Homeಬೆಂಗಳೂರುಬೆಂಗಳೂರಿನಲ್ಲಿರುವ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ

ಬೆಂಗಳೂರಿನಲ್ಲಿರುವ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ

Bomb threat to embassies in Bengaluru

ಬೆಂಗಳೂರು,ಫೆ.6-ನಗರದಲ್ಲಿರುವ ವಿದೇಶಿ ರಾಯಭಾರ ಕಚೇರಿಗಳಿಗೆ ಬಾಂಬ್‌ ಬೆದರಿಕೆ ಸಂದೇಶಗಳು ಬರುತ್ತಿವೆ. ಇಟಲಿ ಮತ್ತು ಜಪಾನ್‌ ಕಾನ್ಸುಲೇಟ್‌ ಬಳಿಕ ನೆದರ್‌ಲ್ಯಾಂಡ್‌್ಸ ರಾಯಭಾರ ಕಚೇರಿಗೂ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದಿರುವುದರಿಂದ ಆತಂಕ ಮೂಡಿಸಿದೆ.

ಆರ್‌ಟಿ ನಗರದ ಗಂಗಾನಗರದಲ್ಲಿರುವ ನೆದರ್‌ಲ್ಯಾಂಡ್ಸ್ ರಾಯಭಾರಿ ಕಚೇರಿಗೆ ದುಷ್ಕರ್ಮಿಗಳು ಇ-ಮೇಲ್‌ ಕಳುಹಿಸಿದ್ದಾರೆ. ಅದರಲ್ಲಿ ಆರ್‌ಡಿಎಕ್ಸ್ ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆಂದು ಬೆದರಿಕೆ ಸಂದೇಶವಿದೆ.

ಸುದ್ದಿ ತಿಳಿದ ಆರ್‌ಟಿ ನಗರ ಪೊಲೀಸರು ರಾಯಭಾರ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಇ-ಮೇಲ್‌ ಕಳುಹಿಸಿರುವ ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

ಬಾಂಬ್‌ ಬೆದರಿಕೆ ಸಂದೇಶಗಳು ಬಂದಿರುವ ಹಿನ್ನೆಲೆಯಲ್ಲಿ ಹಲಸೂರಿನಲ್ಲಿರುವ ಇಟಾಲಿಯನ್‌ ಕಾನ್ಸುಲೇಟ್‌ ಕಚೇರಿ ಹಾಗೂ ಕಬ್ಬನ್‌ ರಸ್ತೆಯಲ್ಲಿರುವ ಜಪಾನ್‌ ಕಾನ್ಸುಲೇಟ್‌ ಕಚೇರಿ ಸೇರಿದಂತೆ ನಗರದಲ್ಲಿರುವ ಎಲ್ಲಾ ರಾಯಭಾರ ಕಚೇರಿಗಳಿಗೆ ಬಿಗಿ ಬಂದೋಬಸ್ತ್‌ ಭದ್ರತೆಯನ್ನು ಒದಗಿಸಲಾಗಿದೆ.

RELATED ARTICLES

Latest News