ತಿ.ನರಸೀಪುರ,ಏ.8- ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಘಟನೆ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಹೆಮ್ಮಿಗೆ ರಸ್ತೆಯಲ್ಲಿ ಸಂಭವಿಸಿದೆ.
ಪಟ್ಟಣದ ನಿವಾಸಿ ಹೆಮ್ಮಿಗೆ ರಸ್ತೆಯಲ್ಲಿ ವಾಸವಾಗಿರುವ ನಾಗರಾಜು ಎಂಬುವರ ಪುತ್ರಿ ನಂದಿನಿ(28) ಹೊಟ್ಟೆ ನೋವು ತಡೆಯಲಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಎಂ.ಕಾಂ ವ್ಯಾಸಾಂಗ ಮಾಡಿ ಮನೆಯಲ್ಲಿಯೇ ಇದ್ದನಂದಿನಿಗೆ ಆಗಾಗ್ಗೆ ಹೊಟ್ಟೆ ನೋವು ಬರುತ್ತಿತ್ತೆನ್ನಲಾಗಿದ್ದು,ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆದಿದ್ದಳು.
ಇತ್ತೀಚಿಗೆ ಹೊಟ್ಟೆ ನೋವು ಜಾಸ್ತಿಯಾದ ಹಿನ್ನೆಲೆಯಲ್ಲಿ ಬೇಸತ್ತ ಆಕೆ ತಾನು ಮಲಗುವ ಕೋಣೆಯಲ್ಲಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾಳೆ. ಈ ಸಂಬಂಧ ಮೃತಳ ತಂದೆ ನಾಗರಾಜು ಪೊಲೀಸರಿಗೆ ದೂರು ನೀಡಿದ್ದು, ಮುಖ್ಯ ಪೇದೆ ನಾಗರಾಜು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ