Thursday, April 16, 2026
Homeರಾಜ್ಯಮೈಸೂರು ಮೃಗಾಲಯದಲ್ಲಿ ಪ್ರಾಚೀ ಹೆಸರಿನ ಹೆಣ್ಣು ಜೀಬ್ರಾ ಸಾವು

ಮೈಸೂರು ಮೃಗಾಲಯದಲ್ಲಿ ಪ್ರಾಚೀ ಹೆಸರಿನ ಹೆಣ್ಣು ಜೀಬ್ರಾ ಸಾವು

Female zebra named Prachi dies at Mysore Zoo

ಮೈಸೂರು, ಫೆ.8- ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದ ಹೆಣ್ಣು ಜೀಬ್ರಾ ಪ್ರಾಚಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಜೀಬ್ರಾವನ್ನು 2018ರ ಸೆ.4ರಂದು ಇಸ್ರೇಲ್‌ನ ರಾಮತ್‌ ಗ್ಯಾನ್‌ನಲ್ಲಿರುವ ಮೃಗಾಲಯದಿಂದ ಪಡೆಯಲಾಗಿತ್ತು. ಇದೀಗ ಅದಕ್ಕೆ 10 ವರ್ಷ ತುಂಬಿತ್ತು.

ಮೃಗಾಲಯಕ್ಕೆ ತಂದ ನಂತರ ಐದು ಮರಿಗಳಿಗೆ ಅದು ಜನ ನೀಡಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಆಕರ್ಷಕವಾಗಿತ್ತು.ಈ ಬಾರಿ ಗರ್ಭ ಧರಿಸಿದ್ದಾಗ, ಕರುಳಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಮುಂದುವರಿಸಲಾಗಿತ್ತು.

ಹೆಣ್ಣು ಮರಿಗೆ ಜನ ನೀಡಿದ ಎರಡು ದಿನಗಳ ನಂತರ ಮೃತಪಟ್ಟಿದೆ ಮರಿಯನ್ನು ನಮ ಸಿಬ್ಬಂದಿ ಆರೈಕೆ ಮಾಡುತ್ತಿದ್ದಾರೆ ಎಂದು ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕಿ ಪಿ.ಅನುಷಾ ತಿಳಿಸಿದ್ದಾರೆ.

RELATED ARTICLES

Latest News