Thursday, April 16, 2026
Homeರಾಷ್ಟ್ರೀಯBREAKING : ವಿಮಾನ ಪತನ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ ಸಾವು..!

BREAKING : ವಿಮಾನ ಪತನ, ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ ಸಾವು..!

Ajit Pawar plane crash : Maharashtra deputy CM, 5 others killed in plane crash in Pune

ಮುಂಬೈ, ಜ.28- ಮಹಾರಾಷ್ಟ್ರ ಉಪಮುಖ್ಯಮಂತ್ರಿ ಪ್ರಯಾಣಿಸುತ್ತಿದ್ದ ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತಕ್ಕೀಡಾಗಿ ಅಜಿತ್‌ ಪವಾರ್‌ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಆರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.ಇಂದು ಬೆಳಗ್ಗೆ 8.10ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ 9.15ರ ಸಂದರ್ಭದಲ್ಲಿ ಪುಣೆ ಸಮೀಪದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಬೆಂಕಿ ಕಾಣಿಸಿಕೊಂಡು ವಿಮಾನ ಸಂಪೂರ್ಣ ಸುಟ್ಟುಹೋಗಿದೆ.

ದುರಂತದಲ್ಲಿ ಅಜಿತ್‌ ಪವಾರ್‌ (66) ಅವರ ಇಬ್ಬರು ಆಪ್ತ ಸಹಾಯಕರು ಮತ್ತು ಪಕ್ಷದ ಹಿರಿಯ ಮುಖಂಡರು ಇದ್ದರು. ಅಪಘಾತದಲ್ಲಿ ಇಬ್ಬರು ಪೈಲೆಟ್‌ಗಳು ಕೂಡ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಸಣ್ಣ ಖಾಸಗಿ ಚಾರ್ಟರ್ಡ್‌ ವಿಮಾನದಲ್ಲಿ ಇದ್ದವರೆಲ್ಲರೂ ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ವಿಸ್ತೃತ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬಾರಾಮತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅಜಿತ್‌ ಪವಾರ್‌ ಅವರು ಮುಂಬೈನಿಂದ 45 ಎಕ್‌್ಸಆರ್‌ ಸಣ್ಣ ಚಾರ್ಟರ್ಡ್‌ ವಿಮಾನದಲ್ಲಿ ತೆರಳುತ್ತಿದ್ದರು. ವರದಿಗಳ ಪ್ರಕಾರ, ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಮುಂದಿನ ಮೇಯರ್‌ ಮತ್ತಿತರ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಮತ್ತು ಸಭೆಗಳಲ್ಲಿ ಪಾಲ್ಗೊಳ್ಳಲು ಅವರು ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

ವಿಮಾನ ಇಳಿಯುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಎಟಿಎಫ್‌ಗೆ ಮಾಹಿತಿ ನೀಡಲಾಗಿತ್ತು. ನಂತರ ವಿಮಾನ ನಿಲ್ದಾಣ ಸಮೀಪದ ಹೊಲದಲ್ಲಿಯೇ ವಿಮಾನ ಪತನಗೊಂಡಿದೆ.ವಿಮಾನವು ತಾಂತ್ರಿಕ ದೋಷದಿಂದ ಅಥವಾ ಇಳಿಯುವಾಗ ಉಂಟಾದ ಲೋಪದಿಂದ ಈ ದುರಂತ ಸಂಭವಿಸಿದೆ ಎಂದು ಶಂಕಿಸಲಾಗಿದೆ.

ಈ ದುರಂತ ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ತೀವ್ರ ಆಘಾತವನ್ನುಂಟು ಮಾಡಿದೆ. ಅಜಿತ್‌ ಪವಾರ್‌ ಅವರು ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥರಾಗಿ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಇದಲ್ಲದೆ, ಮಹಾಯುತಿ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದರು. ಈ ಘಟನೆ ಇಡೀ ಮಹಾರಾಷ್ಟ್ರವನ್ನು ಬೆಚ್ಚಿಬೀಳಿಸಿದೆ.

ಅಜಿತ್‌ ಪವಾರ್‌ ಜತೆಗೆ ಅವರ ಭದ್ರತಾ ಸಿಬ್ಬಂದಿಯೂ ಇದ್ದರು ಎಂದು ಹೇಳಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳಕ್ಕೆ ದೌಡಾಯಿಸಿರುವ ಅಗ್ನಿಶಾಮಕ ಸಿಬ್ಬಂದಿ ಹಾಗೂ ವಿಮಾನ ನಿಲ್ದಾಣದ ವಿಕೋಪ ನಿಯಂತ್ರಣ ಪ್ರಾಧಿಕಾರದ ಸಿಬ್ಬಂದಿ ಸುಟ್ಟು ಕರಕಲಾಗಿರುವ ವಿಮಾನದ ಅವಶೇಷಗಳನ್ನು ಹೊರತೆಗೆಯುತ್ತಿದ್ದಾರೆ.

ಪವಾರ್‌ ಹಿನ್ನೆಲೆ: ಅಹ್ಮದ್‌ನಗರ ಜಿಲ್ಲೆಯ ದಿಯೋಲಾಲಿ ಪ್ರವರ ಎಂಬ ಹಳ್ಳಿಯಲ್ಲಿ ಅಜಿತ್‌ ಪವಾರ್‌ ಜನಿಸಿದರು. ಅವರ ತಂದೆ ಅನಂತರಾವ್‌ ಪವಾರ್‌ ಅವರು, ಮುಂಬೈನ (ಆಗ ಬಾಂಬೆ) ಪ್ರಸಿದ್ಧ ರಾಜ್‌ಕಮಲ್‌‍ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದರು.

ಅವರ ತಂದೆಯ ಮರಣದ ನಂತರ ಅವರ ಶೈಕ್ಷಣಿಕ ಅನ್ವೇಷಣೆಗಳು ಮೊಟಕುಗೊಂಡವು. ಅವರು ಮಹಾರಾಷ್ಟ್ರ ರಾಜ್ಯ ಮಂಡಳಿಯಿಂದ ಮಾಧ್ಯಮಿಕ ಶಾಲಾ ಪ್ರಮಾಣಪತ್ರ (ಎಸ್‌‍ಎಸ್‌‍ಸಿ) ಹಂತದವರೆಗೆ ತಮ್ಮ ಔಪಚಾರಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು.ಅವರ ಚಿಕ್ಕಪ್ಪ ಶರದ್‌ ಪವಾರ್‌ 1982 ರ ಹೊತ್ತಿಗೆ ರಾಜ್ಯ ರಾಜಕೀಯದಲ್ಲಿ ಈಗಾಗಲೇ ಸ್ಥಾಪಿತ ಕಾಂಗ್ರೆಸ್‌‍ ವ್ಯಕ್ತಿಯಾಗಿದ್ದರು, ಆಗ 23 ವರ್ಷ ವಯಸ್ಸಿನವರು ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾದರು.

ಅಜಿತ್‌ ಪವಾರ್‌ ಅವರ ಪತ್ನಿ, ಮಹಾರಾಷ್ಟ್ರದ ಮಾಜಿ ಸಚಿವ ಪದಮ್‌ಸಿನ್‌ ಬಾಜಿರಾವ್‌ ಪಾಟೀಲ್‌ ಅವರ ಮಗಳು ಸುನೇತ್ರಾ ಪವಾರ್‌ ಮತ್ತು ಇಬ್ಬರು ಪುತ್ರರು, ಜೇ ಪವಾರ್‌ ಮತ್ತು ಪಾರ್ಥ್‌ ಪವಾರ್‌ ಅವರನ್ನು ಅಗಲಿದ್ದಾರೆ.

https://twitter.com/SumitHansd/status/2016369316632133849

ಮೊದಲು ಎನ್‌ಸಿಪಿಯಲ್ಲಿ ಗುರುತಿಸಿಕೊಂಡು ಪ್ರಭಾವಿ ನಾಯಕರಾಗಿ ಬೆಳೆದಿದ್ದ ಅಜಿತ್‌ ಪವಾರ್‌ ಅವರು ಶರದ್‌ ಪವಾರ್‌ ಇರುವವರೆಗೆ ನನಗೆ ಎನ್‌ಸಿಪಿಯಲ್ಲಿ ಪ್ರಮುಖ ಸ್ಥಾನ ದೊರೆಯುವುದಿಲ್ಲ ಎಂಬುದನ್ನು ಅರಿತು ಎನ್‌ಸಿಪಿ ಬಣದಿಂದ ಸಿಡಿದು ತಮದೆ ನೇತೃತ್ವದಲ್ಲಿ ಎನ್‌ಸಿಪಿ ಪಕ್ಷ ಸಂಘಟಿಸಿ ಬಿಜೆಪಿ ಹಾಗೂ ಶಿಂಧೆ ಬಣದ ಶಿವಸೇನೆಯೊಂದಿಗೆ ಸೇರಿ ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ರಚಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಅಜಿತ್‌ ಪವಾರ್‌ ಅವರು ಅಲ್ಲಿನ ಬೆಳವಣಿಗೆಗಳಿಂದ ಮನನೊಂದು ಮತ್ತೆ ತನ್ನ ಚಿಕ್ಕಪ್ಪ ಶರದ್‌ ಪವಾರ್‌ ಅವರೊಂದಿಗೆ ಮತ್ತೆ ಒಂದಾಗುವ ಚಿಂತನೆ ನಡೆಸಿದ್ದರು.

ಹೀಗಾಗಿಯೇ ಅವರು ಕಳೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಶರದ್‌ ಪವಾರ್‌ ನೇತೃತ್ವದ ಶಿವಸೇನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು.ಆದರೂ ನಿರೀಕ್ಷಿತ ಫಲಿತಾಂಶ ದೊರಕದ ಹಿನ್ನೆಯಲ್ಲಿ ಅವರು ಭವಿಷ್ಯದಲ್ಲಿ ಒಂದು ದೃಢ ನಿರ್ಧಾರ ಕೈಗೊಳ್ಳಲು ಕಾರ್ಯ ಪ್ರವೃತ್ತರಾಗಿದ್ದ ಸಂದರ್ಭದಲ್ಲೇ ವಿಧಿ ಅವರೊಂದಿಗೆ ಆಟವಾಡಿದೆ.

RELATED ARTICLES

Latest News