Homeಕ್ರೀಡಾ ಸುದ್ದಿಟಿ-20 ವಿಶ್ವಕಪ್‌ : ಪಾಕ್‌ ನಿರ್ಧಾರವನ್ನು ಸ್ವಾಗತಿಸಿದ ಶ್ರೀಲಂಕಾ

ಟಿ-20 ವಿಶ್ವಕಪ್‌ : ಪಾಕ್‌ ನಿರ್ಧಾರವನ್ನು ಸ್ವಾಗತಿಸಿದ ಶ್ರೀಲಂಕಾ

T20 World Cup: Sri Lanka welcomes Pakistan's decision

ಕೊಲಂಬೊ, ಫೆ.10- ಭಾರತ ತಂಡದ ವಿರುದ್ಧದ ಟಿ20 ವಿಶ್ವಕಪ್‌ ಪಂದ್ಯದ ಬಹಿಷ್ಕಾರವನ್ನು ಹಿಂತೆಗೆದುಕೊಳಲು ಪಾಕ್‌ ಪ್ರಧಾನಿ ಮತ್ತು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನಿರ್ಧಾರವನ್ನು ಸ್ವಾಗತಿಸಿ ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ ಧನ್ಯವಾದ ಅರ್ಪಿಸಿದ್ದಾರೆ.
ಬಾಂಗ್ಲಾದೇಶ ಮತ್ತು ಶ್ರೀಲಂಕಾದ ಮನವೊಲಿಕೆ ನಂತರ ಪಾಕಿಸ್ತಾನ ಸರ್ಕಾರ ಬಹಿಷ್ಕಾರದ ನಿಲುವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ನಂತರ ಭಾರತ-ಪಾಕಿಸ್ತಾನ ಪಂದ್ಯವು ನಿಗದಿಯಂತೆ ಫೆ.15 ರಂದು ನಡೆಯಲಿದೆ.

ಕೊಲಂಬೊದಲ್ಲಿ ನಡೆಯುತ್ತಿರುವ ಈ ಪಂದ್ಯದ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದ ಕ್ರಿಕೆಟ್‌ ಅಭಿಮಾನಿಗಳಿಗೆ ಖುಷಿಯಾಗಿದೆ ಮತ್ತು ಪಂದ್ಯಕ್ಕೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗಿದೆ ಎಂದು ತಿಳಿದು ಸಂತೋಷವಾಯಿತು ಎಂದು ದಿಸಾನಾಯಕೆ ಎಕ್‌್ಸಪ್ಲಾಟ್‌ಫಾರ್ಮ್‌ನಲ್ಲಿ ಹೇಳಿದರು.

ಶ್ರೀಲಂಕಾ ಕ್ರಿಕೆಟ್‌ ತನ್ನ ನಿರ್ಧಾರವನ್ನು ಬದಲಾಯಿಸಲು ಪಿಸಿಬಿಗೆ ಬರೆದ ಪತ್ರದ ನಂತರ ಆಟವನ್ನು ಆಡಲು ಷರೀಫ್‌ ಅವರನ್ನು ಮನವೊಲಿಸಲು ಕಳೆದ ರಾತ್ರಿ ದಿಸಾನಾಯಕೆ ಕರೆ ಮಾಡಿದ್ದರು.ಪಾಕಿಸ್ತಾನ ಪ್ರಧಾನಿ ಕಚೇರಿ ಸರ್ಕಾರದ ಪ್ರಕಟಣೆಯಲ್ಲಿ ದಿಸಾನಾಯಕೆ ಅವರ ಕರೆಯನ್ನು ಒಪ್ಪಿಕೊಂಡಿದ್ದು, ಇದು ಅವರ ದೇಶದಿಂದ ಪಂದ್ಯ ಬಹಿಷ್ಕಾರವನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿತು.

ಭಾರತದೊಂದಿಗೆ ನಡೆಯುವ ಪಂದ್ಯವನ್ನು ಆಡುವುದಿಲ್ಲ ಎಂದು ಪಾಕಿಸ್ತಾನ ಈ ಹಿಂದೆ ಹೇಳಿತ್ತು,ಇದರ ನಡುವೆ ಭದ್ರತಾ ಕಾರಣಗಳಿಗಾಗಿ ಭಾರತದಿಂದ ಶ್ರೀಲಂಕಾಕ್ಕೆ ಪಂದ್ಯಗಳನ್ನು ಸ್ಥಳಾಂತರಿಸುವ ಬಾಂಗ್ಲಾದೇಶ ಮನವಿಯನ್ನು ಐಸಿಸಿ ನಿರಾಕರಿಸಿದ ನಂತರ ಬಾಂಗ್ಲಾ ತಂಡ ಕೈಬಿಡಲಾಗಿದೆ.

RELATED ARTICLES
spot_img

Latest News