Thursday, April 16, 2026
Homeಬೆಂಗಳೂರುಬೆಂಗಳೂರು : ಮದ್ಯಸೇವಿಸಿ ಅಪಾರ್ಟ್‌ಮೆಂಟ್‌ನಿಂದ ಬಿದ್ದ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿ ಸಾವು

ಬೆಂಗಳೂರು : ಮದ್ಯಸೇವಿಸಿ ಅಪಾರ್ಟ್‌ಮೆಂಟ್‌ನಿಂದ ಬಿದ್ದ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿ ಸಾವು

SSLC student dies after falling from apartment after drinking alcohol

ಬೆಂಗಳೂರು,ಫೆ.2- ಮದ್ಯಪಾನ ಮಾಡಿದ್ದ ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿ ಅಪಾರ್ಟ್‌ಮೆಂಟ್‌ನ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿನಗರ ಪೊಲೀಸ್‌‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಡಾ. ವಿಷ್ಣುವರ್ಧನ್‌ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವೊಂದರ ನಿವಾಸಿ 15 ವರ್ಷದ ವಿದ್ಯಾರ್ಥಿ ಮೃತಪಟ್ಟಿರುವುದು. ಎಸ್‌‍ಎಸ್‌‍ಎಲ್‌ಸಿ ವಿದ್ಯಾರ್ಥಿಗಳಿಗೆ ಜ.31 ರಂದು ಶಾಲೆಯಲ್ಲಿ ಫೇರ್‌ವೆಲ್‌ ಡೇ ಹಮಿಕೊಳ್ಳಲಾಗಿತ್ತು. ಬಹುತೇಕ ವಿದ್ಯಾರ್ಥಿಗಳು ಕಾರ್ಯಕ್ರಮ ಮುಗಿಸಿಕೊಂಡು ತಮ ತಮ ಮನೆಗೆ ತೆರಳಿದ್ದಾರೆ.

ಕೆಲ ವಿದ್ಯಾರ್ಥಿ ಸ್ನೇಹಿತರು ಸೇರಿಕೊಂಡು ಅಂದು ಸಂಜೆ ಪಬ್‌ವೊಂದಕ್ಕೆ ಹೋಗಿ ಮದ್ಯಪಾನ ಹಾಗೂ ಧೂಮಪಾನ ಮಾಡಿ ಮನೆಗೆ ಹೋಗಿದ್ದಾರೆ.ಈ ಪೈಕಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ವಿದ್ಯಾರ್ಥಿ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಇದು ಆಕಸಿಕವೇ ಅಥವಾ ಪೋಷಕರ ಭಯದಿಂದ ಆತಹತ್ಯೆ ಮಾಡಿಕೊಂಡನೇ, ಇಲ್ಲವೇ ಮದ್ಯಸೇವನೆಯಿಂದ ತೂರಾಡಿಕೊಂಡು ಬಿದ್ದಿರ ಬಹುದೇ ಎಂಬುವುದು ಪೊಲೀಸರ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

ಪೊಲೀಸರ ತನಿಖೆ ವೇಳೆ ಈ ವಿದ್ಯಾರ್ಥಿ ಮದ್ಯಪಾನ ಹಾಗೂ ಧೂಮಪಾನ ಮಾಡಿರುವುದು ಗೊತ್ತಾಗಿದೆ. ಅದಕ್ಕೆ ಅವಕಾಶ ಮಾಡಿಕೊಟ್ಟ ಪಬ್‌ನ ಮಾಲೀಕರು ಹಾಗೂ ಸಿಬ್ಬಂದಿಗಳ ವಿರುದ್ಧ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

RELATED ARTICLES

Latest News