Homeಬೆಂಗಳೂರುಹಿರಿಯ ನಟಿ ಉಮಾಶ್ರೀ ಸೇರಿ 50 ಕಲಾವಿದರಿಗೆ ಕಲಾ ಸಾಮ್ರಾಟ್‌ ಪ್ರಶಸ್ತಿ

ಹಿರಿಯ ನಟಿ ಉಮಾಶ್ರೀ ಸೇರಿ 50 ಕಲಾವಿದರಿಗೆ ಕಲಾ ಸಾಮ್ರಾಟ್‌ ಪ್ರಶಸ್ತಿ

Kala Samrat Award to 50 Artists Including Umashree

ಬೆಂಗಳೂರು, ಫೆ.2- ಚಿತ್ರನಟಿ ಉಮಾಶ್ರೀ ಸೇರಿದಂತೆ 50 ರಂಗಭೂಮಿ ಕಲಾವಿದರಿಗೆ ಕಲಾ ಸಾಮ್ರಾಟ್‌ ಸ್ಟಾರ್‌ ಪ್ರಶಸ್ತಿ ಪ್ರದಾನ ಮಾಡಲಾಯಿತು.ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಓಂ ಶ್ರೀ ಸಾಯಿ ರಾಂ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಖ್ಯಾತ ಹಾಸ್ಯ ನಟಿ ಉಮಾಶ್ರೀ ಸೇರಿದಂತೆ 50 ರಂಗಭೂಮಿ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉಮಾಶ್ರೀ, ನಟ ಗಂಡಸಿ ಸದಾನಂದ ಸ್ವಾಮಿ ಸೇರಿದಂತೆ 50 ಕಲಾವಿದರಿಗೆ ಕಲಾ ಸಾಮ್ರಾಟ್‌ ಸ್ಟಾರ್‌ ಅವಾರ್ಡ್‌್ಸ ಪ್ರದಾನ ಮಾಡಲಾಯಿತು.ಓಂ ಶ್ರೀ ಸಾಯಿ ರಾಂ ಸಾಂಸ್ಕೃತಿಕ ಕಲಾ ವೇದಿಕೆ ಪ್ರಧಾನ ಕಾರ್ಯದರ್ಶಿ, ರಂಗಭೂಮಿ ನಟಿ ಮಂಜುಳ.ಎಸ್‌‍ ಹಾಗೂ ಶ್ರೀ ಕ್ಷೇತ್ರ ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಸಿದ್ಧರಾಜು ಸ್ವಾಮೀಜಿ, ಗೋಲ್ಡನ್‌ ಸುರೇಶ್‌, ಗಾಯಕ ಶಶಿಧರ್‌ ಕೋಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

RELATED ARTICLES
spot_img

Latest News