Homeಬೆಂಗಳೂರುಬೆಂಗಳೂರಲ್ಲಿ ಕಸ ಗುಡಿಸಲು ಬಂದ ಹೊಸ ಯಂತ್ರಗಳು

ಬೆಂಗಳೂರಲ್ಲಿ ಕಸ ಗುಡಿಸಲು ಬಂದ ಹೊಸ ಯಂತ್ರಗಳು

New machines cleaning in Bengaluru

ಬೆಂಗಳೂರು, ಫೆ. 6- ಸಿಲಿಕಾನ್‌ ಸಿಟಿಯ ಪೌರ ಕಾರ್ಮಿಕರು ಇನ್ನು ಮುಂದೆ ಕೈಯಲ್ಲಿ ಕಸ ಗುಡಿಸುವ ಹಾಗಿಲ್ಲ… ಯಾಕೆ ಅಂತೀರಾ… ಕಸ ಗುಡಿಸಲು ಬಂದಿವೆ ಹೊಸ ಯಂತ್ರಗಳು.. ಹೌದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಧಿಕಾರಿಗಳು ಪೌರ ಕಾರ್ಮಿಕರಿಗೆ ಅನುಕೂಲವಾಗುವಂತೆ ಕಸ ಗುಡಿಸುವ ಯಂತ್ರಗಳನ್ನು ಖರೀದಿ ಮಾಡಿದ್ದಾರೆ. ಹೀಗಾಗಿ ಇನ್ನು ಮುಂದೆ ಕೈಯಿಂದ ಕಸ ಗುಡಿಸುವುದು ತಪ್ಪಿದಂತಾಗಿದೆ.

ಕಸ ಗುಡಿಸೋಕೆ ಅಂತಾನೇ ಹೊಸ ಯಂತ್ರ ಖರೀದಿ ಮಾಡಲಾಗಿದ್ದು, ರಸ್ತೆ ಗುಡಿಸುವ ಪಾರಂಪರಿಕ ಪೊರಕೆಗಳಿಗೆ ಗುಡ್‌ ಬೈ ಹೇಳಲು ತೀರ್ಮಾನಿಸಲಾಗಿದೆ.ಹೀಗಾಗಿ ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ 33 ಸ್ಟ್ರೀಟ್‌ ಸ್ವೀಪಿಂಗ್‌ ಮಿಷನ್‌ ಖರೀದಿಸಲಾಗಿದೆ. 50 ಕಸ ಶೇಖರಣೆ ಮಾಡುವ ಸಾಮರ್ಥ್ಯ ಹೊಂದಿರುವ ಯಂತ್ರಗಳೂ ಬಂದಿವೆಯಂತೆ. ಈ ಯಂತ್ರಗಳು ಹೆಚ್ಚು ಶ್ರಮ ವ್ಯಯ ಮಾಡದೆ ಕಸ ಗುಡಿಸಬಹುದಾಗಿದೆ.

ಇದರಿಂದ ಪೌರಕಾರ್ಮಿಕರ ಸಮಯ ಉಳಿತಾಯವಾಗಲಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಚಾಲನೆ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಐದು ನಗರಪಾಲಿಕೆ ವ್ಯಾಪ್ತಿಗೂ ವಿಸ್ತರಿಸಲಾಗುವುದು ಎಂದು ಜಿಬಿಎ ಮುಖ್ಯ ಅಯುಕ್ತ ಮಹೇಶ್ವರ ರಾವ್‌ ಮಾಹಿತಿ ನೀಡಿದ್ದಾರೆ.

RELATED ARTICLES

Latest News