ಬೆಂಗಳೂರು,ಜ.29-ಸಾಫ್ಟ್ ವೇರ್ ಎಂಜಿನಿಯರ್ವೊಬ್ಬರು ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸಲು ಹೋಗಿ 2.32 ಲಕ್ಷ ರೂ. ಹಣ ಕಳೆದುಕೊಂಡು ಸೈಬರ್ ವಂಚನೆಗೆ ಒಳಗಾಗಿದ್ದಾರೆ.
ಸಂಚಾರ ಉಲ್ಲಂಘನೆಗಾಗಿ ಟೆಕ್ಕಿಗೆ ಜ.26 ರಂದು 500 ರೂ. ಚಲನ್ ಬಾಕಿ ಇದೆ ಎಂಬ ಮೆಸೇಜ್ ಬಂದಿದೆ. ಆ ಮೆಸೇಜ್ನಲ್ಲಿ ಹಣ ಪಾವತಿಯ ಲಿಂಕ್ ಸಹ ಇತ್ತು. ಅದನ್ನು ಗಮನಿಸಿದ 57 ವರ್ಷದ ವೈಟ್ಫೀಲ್್ಡನ ಟೆಕ್ಕಿಯೊಬ್ಬರು ಟೆಕ್ಕಿ ಲಿಂಕ್ ಕ್ಲಿಕ್ ಮಾಡಿದಾಗ ದಂಡ ಪಾವತಿ ವಿವರಗಳನ್ನು ಕೇಳುವ ವೆಬ್ಸೈಟ್ ಆನ್ ಆಗಿದೆ. ಹಾಗಾಗಿ ಅವರು ತಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಿಂದ ಬರೋಬ್ಬರಿ 2,32,272ರೂ. ಡೆಬಿಟ್ ಆಗಿದೆ. ತಕ್ಷಣ ಗಮನಕ್ಕೆ ಬಂದು ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.ಚಲನ್ ಪಾವತಿ ಹೆಸರಿನಲ್ಲಿ ಬಂದ ನಕಲಿ ವೆಬ್ಸೈಟ್ ಎಂಬುವುದು ಗಮನಕ್ಕೆ ಬಾರದೆ ಹಣ ಕಳೆದುಕೊಂಡಿರುವ ಅವರು ಇದೀಗ ವೈಟ್ಫೀಲ್್ಡ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಸೈಬರ್ ವಂಚಕರಿಗಾಗಿ ತನಿಖೆ ಕೈಗೊಂಡಿದ್ದಾರೆ.
ದಂಡ ಪಾವತಿಗೆ ಸಿಕ್ಕ ಸಿಕ್ಕ ಲಿಂಗ್ ಕ್ಲಿಕ್ ಮಾಡದಿರಿ:
ಈ ಬಗ್ಗೆ ಸಂಚಾರಿ ಪೊಲೀಸರು ಪ್ರತಿಕ್ರಿಯಿಸಿ ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ಚಲನ್ಗಳ ಕ್ಲಿಯರೆನ್ಸ್ ಗಾಗಿ ನಾವು ಅಂತಹ ಸಂದೇಶಗಳನ್ನು ಕಳುಹಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.ಅಪರಿಚಿತ ಸಂಖ್ಯೆಯಿಂದ ಬರುವ ಲಿಂಕ್ಗಳು, ದಂಡ, ಇಲ್ಲವೇ ಬಹುಮಾನ ಎಂಬ ಸಂದೇಶಗಳನ್ನು ಎಂದಿಗೂ ಸಾರ್ವಜನಿಕರು ನಂಬಬಾರದು, ಯಾವುದೇ ಸಂದರ್ಭದಲ್ಲಿ ಲಿಂಕ್ ಕ್ಲಿಕ್ ಮಾಡಿ ಬ್ಯಾಂಕ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಬೇಡಿ ಎಂದು ಸೂಚಿಸಿದ್ದಾರೆ.
ಒಂದು ವೇಳೆ ನಿಮಗೆ ಸಂಶಯ ಬಂದಲ್ಲಿ ನೇರವಾಗಿ ಅಧಿಕೃತ ವೆಬ್ಸೈಟ್ ಅಥವಾ ಸಂಬಂಧಿಸಿದ ಇಲಾಖೆಯನ್ನು ಸಂಪರ್ಕಿಸುವುದು ಸುರಕ್ಷಿತ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
