ನವದೆಹಲಿ,ಏ.22- ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತೇ ಪರಮೋಚ್ಚ. ಇದರ ಮೇಲೆ ಆಕ್ರಮಣ ನಡೆಸುವುದಾ ಗಲಿ ಇಲ್ಲವೇ ಒತ್ತುವರಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಉಪರಾಷ್ಟ್ರಪತಿ ಜಗದೀಶ್ ಧನ್ಕರ್ ಮತ್ತೆ ನ್ಯಾಯಾಂಗದ ವಿರುದ್ಧವೇ ಗುಡುಗಿದ್ದಾರೆ.
ಕೆಲವು ದಿನಗಳ ಹಿಂದೆ ನ್ಯಾಯಾಂಗದ ಕಾರ್ಯ ವೈಖರಿ ಕುರಿತು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದ ಧನ್ಕರ್, ಸಂಸತ್ ಮೇಲೆ ನ್ಯಾಯಾಂಗದ ಅತಿಕ್ರಮಣವನ್ನು ಮತ್ತೆ ಕಟುವಾಗಿ ಟೀಕಿಸಿದ್ದರು.
ದೆಹಲಿ ವಿಶ್ವವಿದ್ಯಾನಿಲಯದ ಕಾರ್ಯಕ್ರಮವೊದರಲ್ಲಿ ಮಾತನಾಡಿದ ಅವರು, ಸಂಸತ್ ಸರ್ವೋಚ್ಚವಾಗಿದೆ. ಇಲ್ಲಿ ಜನಪ್ರತಿನಿಧಿಗಳು, ಮಾಸ್ಟರ್‌ರಸಗಳು ಸಂಸತ್‌ನ್ನು ಅತಿಕ್ರಮಣ ಮಾಡುವುದಾಗಲಿ ಒತ್ತುವರಿ ಮಾಡಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಸುಪ್ರೀಂಕೋರ್ಟ್ ವಿರುದ್ಧವೂ ಕಿಡಿಕಾರಿದರು.
ಜನಪ್ರತಿನಿಧಿಗಳೇ ಅಂತಿಮ ಯಜಮಾನರು ಎಂಬುದನ್ನು ಯಾರೂ ಮರೆಯಬಾರದು. ಚುನಾವಣೆಗಳ ಮೂಲಕ ಸಾರ್ವಜನಿಕ ಪ್ರತಿನಿಧಿಗಳು ಸಂಸತ್‌ಗೆ ಉತ್ತರದಾಯಿಗಳಾಗಿದ್ದಾರೆ. ಈ ಹಿಂದೆ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಅಂದಿನ ಪ್ರಧಾನಿಯನ್ನೆ ಹೊಣೆಗಾರರನ್ನಾಗಿ ಮಾಡಿತ್ತು. ಪ್ರಜಾಪ್ರಭುತ್ವವು ಜನರಿಗಾಗಿ ಮತ್ತು ಅದನ್ನು ರಕ್ಷಿಸುವ ಭಂಡಾರವಾಗಿದೆ. ಇದು ಚುನಾಯಿತ ಪ್ರತಿನಿಧಿಗಳದ್ದು ಎಂದು ಒತ್ತಿ ಹೇಳಿದರು.
ನಮ ಸಂಸತ್ ಸರ್ವೋಚ್ಛವಾಗಿದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಯ ಮುಖವಾಣಿಯಾಗಿದೆ. ನಾವು ಅದರ ರಕ್ಷಕರಾಗಿ ಕೆಲಸ ಮಾಡುತ್ತಿದ್ದೇವೆ. ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ಹೇರಿಕೆ ಸಂದರ್ಭದಲ್ಲಿ ಮೂಲಭೂತ ಹಕ್ಕುಗಳನ್ನು ಹೇಗೆ ಅಮಾನತುಗೊಳಿಸಲಾಯಿತು ಎಂಬುದು ನಮ ಕಣ್ಣ ಮುಂದೆಯೇ ಇದೆ. ದೇಶದ 9 ಹೈಕೋರ್ಟ್‌ಗಳು ನೀಡಿದ್ದ ತೀರ್ಪುಗಳನ್ನು ತಳ್ಳಿಹಾಕಲಾಗಿತ್ತು. ಮೂಲಭೂತ ಹಕ್ಕುಗಳ ಅಮಾನತಿನ ಪರವಾಗಿ ಸುಪ್ರೀಂಕೋರ್ಟ್ ಹೇಗೆ ತೀರ್ಪು ನೀಡಿತ್ತು ಎಂಬುದನ್ನು ಸಹ ಉಪರಾಷ್ಟ್ರಪತಿಗಳು ಸರಿಸಿಕೊಂಡರು.
ನಾವು ಸಂವಿಧಾನ ದಿನ ಆಚರಣೆ ಮತ್ತು ಸಂವಿಧಾನ ಹತ್ಯಾ ದಿವಸ್ ಏಕೆ ಆಚರಿಸುತ್ತೇವೆ? 1949ರಲ್ಲಿ ಸಂವಿಧಾನವನ್ನು ನಾವು ಅಂಗೀಕರಿಸಿದ್ದೆವು. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಹಾಗೂ ಮಾನವ ಇತಿಹಾಸದಲ್ಲಿ ಇದನ್ನು ನಾವು ಕರಾಳ ದಿನವೆಂದು ಕರೆಯುತ್ತೇವೆ. ಏಕೆಂದರೆ ನ್ಯಾಯಾಲಯ ಮಧ್ಯಪ್ರವೇಶ ಮಾಡದಿದ್ದರೆ ನಾವು ಈಗಲೂ ಅದೇ ಸ್ಥಿತಿಯಲ್ಲಿ ಇರಬೇಕಿತ್ತೆಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಂದಿಗೂ ಮೂಲಭೂತ ಹಕ್ಕುಗಳನ್ನು ತಡೆ ಹಿಡಿಯಲು ಆಗುವುದಿಲ್ಲ. ಆದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಲು 20 ತಿಂಗಳು ಬೇಕಾಯಿತು. ಒಂದು ವೇಳೆ ದೇಶದ ಜನ ತುರ್ತು ಪರಿಸ್ಥಿತಿ ಹೋಗಲಾಡಿಸಲು ಬೀದಿಗಿಳಿದಿದ್ದರೆ ಇದು ಸಾಧ್ಯವಿತ್ತೇ ಎಂದು ಪ್ರಶ್ನೆ ಮಾಡಿದರು.
ನ್ಯಾಯಾಲಯದ ಮಧ್ಯಪ್ರವೇಶದ ಬಗ್ಗೆ ಮಾತನಾಡಿದರೆ ಕೆಲವರು ಆರೋಪಗಳನ್ನು ಮಾಡುತ್ತಾರೆ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಕುರಿತು ರಾಷ್ಟ್ರಪತಿ ಆಳ್ವಿಕೆಗೆ ಕೆಲವರು ಒತ್ತಡ ಹಾಕಿದ್ದರು. ಇದರ ಬಗ್ಗೆ ಮಾತನಾಡಿದರೆ ನಾವು ನ್ಯಾಯಾಲಯವನ್ನು ಅತಿಕ್ರಮಣ ಮಾಡಿದ್ದೇವೆ ಎಂದು ಮಾತನಾಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿ? ಜನರೇ ಇದನ್ನು ತೀರ್ಮಾನಿಸಬೇಕೆಂದು ಹೇಳಿದರು.
ನ್ಯಾಯಾಲಯದ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಎಲ್ಲಿಯೂ ನ್ಯಾಯಾಂಗದ ಬಗ್ಗೆ ನಾವು ಮಾತನಾಡುತ್ತಿಲ್ಲ. ಆದರೆ ವ್ಯವಸ್ಥೆಯೊಳಗಿನ ದೋಷದ ಬಗ್ಗೆ ಮಾತನಾಡಿದರೆ ಅದು ಅತಿಕ್ರಮಣವಾಗಲು ಸಾಧ್ಯವೇ ಎಂದು ಪರೋಕ್ಷವಾಗಿ ಧನ್ಕರ್ ಹೇಳಿಕೆಯನ್ನು ಉಲ್ಲೇಖ ಮಾಡಿದರು.
ಕಾನೂನು ಮಾಡುವ ಅಧಿಕಾರ ಸಂಸತ್‌ಗಿದೆ. ಹೀಗಾಗಿಯೇ ಸಂಸತ್‌ನಲ್ಲಿ ಶಾಸಕಾಂಗಕ್ಕೆ ತನ್ನದೇ ಆದ ಅಧಿಕಾರವಿರುತ್ತದೆ. ಆದರೆ ನ್ಯಾಯಾಂಗವು ಕೆಲವು ವಿಷಯಗಳಲ್ಲಿ ಸೂಪರ್ ಮಿಸೇಲ್‌ನಂತೆ ವರ್ತನೆ ಮಾಡುತ್ತದೆ ಎಂದು ಕೆಲವು ದಿನಗಳ ಹಿಂದೆ ಧನ್ಕರ್ ನ್ಯಾಯಾಲಯದ ಕಾರ್ಯ ವೈಖರಿ ವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಏನಿದು ಪ್ರಕರಣ:
ಶಾಸನಸಭೆ ಅಂಗೀಕರಿಸಿದ ಮಸೂದೆಗಳಿಗೆ ಅಂಕಿತ ಹಾಕುವ ವಿಚಾರವಾಗಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ಅಧಿಕಾರಕ್ಕೆ ಸುಪ್ರೀಂಕೋರ್ಟ್ ಡೆಡ್‌ಲೈನ್ ವಿಧಿಸಿ ತೀರ್ಪು ಪ್ರಕಟಿಸಿತ್ತು. ಪರಿಶೀಲನೆಗಾಗಿ ರಾಜ್ಯಪಾಲರಿಂದ ಬಂದ ಮಸೂದೆಗಳ ವಿಚಾರವಾಗಿ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ಕೈಗೊಳ್ಳಬೇಕು ಎಂದು ರಾಷ್ಟ್ರಪತಿಯವರಿಗೆ ಸುಪ್ರೀಂಕೋರ್ಟ್ ಕಾಲಮಿತಿ ನಿಗದಿ ಮಾಡಿ ಏಪ್ರಿಲ್ 8ರಂದು ಆದೇಶ ಪ್ರಕಟಿಸಿತ್ತು.
ರಾಜ್ಯಪಾಲರು ರಾಷ್ಟ್ರಪತಿಯವರ ಪರಿಶೀಲನೆಗಾಗಿ ಯಾವ ದಿನಾಂಕಕ್ಕೆ ಮಸೂದೆಯನ್ನು ಕಳುಹಿಸಲಾಗಿತ್ತೋ, ಆ ದಿನಾಂಕದಿಂದ ಅನ್ವಯವಾಗುವಂತೆ ಮೂರು ತಿಂಗಳ ಅವಧಿಯಲ್ಲಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ನ್ಯಾಯಾಲಯ ರಾಷ್ಟ್ರಪತಿಗೆ ಹೇಳಿರುವುದು ಇದೇ ಮೊದಲು. ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲ ಮತ್ತು ಮಹಾದೇವನ್ ಅವರನ್ನೊಳಗೊಂಡ ಪೀಠವು ತಮಿಳುನಾಡು ರಾಜ್ಯ ಸರ್ಕಾರ ರಾಜ್ಯಪಾಲ ರವಿ ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿ ಈ ಮಹತ್ವದ ತೀರ್ಪು ಪ್ರಕಟಿಸಿತ್ತು.