Homeರಾಜ್ಯಶಾಸಕರ ಸಂಖ್ಯೆ 134, 149 ಮಂದಿಗೆ ಸಚಿವ ಸ್ಥಾನ :ಅಶೋಕ್‌ ವಾಗ್ದಾಳಿ

ಶಾಸಕರ ಸಂಖ್ಯೆ 134, 149 ಮಂದಿಗೆ ಸಚಿವ ಸ್ಥಾನ :ಅಶೋಕ್‌ ವಾಗ್ದಾಳಿ

Number of MLAs 134, ministerial posts for 149: Ashok attacks

ಬೆಂಗಳೂರು, ಫೆ.9- ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಎನ್ನುವಂತೆ ಅಭಿವೃದ್ಧಿಗೆ ದುಡ್ಡಿಲ್ಲದಿದ್ದರೂ, ಸಿಕ್ಕ-ಸಿಕ್ಕವರಿಗೆಲ್ಲ ನಿಗಮ ಮಂಡಳಿಗಳಲ್ಲಿ ಸಚಿವ ಸ್ಥಾನಮಾನ ಕೊಟ್ಟಿರುವ ಕಾಂಗ್ರೆಸ್‌‍ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ತಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಾಂಗ್ರೆಸ್‌‍ ಪಕ್ಷದ ಹಾಲಿ ಶಾಸಕರ ಸಂಖ್ಯೆ 134ಇದೆ. ಸಚಿವ ಸ್ಥಾನಮಾನ ಹೊಂದಿರುವವರ ಸಂಖ್ಯೆ 149 ಕ್ಕೂ ಅಧಿಕ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಗಳಿಗೆ ಅಭಿವದ್ಧಿ ನಿಗಮಗಳು ಸೇರಿದಂತೆ ಅನೇಕ ನಿಗಮ ಮಂಡಳಿಗಳು ಅನುದಾನವಿಲ್ಲದೆ ಸೊರಗುತ್ತಿವೆ ಎಂದು ದೂರಿದರಲ್ಲದೇ, ಅಧ್ಯಕ್ಷರಿಗೆ ಗೂಟದ ಕಾರು, ಸಿಬ್ಬಂದಿಗೆ ಸಂಬಳ, ಸಾರಿಗೆ ಕೊಡುವುದೊಂದೇ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ರಾಜ್ಯ ಕಂಡ ಅತ್ಯಂತ ದುರ್ಬಲ ಮತ್ತು ಅಸಮರ್ಥ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ ಕುರ್ಚಿ ಉಳಿಸಿಕೊಳ್ಳಲು, ಬೇಕಾದವರಿಗೆಲ್ಲಾ ಸಚಿವ ಸ್ಥಾನಮಾನ ಕೊಟ್ಟು ತಮ ಸ್ವಾರ್ಥಕ್ಕಾಗಿ ಅಧಿಕಾರ ನಡೆಸು ತ್ತಿದ್ದಾರೆ ಎಂದು ಕಿಡಿಕಾರಿದರು.ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ ಎಂದು ಒತ್ತಾಯಿಸಿದ್ದಾರೆ.

RELATED ARTICLES
spot_img

Latest News