Homeಕ್ರೀಡಾ ಸುದ್ದಿಶ್ರೀಲಂಕಾ ಟೆಸ್ಟ್‌: ಕೆ.ಎಲ್‌‍. ರಾಹುಲ್‌ ನಾಯಕತ್ವದಲ್ಲಿ ಮೈದಾನಕ್ಕಿಳಿದ ಭಾರತ

ಶ್ರೀಲಂಕಾ ಟೆಸ್ಟ್‌: ಕೆ.ಎಲ್‌‍. ರಾಹುಲ್‌ ನಾಯಕತ್ವದಲ್ಲಿ ಮೈದಾನಕ್ಕಿಳಿದ ಭಾರತ

ಕೊಲಂಬೊ, ಆ.7- ಶ್ರೀಲಂಕಾ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ಶುಭ್‌ಮನ್‌‍ ಗಿಲ್‌‍ಅವರು ಬಲಗೈ ಉಂಗುರ ಬೆರಳಿಗೆ ಗಾಯವಾಗಿರುವ ಕಾರಣ, ಶ್ರೀಲಂಕಾ ಕ್ರಿಕೆಟ್‌ ಮಂಡಳಿ ಇಲೆವೆನ್‌ ವಿರುದ್ಧ ಇಂದು ಆರಂಭವಾದ ಮೂರು ದಿನಗಳ ಅಭ್ಯಾಸ ಪಂದ್ಯದ ಮೊದಲ ದಿನ ಮೈದಾನಕ್ಕಿಳಿಯಲಿಲ್ಲ. ಗುರುವಾರ ನಡೆದ ಅಭ್ಯಾಸದ ವೇಳೆ ಗಿಲ್‌ ಅವರ ಬಲಗೈ ಉಂಗುರ ಬೆರಳಿಗೆ ಪೆಟ್ಟಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಮೊದಲ ದಿನದ ಆಟದಿಂದ ದೂರವಿಡಲಾಗಿದೆ. ಅವರ ಅನುಪಸ್ಥಿತಿಯಲ್ಲಿ ಅನುಭವಿ ಬ್ಯಾಟರ್‌ ಕೆ.ಎಲ್‌‍. ರಾಹುಲ್‌‍ ತಂಡವನ್ನು ಮುನ್ನಡೆಸುತ್ತಿದ್ದಾರೆ.


ಈ ಪಂದ್ಯದಲ್ಲಿ ಟಾಸ್‌‍ ಗೆದ್ದ ಎಸ್‌‍ಎಲ್‌ಸಿ ಇಲೆವೆನ್‌ ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದೆ. ಈ ಕುರಿತು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಸಾಮಾಜಿಕ ಜಾಲತಾಣ ಎಕ್‌್ಸ ನಲ್ಲಿ ಪ್ರಕಟಣೆ ನೀಡಿ, ನಾಯಕ ಶುಭ್‌ಮನ್‌‍ ಗಿಲ್‌ ಅವರಿಗೆ ಗುರುವಾರದ ಅಭ್ಯಾಸದ ವೇಳೆ ಬಲಗೈ ಉಂಗುರ ಬೆರಳಿಗೆ ಪೆಟ್ಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಎಸ್‌‍ಎಲ್‌ಸಿ ಇಲೆವೆನ್‌ ವಿರುದ್ಧದ ಅಭ್ಯಾಸ ಪಂದ್ಯದ ಮೊದಲ ದಿನ ಅವರು ಮೈದಾನಕ್ಕಿಳಿಯುವುದಿಲ್ಲ. ಬಿಸಿಸಿಐ ವೈದ್ಯಕೀಯ ತಂಡ ಅವರ ಗಾಯದ ಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುತ್ತಿದೆ ಎಂದು ತಿಳಿಸಿದೆ.

ಜತೆಗೆ, ಗಿಲ್‌ ಅವರ ಅನುಪಸ್ಥಿತಿಯಲ್ಲಿ ಕೆ.ಎಲ್‌‍. ರಾಹುಲ್‌ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ ಎರಡು ಪಂದ್ಯಗಳ ಟೆಸ್ಟ್‌ ಸರಣಿಯನ್ನು ಆಡಲಿದ್ದು, ಮೊದಲ ಟೆಸ್ಟ್‌ ಆಗಸ್ಟ್‌ 15ರಿಂದ ಗಾಲೆಯಲ್ಲಿ ಆರಂಭವಾಗಲಿದೆ. ಎರಡನೇ ಟೆಸ್ಟ್‌ ಆಗಸ್ಟ್‌ 23ರಿಂದ ಕೊಲಂಬೊದಲ್ಲಿ ನಡೆಯಲಿದೆ. ಗಿಲ್‌ ಅವರ ಗಾಯ ಗಂಭೀರವಾಗಿಲ್ಲ ಎಂಬ ನಿರೀಕ್ಷೆ ಇದ್ದರೂ, ವೈದ್ಯಕೀಯ ತಂಡ ಅವರ ಚೇತರಿಕೆಯ ಮೇಲೆ ನಿಗಾ ಇಟ್ಟಿದೆ.

RELATED ARTICLES
spot_img

Latest News