಬ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್‌ ಕೆಲ ತಿಂಗಳಿನಿಂದ ಮತ್ತೊಬ್ಬ ಮಹಿಳೆಯ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದ, ಹೀಗಾಗಿ ದಂಪತಿಗಳ ನಡುವೆ ಹಲವು ಬಾರಿ ಜಗಳವಾಗಿತ್ತು. ಕೊನೆಗೆ ಪತಿಯ ಎರಡೂ ಕಾಲುಗಳನ್ನ ಮುರಿದ್ರೆ ಮನೆಯಲ್ಲಿಯೇ ಬಿದ್ದಿರುತ್ತಾನೆ ಅಂತ ಪತ್ನಿ ಸ್ಕೆಚ್‌ ಹಾಕಿದ್ದಾಳೆ.

ಇದಕ್ಕಾಗಿ 5 ಲಕ್ಷಕ್ಕೆ ಸುಪಾರಿ ನೀಡಿಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ವಿಚಿತ್ರವೆಂದರೆ ದಂಪತಿ ಪುತ್ರ ಇದು ದರೋಡೆ ಪ್ರಕರಣದ ವೇಳೆ ಕಾಲು ಮುರಿದಿದೆ ಎಂದು ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾಗ ಉಮಾದೇವಿಯ ಅಸಲಿ ಬಣ್ಣ ಬಯಲಾಗಿದೆ. ಸದ್ಯ ಬ್ರಹ್ಮಪೂರ ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

RELATED ARTICLES

Latest News