Homeರಾಷ್ಟ್ರೀಯಅತ್ತೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಅಳಿಯ

ಅತ್ತೆ ಮೇಲೆ ಅತ್ಯಾಚಾರ ನಡೆಸಿ ಹತ್ಯೆಗೈದ ಅಳಿಯ

Son-in-law rapes and kills mother-in-law

ಹೈದರಾಬಾದ್‌, ಫೆ. 10 (ಪಿಟಿಐ)- ಹೆಣ್ಣು ಕೊಟ್ಟ ಅತ್ತೆ ಕಣ್ಣು ಕೊಟ್ಟ ದೇವರು ಇದ್ದಂತೆ ಎನ್ನುತ್ತಾರೆ ಆದರೆ, ಇಲ್ಲೊಬ್ಬ ಕಾಮುಕ ಅಳಿಯ ತನ್ನ ಅತ್ತೆ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಕೊಲೆ ಮಾಡಿದ್ದಾನೆ.

60 ವರ್ಷದ ಅತ್ತೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ವ್ಯಕ್ತಿಯನ್ನು ನಾಗರ್ಕರ್ನೂಲ್‌ ಜಿಲ್ಲೆಯ ಕಲ್ವಕುರ್ತಿ ಮಂಡಲದ 40 ವರ್ಷದ ನಿವಾಸಿ ಎಂದು ಗುರುತಿಸಲಾಗಿದೆ.ಕಲ್ವಕುರ್ತಿ ಮಂಡಲದಲ್ಲಿ ವೃದ್ಧ ಮಹಿಳೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಈ ಘಟನೆ ನಡೆದಿದೆ.

ಕುಡಿಯುವ ಚಟ ಹೊಂದಿದ್ದ 40 ವರ್ಷದ ಆರೋಪಿ ಕಾರ್ಮಿಕ, 60 ವರ್ಷದ ತನ್ನ ಅತ್ತೆಯ ಮೇಲೆ ಅತ್ಯಾಚಾರ ಮಾಡಿ, ಮನೆಯಲ್ಲಿಯೇ ಕೊಲೆ ಮಾಡಿದ್ದಾನೆ ಎಂದು ಸಂತ್ರಸ್ತೆಯ ಮಗಳು ಮತ್ತು ಆರೋಪಿಯ ಪತ್ನಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಸಾವಿಗೆ ಕಾರಣವೇನೆಂದು ತಿಳಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ.

ಆರೋಪಿ ಕುಡಿದ ಅಮಲಿನಲ್ಲಿದ್ದಾಗ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ, ಕಲ್ವಕುರ್ತಿ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News