ದಾವಣಗೆರೆ,ಫೆ.2- ಚಿಗಟೀರಿ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಅರೋಪಿಗಳ ಬಂಧನಕ್ಕೆ ಹೋಗಿದ್ದಾಗ ಪೊಲೀರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ವಾಗ್ವಾದದ ನಡೆಸಿದ್ದಾರೆ.
ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಮಾತಿನ ಚಕಮಕಿ ವಿಡಿಯೋಗಳು ವೈರಲ್ ಆಗಿವೆ. ಚಲಬಿಡದೆ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗಿಳಿದ ಸಿಪಿಐ ಗಾಯಿತ್ರಿ ಅವರನ್ನು ತಡೆದು ದೃಶ್ಯಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜನ ಅವರು ಗರಂ ಆದ್ದು ಯಾರೇ ಆದರೂ ಮುಲಾಜಿಲ್ಲದೆ ಆರೋಪೊಗಳನ್ನು ಒದ್ದು ಒಳಗೆ ಹಾಕಿ ಎಂದು ಹೇಳಿದ್ದಾರೆ.
ಸ್ಥಳಿಇಯ ಕಾಂಗ್ರೆಸ್ ಮುಖಂಡ ಅಯೂಬ್ ಪೈಲ್ವಾನ್ ಅವರ ಮಕ್ಕಳಾದ ಹಸೇನ್, ಹುಸೇನ್ ಹಾಗೂ ಅವರ ಸ್ನೇಹಿತರ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಲಾಟೆ ಬಿಡಿಸಲು ಸಿಪಿಐ ಗಾಯಿತ್ರಿ, ಕಾನ್ಸ್ ಟೇಬಲ್ ಹರೀಶ್ ಹಾಗೂ ಕೆಂಚಪ್ಪ ಅವರು ತೆರಳಿದ್ದರು.
ಈ ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಅಯೂಬ್ ಅವರ ಮಕ್ಕಳು ಹಾಗೂ ಸ್ನೇಹಿತರು ಹಲ್ಲೆ ನಡೆಸಿದ್ದರು. ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕೆ ಸಿಪಿಐ ಗಾಯತ್ರಿಯವರು ಕೆರಳಿ ಕೆಂಡವಾಗಿದ್ದರು. ಆರೋಪಿಗಳ ಬಂಧನ ಆಗುವವರೆಗೂ ಇಲ್ಲಿಂದ ತೆರಳುವುದಿಲ್ಲ ಎಂದು ಪಟ್ಟು ಹಿಡಿದ್ದಾಗ ಪೊಲೀಸರು ಮೇಲೆ ಅರೋಪಿಸಾಲಗಿದೆ.
ಇದಕ್ಕೆ ಸಿಪಿಐ ಗಾಯಿತ್ರಿ, ಏನು ಬೇಕಾದ್ರೂ ಅರೋಪ ಮಾಡಿ, ಬೇಕಾದ್ರೆ ನೀನು ದೂರು ಕೊಡು ಎಂದು ಪ್ರಕರಣದಲ್ಲಿ ಫೈಲ್ವಾನ್ ಪುತ್ರ ಹಸೇನ್ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಇನ್ನೊಬ್ಬ ಪುತ್ರ ಹುಸೇನ್ ತಲೆಮರೆಸಿಕೊಂಡಿದ್ದು ಆತನಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಘಟನೆಗೆ ಕುರಿತು ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
