ಬೊಗೋಟಾ, ಜ.29- ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದ ಗ್ರಾಮೀಣ ಪ್ರದೇಶದಲ್ಲಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ,ಅದರಲ್ಲಿದ್ದ ಎಲ್ಲಾ 15 ಜನರು ಸಾವನ್ನಪ್ಪಿದ್ದಾರೆ.
ಸಟೇನಾದ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ ಸ್ಥಳೀಯ ಅಧಿಕಾರಿಗಳು ಪ್ರಯಾಣಿಸುತ್ತಿದ್ದರು.ಕೊಲಂಬಿಯಾದ ಸಾರಿಗೆ ಸಚಿವಾಲಯ ಹೇಳಿಕೆಯಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದನ್ನು ಖಚಿತ ಪಡಿಸಿ,ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದೆ.
4709 ನೋಂದಣಿ ಸಂಖ್ಯೆಯನ್ನು ಹೊಂದಿರುವ ವಿಮಾನವು ಸ್ಥಳೀಯ ಸಮಯ ಬೆಳಿಗ್ಗೆ 11:42 ಕ್ಕೆ ಇಲಾಖೆಯ ರಾಜಧಾನಿ ಕುಕುಟಾದಲ್ಲಿರುವ ವಿಮಾನ ನಿಲ್ದಾಣದಿಂದ ಪರ್ವತಗಳಿಂದ ಸುತ್ತುವರೆದಿರುವ ಪುರಸಭೆಯಾದ ಓಕಾನಾಗೆ ಹೊರಟಿತು,
ಸಾಮಾನ್ಯವಾಗಿ ಸುಮಾರು 40 ನಿಮಿಷಗಳ ಪ್ರಯಾಣವಾಗಿತ್ತು.ವಿಮಾನವು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಾಯು ಸಂಚಾರ ನಿಯಂತ್ರಣದೊಂದಿಗೆ ಸಂಪರ್ಕ ಕಡಿತಗೊಂಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಣ್ಣ ವಿಮಾನದಲ್ಲಿ ಇಬ್ಬರು ಪೈಲೆಟ್‌ಗಳಿದ್ದು,13 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.ಘಟನೆಗೆ ಕಾರಣ ತಿಳಿಯಲು ತನಿಖಾ ತಂಡ ಸ್ಥಳದಲ್ಲಿ ಪರಿಶೀಲನೆ ನಡೆಸಿದೆ.
