Homeರಾಜ್ಯಭಾರತೀಯ ಯೋಗಕ್ಕೆ ಜಾಗತಿಕ ಮನ್ನಣೆ : ಪ್ರಶಾಂತಿ ಕುಟೀರಮ್‌ ಪ್ರಧಾನಿ ಮೋದಿ ಭಾಷಣ

ಭಾರತೀಯ ಯೋಗಕ್ಕೆ ಜಾಗತಿಕ ಮನ್ನಣೆ : ಪ್ರಶಾಂತಿ ಕುಟೀರಮ್‌ ಪ್ರಧಾನಿ ಮೋದಿ ಭಾಷಣ

ಬೆಂಗಳೂರು,ನ.13-ಭಾರತದ ನಿರಂತರ ಉಪಕ್ರಮಗಳ ಫಲವಾಗಿ ಯೋಗವು ಇಂದು ಜಾಗತಿಕವಾಗಿ ಜನಪ್ರಿಯವಾಗಿದ್ದು, ವಿಶ್ವದಾದ್ಯಂತ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು. ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಪ್ರಶಾಂತಿ ಕುಟೀರಮ್‌ನಲ್ಲಿ ನಡೆದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯೋಗವು ಭಾರತವನ್ನು ಅರ್ಥಮಾಡಿಕೊಳ್ಳುವ ಪ್ರಮುಖ ದ್ವಾರವಾಗಿದೆ.ವಿದೇಶ ಪ್ರವಾಸದ ವೇಳೆ ವಿವಿಧ ದೇಶಗಳ ಜನರು ತಮೊಂದಿಗೆ ನಡೆಸುವ ಸಂಭಾಷಣೆಯಲ್ಲಿಯೂ ಯೋಗ ಪ್ರಮುಖ ವಿಷಯವಾಗಿ ಕಾಣಿಸಿಕೊಳ್ಳುತ್ತಿದೆ. ಱಱನಾನು ಯಾವುದೇ ದೇಶಕ್ಕೆ ಹೋದರೂ, ಜನರು ನನ್ನೊಂದಿಗೆ ಊಟ ಮತ್ತು ಭೋಜನದ ಸಮಯದಲ್ಲಿ ಯೋಗದ ಬಗ್ಗೆ ಚರ್ಚಿಸುತ್ತಾರೆ ಎಂದು ಹೇಳಿದರು.

ಕರ್ನಾಟಕವು ಯೋಗ ಕ್ಷೇತ್ರಕ್ಕೆ ಹಲವು ಶ್ರೇಷ್ಠ ಶಿಕ್ಷಕರು ಮತ್ತು ವಿದ್ವಾಂಸರನ್ನು ನೀಡಿದ ನಾಡು. ಬೆಂಗಳೂರಿನಲ್ಲಿ ಯೋಗದ ಅದ್ಭುತ ಶಕ್ತಿಯನ್ನು ಅನುಭವಿಸುವ ಅವಕಾಶ ತಮಗೆ ದೊರೆತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಪ್ರಯತ್ನಗಳಿಂದಾಗಿ ಜಗತ್ತಿನಾದ್ಯಂತ ಅಂತರರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿರುವುದು ದೇಶಕ್ಕೆ ಹೆಮೆಯ ಸಂಗತಿ ಎಂದರು.

ಯೋಗವು ಕೇವಲ ದೈಹಿಕ ವ್ಯಾಯಾಮವಲ್ಲ; ಭಾರತದ ಆಧ್ಯಾತಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಶಕ್ತಿಯುತ ಮಾಧ್ಯಮವಾಗಿದೆ ಎಂಬ ಸಂದೇಶವನ್ನು ಪ್ರಧಾನಿ ತಮ ಭಾಷಣದಲ್ಲಿ ಒತ್ತಿ ಹೇಳಿದರು.ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು ಸರ್ಕಾರದ ಉದ್ದೇಶವಾಗಿದೆ. ಸ್ವಾತಂತ್ರ್ಯಾನಂತರ ಮೊದಲ ಬಾರಿಗೆ ಪ್ರತ್ಯೇಕ ಆಯುಷ್‌ ಸಚಿವಾಲಯ ಸ್ಥಾಪಿಸಲಾಗಿದ್ದು, ಆಯುಷ್‌ ಉತ್ಪನ್ನಗಳ ರಫ್ತು ಕೂಡ ಹೆಚ್ಚಾಗಿದೆ ಎಂದು ಪ್ರಧಾನಿ ಹೇಳಿದರು. ಅರಿಶಿನದ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಉತ್ತೇಜನ ನೀಡಲು ರಾಷ್ಟ್ರೀಯ ಅರಿಶಿನ ಮಂಡಳಿ ಸ್ಥಾಪಿಸಿರುವುದನ್ನೂ ಅವರು ಉಲ್ಲೇಖಿಸಿದರು.

ಮುಂದಿನ 25 ವರ್ಷಗಳಲ್ಲಿ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯೊಂದಿಗೆ 140 ಕೋಟಿ ಭಾರತೀಯರು ಮುನ್ನಡೆಯುತ್ತಿದ್ದಾರೆ.ಕಳೆದ 12 ವರ್ಷಗಳಲ್ಲಿ ಭಾರತ ತನ್ನ ಸಂಸ್ಕೃತಿ, ಜ್ಞಾನ ಮತ್ತು ವಿಜ್ಞಾನವನ್ನು ವಿಶ್ವದ ಮುಂದೆ ಆತವಿಶ್ವಾಸದಿಂದ ಮಂಡಿಸುತ್ತಿದೆ. ಇದರ ಫಲವಾಗಿ ವಿಶ್ವದಾದ್ಯಂತ ಯೋಗದ ಜನಪ್ರಿಯತೆ ಹೆಚ್ಚಿದ್ದು, ಪ್ರತಿವರ್ಷ ವಿಶ್ವ ಯೋಗ ದಿನವನ್ನು ಅನೇಕ ರಾಷ್ಟ್ರಗಳು ಆಚರಿಸುತ್ತಿವೆ. ಯೋಗವು ಜಗತ್ತಿಗೆ ಭಾರತದ ಪರಿಚಯ ಮಾಡಿಸುವ ಪ್ರಮುಖ ಸೇತುವೆಯಾಗಿದೆ ಎಂದು ಹೇಳಿದರು.

ಸ್ವಾಮಿ ವಿವೇಕಾನಂದರಂತಹ ರಾಷ್ಟ್ರೀಯ ಆಧ್ಯಾತಿಕ ನಾಯಕರ ಪ್ರೇರಣೆಯಿಂದ ಪ್ರಶಾಂತಿ ಕುಟೀರದಂತಹ ಸಂಸ್ಥೆಗಳು ಬೆಳೆದಿವೆ. ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ ಆಧುನಿಕ ವೈಜ್ಞಾನಿಕ ಮಾನದಂಡಗಳ ಮೂಲಕ ಅದರ ಪರಿಣಾಮಕಾರಿತ್ವವನ್ನು ಪರಿಶೀಲಿಸುವ ಸಂಶೋಧನೆಯನ್ನೂ ಸಂಸ್ಥೆ ನಡೆಸಿದೆ ಎಂದು ತಿಳಿಸಿದರು.

ಸಮಾಜಕ್ಕೆ ಎರಡೂ ಕೈಗಳಿಂದ ಕೊಟ್ಟರೆ ಸಮಾಜ ಲಕ್ಷಾಂತರ ಕೈಗಳಿಂದ ಮರಳಿ ನೀಡುತ್ತದೆ ಎಂಬ ಶೇಷಾದ್ರಿ ಅವರ ಮಾತನ್ನು ಉಲ್ಲೇಖಿಸಿದರು. ಜನರ ಸೇವೆ ಮಾಡುವ ಸಂದರ್ಭದಲ್ಲಿ ಅವರ ಆಶೀರ್ವಾದ ದೊರೆತಿರುವುದು ತಮ ಜೀವನದ ದೊಡ್ಡ ಆಸ್ತಿಗಳಲ್ಲೊಂದು ಎಂದು ಹೇಳಿದರು.

ಪ್ರಶಾಂತಿ ಕುಟೀರದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ವರ್ಷಗಳ ನಂಟಿದೆ. ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದ ಅವರು ಯೋಗಾಭ್ಯಾಸ ಹಾಗೂ ಧ್ಯಾನದ ಕುರಿತು ಮಾರ್ಗದರ್ಶನ ಪಡೆದಿದ್ದರು. ಪ್ರಶಾಂತಿ ಕುಟೀರದ ಕುಲಪತಿ ಡಾ. ನಾಗೇಂದ್ರ ಅವರು ಮೋದಿಗೆ ಯೋಗಾಭ್ಯಾಸದ ಕುರಿತು ಮಾರ್ಗದರ್ಶನ ನೀಡಿದ್ದರು. ಪ್ರಧಾನಿಯಾದ ಬಳಿಕವೂ ಅವರು ಇಲ್ಲಿಗೆ ಭೇಟಿ ನೀಡಿದ್ದರು.

ಪ್ರಶಾಂತಿ ಕುಟೀರದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದ ಹೊಂಗಸಂದ್ರ ವೆಂಕಟರಾಮಯ್ಯ ಶೇಷಾದ್ರಿ (ಹೆಚ್‌.ವಿ. ಶೇಷಾದ್ರಿ) ಅವರನ್ನೂ ಪ್ರಧಾನಿ ಸರಿಸಿ, ಸರಳತೆ, ವಿನಯ ಮತ್ತು ಸಮಾಜ ಸೇವೆಯ ಮನೋಭಾವಕ್ಕೆ ಶೇಷಾದ್ರಿ ಅವರು ಮಾದರಿಯಾಗಿದ್ದರು. ಜನರನ್ನು ಒಗ್ಗೂಡಿಸಿ ದೇಶ ಸೇವೆಗೆ ಸಿದ್ಧಪಡಿಸುವುದರಲ್ಲಿ ಅವರು ನಂಬಿಕೆ ಇಟ್ಟಿದ್ದರು ಎಂದು ಮೋದಿ ಹೇಳಿದರು.

ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನವನ್ನು ಹಲವು ವರ್ಷಗಳ ಕಾಲ ತಾವು ಪಡೆದಿದ್ದು, ಅವರೊಂದಿಗೆ ಕಳೆದ ಕ್ಷಣಗಳು ಇಂದಿಗೂ ಅಮೂಲ್ಯ ನೆನಪುಗಳಾಗಿವೆ ಎಂದು ಕೊಂಡಾಡಿದರು. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ಪ್ರಶಾಂತಿ ಕುಟೀರದ ಸುತ್ತಮುತ್ತ ಬಿಗಿ ಪೊಲೀಸ್‌‍ ಭದ್ರತೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ರಿಜ್ವಾನ್‌ ಅರ್ಷದ್‌, ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಆರ್‌ಎಸ್‌‍ಎಸ್‌‍ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಸುವರ್ಣ ಮಹೋತ್ಸವದ ಅಂಗವಾಗಿ ಪ್ರಶಾಂತಿ ಕುಟೀರದ ಆಡಳಿತಾತಕ ಕಟ್ಟಡಕ್ಕೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕೇರಳದ ತಿರುವನಂತಪುರಂನ ಎಸ್‌‍-ವ್ಯಾಸ ಸಂಸ್ಥೆಯ ನೂತನ ಕ್ಯಾಂಪಸ್‌‍ಗೂ ಚಾಲನೆ ನೀಡಲಾಯಿತು. ಕಾರ್ಯಕ್ರಮದ ವೇಳೆ ಪ್ರಧಾನಿ ಮೋದಿ ಅವರು ಕೇರಳಂ ತಿರುವನಂತಪುರದಲ್ಲಿ ಡಿಜಿಟಲ್‌ ಮಾಧ್ಯಮದ ಮೂಲಕ ಎಸ್‌‍-ವ್ಯಾಸದ ಸುವರ್ಣ ಮಹೋತ್ಸವ ಆಡಳಿತಾತಕ ಬ್ಲಾಕ್‌ಗೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಎಸ್‌‍-ವ್ಯಾಸದ ಆಫ್‌-ಕ್ಯಾಂಪಸ್‌‍ ಅನ್ನೂ ಉದ್ಘಾಟಿಸಿದರು.

RELATED ARTICLES

Latest News