Thursday, April 16, 2026
Homeರಾಜ್ಯಬಿಜೆಪಿ ಧುರೀಣರ ಹೇಡಿತನ ಬಯಲಾಗಿದೆ : ಹರಿಪ್ರಸಾದ್‌ ಲೇವಡಿ

ಬಿಜೆಪಿ ಧುರೀಣರ ಹೇಡಿತನ ಬಯಲಾಗಿದೆ : ಹರಿಪ್ರಸಾದ್‌ ಲೇವಡಿ

BJP leaders' cowardice exposed: Hariprasad

ಬೆಂಗಳೂರು, ಜ.3- ಸಂಸತ್ತಿನಲ್ಲಿ ಸತ್ಯವನ್ನು ಎದುರಿಸಲು ಎದೆಗಾರಿಕೆ ಬೇಕೇ ಹೊರತು, ಸುಳ್ಳಿನ ಪರದೆಯ ಹಿಂದೆ ಬಚ್ಚಿಟ್ಟುಕೊಳ್ಳುವ ಹೇಡಿತನದ 56 ಇಂಚಿನ ಎದೆಯಲ್ಲ ಎಂದು ಕಾಂಗ್ರೆಸ್‌‍ ನ ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಲೇವಡಿ ಮಾಡಿದ್ದಾರೆ.

ತಮ ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಪೋಸ್ಟ್‌‍ ಮಾಡಿರುವ ಅವರು, ಚೀನಾ ದೇಶವನ್ನು ಕೆಂಪು ಕಣ್ಣಿನಿಂದ ನೋಡಬೇಕು. ಎಂದು ಪುಂಖಾನುಪುಂಖ ಭಾಷಣ ಬೀಗುತ್ತಿದ್ದ ಆಗಿನ ಗುಜರಾತಿನ ಮುಖ್ಯಮಂತ್ರಿ, ಈಗಿನ ಪ್ರಧಾನಿ ನರೇಂದ್ರ ಮೋದಿ ಉತ್ತರನ ಪೌರುಷ ಟೆಲಿಪ್ರಾಂಫ್ಟರ್‌ ಎದುರು ಮಾತ್ರವೇ ಹೊರತು ಸಂಸತ್ತಿನಲ್ಲಲ್ಲ ಎಂಬುದು ಮತ್ತೊಮೆ ಸಾಬೀತಾಗಿದೆ ಎಂದಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಅವರು ಚೀನಾ ದೇಶದ ಅತಿಕ್ರಮಣ, ದೇಶದ ಭದ್ರತೆ ಹಾಗೂ ಸರ್ಕಾರದ ವೈಫಲ್ಯಗಳನ್ನು ಭಾರತೀಯ ಸೇನೆಯ ಮಾಜಿ ಮುಖ್ಯಸ್ಥರಾಗಿದ್ದ ಜನರಲ್‌ ಎಂ.ಎಂ.ನರವಣೆ ಅವರ ಪುಸ್ತಕದಲ್ಲಿನ ಗಂಭೀರ ಅಂಶಗಳ ಕುರಿತು ಚರ್ಚೆಗೆ ಅನುವು ಮಾಡಿಕೊಡದೆ ಇರುವುದು ದೇಶದ ಎದುರು ಕೇಂದ್ರ ಸರ್ಕಾರದ ಹೇಡಿತನದ ಪ್ರದರ್ಶನವಾಗಿದೆ ಎಂದಿದ್ದಾರೆ.

ಒಬ್ಬ ಮಾಜಿ ಸೇನಾ ಮುಖ್ಯಸ್ಥರ ಅನುಭವಾಧರಿತ ಅಭಿಪ್ರಾಯಗಳ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸಲು ಪ್ರಧಾನಿ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹಾಗೂ ಗಹ ಸಚಿವ ಅಮಿತ್‌ ಶಾಗೆ ಧೈರ್ಯವಿಲ್ಲ ಎಂದರೆ, ದೇಶದ ಎದುರು ತಮ ಮುಖವಾಡಗಳು ಕಳಚಿ ಬೀಳುವ ಭಯವೇ? ಎಂದು ಪ್ರಶ್ನಿಸಿದ್ದಾರೆ.

ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕರಾದ ರಾಹುಲ್‌ ಗಾಂಧಿ ಅವರು ಎತ್ತಿದ ಪ್ರಶ್ನೆಗಳು ಸೈನ್ಯದ ವಿರುದ್ಧವಲ್ಲ, ಅವು ಸರ್ಕಾರದ ನಿರ್ಧಾರಗಳು ಮತ್ತು ವೈಫಲ್ಯಗಳ ಅನಾವರಣ. ಆದರೆ ಮೋದಿ ಸರ್ಕಾರ ಲೋಕಸಭೆಯ ತಾಂತ್ರಿಕ ನಿಯಮಾವಳಿಗಳ ಹಿಂದೆ ಅಡಗಿಕೊಂಡು, ಉತ್ತರಿಸುವ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವುದು ಹೇಡಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

RELATED ARTICLES

Latest News