Thursday, April 16, 2026
Homeರಾಷ್ಟ್ರೀಯಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ

ಬಾರಾಮತಿಯಲ್ಲಿ ಅಜಿತ್‌ ಪವಾರ್‌ ಅಂತ್ಯಕ್ರಿಯೆ

Farewell, Ajit 'Dada': Pawar Family, Political Leaders At Baramati Funeral

ಬಾರಾಮತಿ, ಜ.29-ವಿಮಾನ ಅಪಘಾತದಲ್ಲಿ ಮೃತಪಟ್ಟ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರ ಅಂತ್ಯಕ್ರಿಯೆ ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಇಂದು ನಡೆಯಿತು.

ಅಂತ್ಯಕ್ರಿಯೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಸಿಎಂ ದೇವೆಂದ್ರ ಫಡ್ನವೀಸ್‌‍, ಶರದ್‌ಪವಾರ್‌ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.ಬೆಳಿಗ್ಗೆ 11 ಗಂಟೆ ಸುಮಾರಿಗೆ ಬಾರಾಮತಿಯ ವಿದ್ಯಾ ಪ್ರತಿಷ್ಠಾನದ ಕ್ರೀಡಾ ಮೈದಾನದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ಶಾಸಕರು, ಸಚಿವರು ಅಗಲಿದ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು.

ಇಂದು ಬೆಳಿಗ್ಗೆ, ಅಜಿತ್‌ ಪವಾರ್‌ ಅವರ ಪಾರ್ಥಿವ ಶರೀರವನ್ನು ಬಾರಾಮತಿಯ ಪುಣ್ಯಶ್ಲೋಕ್‌ ಅಹಲ್ಯಾದೇವಿ ಆಸ್ಪತ್ರೆಯಿಂದ ಬಾರಾಮತಿಯ ಬಳಿಯ ಅವರ ಕಟೇವಾಡಿ ಗ್ರಾಮಕ್ಕೆ ಕೊಂಡೊಯ್ಯಲಾಯಿತು.

ಶಿವಸೇನೆ-ಯುಬಿಟಿ ನಾಯಕರಾದ ಉದ್ಧವ್‌ ಠಾಕ್ರೆ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಬಾರಾಮತಿಯ ನಿವಾಸಕ್ಕೆ ಆಗಮಿಸಿ ಪವಾರ್‌ ಕುಟುಂಬವನ್ನು ಭೇಟಿ ಮಾಡಿದರು. ವಿಮಾನ ಅಪಘಾತ ಕುರಿತು ಮಹಾರಾಷ್ಟ್ರ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆ ನಡೆಸಲಿದೆ. ಇದು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಯ ವಿಚಾರಣೆಯ ಸಂಶೋಧನೆಗಳ ಆಧಾರದ ಮೇಲೆ ತನಿಖೆ ನಡೆಸುತ್ತದೆ.

15,000 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಕ್ಯಾಪ್ಟನ್‌ ಸುಮಿತ್‌ ಕಪೂರ್‌ 1,500 ಗಂಟೆಗಳ ಹಾರಾಟದ ಸಹ-ಪೈಲಟ್‌ ಕ್ಯಾಪ್ಟನ್‌ ಶಾಂಭವಿ ಪಾಠಕ್‌, ವೈಯಕ್ತಿಕ ಭದ್ರತಾ ಅಧಿಕಾರಿ ವಿದೀಪ್‌ ಜಾಧವ್‌ ಮತ್ತು ವಿಮಾನ ಸಹಾಯಕಿ ಪಿಂಕಿ ಮಾಲಿ ಈ ದುರಂತದಲ್ಲಿ ಸಾವನ್ನಪ್ಪಿದ ಇತರರು.ಅವರ ಮೃತದೇಹಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

RELATED ARTICLES

Latest News