Homeಕ್ರೀಡಾ ಸುದ್ದಿಭಾರತ ಜೊತೆಗಿನ ಪಂದ್ಯ ಬಹಿಷ್ಕಾರ : ಮರುಪರಿಶೀಲನೆಗೆ ಪಿಸಿಬಿಗೆ ಶ್ರೀಲಂಕಾ ಮನವಿ

ಭಾರತ ಜೊತೆಗಿನ ಪಂದ್ಯ ಬಹಿಷ್ಕಾರ : ಮರುಪರಿಶೀಲನೆಗೆ ಪಿಸಿಬಿಗೆ ಶ್ರೀಲಂಕಾ ಮನವಿ

PCB to consult government on Sri Lanka’s request to reconsider India match boycott

ಕರಾಚಿ,ಫೆ.7-ಇದೇ ತಿಂಗಳ ಫೆಬ್ರವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದನ್ನು ಮರುಪರಿಶೀಲಿಸುವಂತೆ ಶ್ರೀಲಂಕಾ ಮಾಡಿರುವ ಮನವಿಯ ಕುರಿತು ನಿರ್ಧರಿಸಲು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ಮತ್ತೆ ತನ್ನ ಸರ್ಕಾರದೊಂದಿಗೆ ಸಮಾಲೋಚಿಸುವ ನಿರೀಕ್ಷೆಯಿದೆ.

ಪಾಕಿಸ್ತಾನ ಸರ್ಕಾರವು ಪಿಸಿಬಿಗೆ ರಾಷ್ಟ್ರೀಯ ತಂಡವನ್ನು ಟಿ20 ವಿಶ್ವಕಪ್‌ಗೆ ಕಳುಹಿಸಲು ಅವಕಾಶ ನೀಡಿದೆ.ಆದರೆ ಐಸಿಸಿ ಮತ್ತು ಅದರ ಪ್ರಸಾರಕರಿಗೆ ವಾಣಿಜ್ಯಿಕವಾಗಿ ಅತಿದೊಡ್ಡ ಪಂದ್ಯವಾದ ಭಾರತದ ವಿರುದ್ಧ ಆಡುವುದನ್ನು ನಿಲ್ಲಿಸಿದೆ.

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯು ಪಿಸಿಬಿಗೆ ಇಮೇಲ್‌ ಕಳುಹಿಸಿ, ಫೆಬ್ರವರಿ 15 ರಂದು ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಮಾರ್ಕ್ಯೂ ಪಂದ್ಯವನ್ನು ನಡೆಸದಿರುವುದು ಎಸ್‌‍ಎಲ್‌ಸಿಗೆ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ ಮತ್ತು ಭಾರತದೊಂದಿಗೆ ಜಂಟಿಯಾಗಿ ದ್ವೀಪ ರಾಷ್ಟದಲ್ಲಿ ಪಂದ್ಯಾವಳಿಯ ಸಂಘಟನೆ ಮತ್ತು ಇಮೇಜ್‌ಗೆ ಹಾನಿ ಮಾಡುತ್ತದೆ ಎಂದು ಹೇಳಿದೆ.

ಪಾಕಿಸ್ತಾನವು ಶ್ರೀಲಂಕಾದೊಂದಿಗೆ ಸರ್ಕಾರದಿಂದ ಸರ್ಕಾರ ಮತ್ತು ಕ್ರಿಕೆಟ್‌ ಮಟ್ಟದಲ್ಲಿ ಬಹಳ ನಿಕಟ ಮತ್ತು ಸ್ನೇಹಪರ ಸಂಬಂಧವನ್ನು ಹೊಂದಿದೆ. ಆದ್ದರಿಂದ ಅವರ ಮಂಡಳಿಯಿಂದ ಬರುವ ಮೇಲ್‌ಗಳನ್ನು ಹಾಗೆ ನಿರ್ಲಕ್ಷಿಸಲಾಗುವುದಿಲ್ಲ.ಶ್ರೀಲಂಕಾ ಮಂಡಳಿಯ ಅಧ್ಯಕ್ಷ ಶಮಿ ಸಿಲ್ವಾ ಅವರು ಮೊಹ್ಸಿನ್‌ ನಖ್ವಿ ಅವರನ್ನು ನೇರವಾಗಿ ಸಂಪರ್ಕಿಸಿದ್ದಾರೆ ಮತ್ತು ಈ ಸಮಯದಲ್ಲಿ ಪಾಕಿಸ್ತಾನವು ಶ್ರೀಲಂಕಾ ಪರವಾಗಿ ನಿಲ್ಲುವ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಪಾಕಿಸ್ತಾನ ಮತ್ತು ಭಾರತ ಪಂದ್ಯಗಳಿಲ್ಲದೆ ಶ್ರೀಲಂಕಾ ಮಂಡಳಿಯು ಗೇಟ್‌ ಮನಿ, ಆತಿಥ್ಯ ಮಾರಾಟ ಇತ್ಯಾದಿಗಳಿಂದ ಹೆಚ್ಚುವರಿ ಆದಾಯವನ್ನು ಕಳೆದುಕೊಳ್ಳುತ್ತದೆ ಎಂದು ಮೂಲಗಳು ತಿಳಿಸಿವೆ.

ನಖ್ವಿ ತಮ ಸಹವರ್ತಿ (ಶಮಿ ಸಿಲ್ವಾ) ಅವರಿಗೆ ಸರ್ಕಾರದೊಂದಿಗೆ ಸಮಾಲೋಚಿಸಿ ಅವರನ್ನು ಸಂಪರ್ಕಿಸುವುದಾಗಿ ಭರವಸೆ ನೀಡಿದ್ದಾರೆ. ಪಾಕಿಸ್ತಾನವು ಶ್ರೀಲಂಕಾದ ವಿನಂತಿಯನ್ನು ತಿರಸ್ಕರಿಸಿದೆ ಎಂಬ ಮಾಧ್ಯಮ ವರದಿಗಳು ಸರಿಯಲ್ಲ ಎಂದು ಅವರು ಹೇಳಿದರು.
ಪಿಸಿಬಿ ಅಧ್ಯಕ್ಷ ಮೊಹ್ಸಿನ್‌ ನಖ್ವಿ ನಿನ್ನೆಯಿಂದ ದೇಶದಲ್ಲಿಲ್ಲ ಮತ್ತು ಇಂದು ಹಿಂತಿರುಗಲಿದ್ದಾರೆ.

ಭಾರತ ಪಂದ್ಯದ ಬಹಿಷ್ಕಾರವನ್ನು ಕೊನೆಗೊಳಿಸುವ ಕುರಿತು ಅವರು ಇ-ಮೇಲ್‌ ಅನ್ನು ಪ್ರಧಾನಿಯ ಗಮನಕ್ಕೆ ತರುತ್ತಾರೆ ಮತ್ತು ನಂತರ ಸೋಮವಾರದೊಳಗೆ ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕಳೆದ ನವೆಂಬರ್‌ನಲ್ಲಿ, ಶ್ರೀಲಂಕಾದ ಕೆಲವು ಆಟಗಾರರು ಭದ್ರತಾ ಕಾಳಜಿಯಿಂದಾಗಿ ಪಾಕಿಸ್ತಾನ ಪ್ರವಾಸದಿಂದ ಮನೆಗೆ ಮರಳಲು ಬಯಸಿದಾಗ, ಶ್ರೀಲಂಕಾ ಸರ್ಕಾರವು ಪಾಕಿಸ್ತಾನದ ಪರವಾಗಿ ದೃಢವಾಗಿ ನಿಂತಿತ್ತು ಎಂದು ಎಂಬುದನ್ನು ಗಮನಕ್ಕೆ ತರಲಾಗಿದೆ.

RELATED ARTICLES

Latest News