Thursday, April 16, 2026
Homeಜಿಲ್ಲಾ ಸುದ್ದಿಗಳುರಾಯಚೂರು : ಗರ್ಭಿಣಿ ಸೊಸೆಯನ್ನು ಚಾಕುವಿನಿಂದ ಇರಿದು ಕೊಂದ ಮಾವ

ರಾಯಚೂರು : ಗರ್ಭಿಣಿ ಸೊಸೆಯನ್ನು ಚಾಕುವಿನಿಂದ ಇರಿದು ಕೊಂದ ಮಾವ

Raichur: Father-in-law stabs pregnant daughter-in-law to death

ರಾಯಚೂರು,ಜ.29- ಗರ್ಭಿಣಿ ಸೊಸೆಯನ್ನು ಮಾವ ಕೊಲೆ ಮಾಡಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.ರೇಖಾ(25)ಕೊಲೆಯಾದ ಮಹಿಳೆ.

ಆರೋಪಿ ಸಿದ್ದಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.ಕಳೆದ ಎರಡು ತಿಂಗಳಿಂದ ತವರು ಮನೆಯಲ್ಲಿದ್ದ ಸೊಸೆ ಮರಳಿ ಮನೆಗೆ ಬಂದಾಗ ಜಗಳವಾಗಿತ್ತು.ಮನೆಯವರೆಲ್ಲರು ಹೊರಗೆ ಹೋಗಿದ್ದಾಗ ಮಾವ ಸಿದ್ದಪ್ಪ ಮತ್ತೆ ಜಗಳ ತೆಗೆದು ಅದು ವಿಕೋಪಕ್ಕೆ ತಿರುಗಿ ಏಕಾಏಕಿ ಚಾಕುವಿನಿಂದ ರೕಖಾಗೆ ಇರಿದು ಅಲ್ಲಿಂದ ಪರಾರಿಯಾಗಿದ್ದ.

ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದು ನರಳಾಡಿ ರೇಖಾ ನಡು ರಸ್ತೆಯಲ್ಲಿ ಪ್ರಾಣ ಬಿಟ್ಟಿದ್ದಾರೆ.ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಆರೋಪಿಯನ್ನುವಶಕ್ಕೆ ಪಡೆದಿದ್ದಾರೆ. ರೕಖಾ 4 ತಿಂಗಳ ಗರ್ಬಿಣಿ ಎಂದು ತಿಳಿದು ಬಂದಿದ್ದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಕವಿತಾಳ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

RELATED ARTICLES

Latest News