Thursday, April 16, 2026
Homeರಾಷ್ಟ್ರೀಯಮಗನನ್ನು ಕೊಂದು ಮೃತದೇಹವನ್ನು ಟ್ರಂಕಿನಲ್ಲಿ ಬಚ್ಚಿಟ್ಟು ಅಪ್ಪ ಪರಾರಿ

ಮಗನನ್ನು ಕೊಂದು ಮೃತದೇಹವನ್ನು ಟ್ರಂಕಿನಲ್ಲಿ ಬಚ್ಚಿಟ್ಟು ಅಪ್ಪ ಪರಾರಿ

UP Man Kills Son, 12, Over Marital Dispute, Hides Body In Trunk, Flees

ಫಿರೋಜಾಬಾದ್‌ , ಫೆ. 2- ಕೌಟುಂಬಿಕ ಕಲಹದಿಂದ ತಂದೆಯೊಬ್ಬ ತನ್ನ 12 ವರ್ಷದ ಮಗನನ್ನು ಕೊಂದು, ಮೃತದೇಹವನ್ನು ಟ್ರಂಕಿನಲ್ಲಿ ಬಚ್ಚಿಟ್ಟು ಪರಾರಿಯಾಗಿರುವ ಘಟನೆ ಉತ್ತರ ಪ್ರದೇಶದ ಮಖಾನ್‌ಪುರದ ಜಿಜೋಲಿ ಗ್ರಾಮದಲ್ಲಿ ನಡೆದಿದೆ.

ಆಸ್ತಿ ವಿಚಾರವಾಗಿ ಪತ್ನಿಯೊಂದಿಗೆ ದೀರ್ಘಕಾಲದ ಕಲಹದ ನಂತರ ಆರೋಪಿ ರಾಜೇಶ್‌ ಈ ಅಪರಾಧ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಜೇಶ್‌ ಕುಡಿತದ ಚಟ ಹೊಂದಿದ್ದ ಈತನ ಪತ್ನಿ ಊರ್ಮಿಳಾ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ದಂಪತಿ ಆಗಾಗ್ಗೆ ಜಗಳವಾಡುತ್ತಿದ್ದರು.

ಊರ್ಮಿಳಾ ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ರಾಜೇಶ್‌ ತಮ ಮಗ ಮಾಯಾಂಕ್‌ ಜೊತೆ ಮನೆಯಲ್ಲಿದ್ದ.ಮಧ್ಯಾಹ್ನ ಊರ್ಮಿಳಾ ಮನೆಗೆ ಹಿಂದಿರುಗಿದಾಗ, ಪತಿ ಇಲ್ಲದಿರುವುದು ಮತ್ತು ಮನೆಯೊಳಗೆ ರಕ್ತದ ಕಲೆಗಳು ಇರುವುದು ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಅನುಜ್‌ ಚೌಧರಿ ತಿಳಿಸಿದ್ದಾರೆ.

ಆಕೆ ತನ್ನ ಮಗನನ್ನು ಹುಡುಕುತ್ತಿದ್ದಾಗ, ಟ್ರಂಕಿನಲ್ಲಿ ಮಗುವಿನ ಶವ ನಲ್ಲಿ ಕಂಡುಬಂದಿದೆ ಎಂದು ಚೌಧರಿ ಹೇಳಿದರು.ಊರ್ಮಿಳಾ ಅವರ ಕಿರುಚಾಟ ಕೇಳಿ ನೆರೆಹೊರೆಯವರು ಸ್ಥಳದಲ್ಲಿ ಜಮಾಯಿಸಿದರು, ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಪೊಲೀಸ್‌‍ ತಂಡ ಗ್ರಾಮಕ್ಕೆ ತಲುಪಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿತು.ಹುಡುಗನ ತಾಯಿ ನೀಡಿದ ದೂರಿನ ಆಧಾರದ ಮೇಲೆ, ರಾಜೇಶ್‌ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಪರಾರಿಯಾಗಿದ್ದಾನೆ.ಆತನ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ ಎಂದು ಎಸ್ಪಿ ಹೇಳಿದರು,

RELATED ARTICLES

Latest News