Homeರಾಷ್ಟ್ರೀಯಹಗಲಲ್ಲಿ ಟೆಕ್ಕಿ, ರಾತ್ರಿ ಠಕ್ಕ : ಖತರ್ನಾಕ್ ಸಾಫ್ಟ್ ವೇರ್‌ ಎಂಜಿನಿಯರ್‌ ಅರೆಸ್ಟ್

ಹಗಲಲ್ಲಿ ಟೆಕ್ಕಿ, ರಾತ್ರಿ ಠಕ್ಕ : ಖತರ್ನಾಕ್ ಸಾಫ್ಟ್ ವೇರ್‌ ಎಂಜಿನಿಯರ್‌ ಅರೆಸ್ಟ್

Techie by day, thief by night: Dangerous software engineer arrested

ವಿಶಾಖಪಟ್ಟಣಂ,ಫೆ.10- ಬೆಳಿಗ್ಗೆ ಠಾಕುಠೀಕಾಗಿ ಕೆಲಸ ಮಾಡಿ ರಾತ್ರಿ ವೇಳೆ ಮನೆಗಳಲ್ಲಿ ನುಗ್ಗಿ ಕಳತನ ಮಾಡುತ್ತಿದ್ದ ಹೈದರಾಬಾದ್‌ ಮೂಲದ ಸಾಫ್ಟ್ ವೇರ್‌ ಎಂಜಿನಿಯರ್‌ನನ್ನು ಇಲ್ಲಿನ ಪೊಲೀಸರು ಬಂಧಿಸಿದ್ದಾರೆ.ಕಾಕಿನಾಡದ ಅಚ್ಚಿ ಮಹೇಶ್‌ ರೆಡ್ಡಿ ಅಲಿಯಾಸ್‌‍ ಸನ್ನಿ ಬಂಧಿತ ಆರೋಪಿ.

ಈತ ರಾತ್ರಿ ವೇಳೆ ಸುಮಾರು 26 ಮನೆ ಕಳ್ಳತನಗಳಲ್ಲಿ ಭಾಗಿಯಾಗಿದ್ದು , 15 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ ಮತ್ತು ಇತರ ಕದ್ದ ವಶಪಡಿಸಿಕೊಂಡಿದ್ದೇವೆ ಎಂದು ವಿಜಾಗ್‌ ಉಪ ಪೊಲೀಸ್‌‍ ಆಯುಕ್ತರಾದ ಕೆ. ಲತಾ ಮಾಧುರಿ ತಿಳಿಸಿದ್ದಾರೆ. ತಾಂತ್ರಿಕ ಪುರಾವೆಗಳು ಮತ್ತು ಸಿಸಿಟಿವಿ ವಿಶ್ಲೇಷಣೆಯ ಆಧಾರದ ಮೇಲೆ, ಪೊಲೀಸರು ಗಾಜುವಾಕದ ಆರ್ಚ್‌ ರಸ್ತೆಯ ಬಳಿ ಆರೋಪಿಯನ್ನು ಬಂಧಿಸಿ, 699 ಗ್ರಾಂ ಚಿನ್ನ, 3.8 ಕೆಜಿ ಬೆಳ್ಳಿ, ಕದ್ದ ಹಣದಿಂದ ಖರೀದಿಸಿದ ಬಿಎಂಡಬ್ಲ್ಯೂ ಕಾರು ಮತ್ತು ಮನೆ ದರೋಡೆಗೆ ಬಳಸುವ ಉಪಕರಣಗಳನ್ನು ವಶಪಡಿಸಿಕೊಂಡರು.

ಆರೋಪಿಯು ಅಪರಾಧ ಸ್ಥಳದಲ್ಲಿ ಬೆರಳಚ್ಚು ಅಥವಾ ಯಾವುದೇ ಇತರ ಪುರಾವೆಗಳನ್ನು ಬಿಡದಂತೆ ಜಾಣತನದಿಂದ ಕಳತನ ಮಾಡಿದ್ದ ಎಂದು ಮಾಧುರಿ ಹೇಳಿದರು. ಆರೋಪಿ ಹಗಲಿನ ವೇಳೆಯಲ್ಲಿ ತಪಾಸಣೆ ನಡೆಸಿ,ರಾತ್ರಿಯ ಸಮಯದಲ್ಲಿ ಮನೆಗೆ ನುಗ್ಗುತ್ತಿದ್ದ ಎಂದು ಶಂಕಿಸಲಾಗಿದೆ ಆದರೆ ಅವನು ಇಲ್ಲಿಯವರೆಗೆ ಅದನ್ನು ಒಪ್ಪಿಕೊಂಡಿಲ್ಲ.ಅಪರಾಧಗಳಿಗೆ ಬಳಸಲಾದ ದ್ವಿಚಕ್ರ ವಾಹನವು ಮಹೇಶ್‌ ಎಂಬ ವ್ಯಕ್ತಿಗೆ ಸೇರಿದ್ದು ಎಂದು ಪೊಲೀಸರಿಗೆ ಗೊತ್ತಾಗಿದೆ.

ಕಳೆದ ಅ.14 ರಂದು ಗಾಜುವಾಕದ ನಿವಾಸಿಯೊಬ್ಬರು ತಮ್ಮ ಕುಟುಂಬ ಸಮೇತ ಹೊರಗೆ ಇದ್ದಾಗ ಕಳತನ ನಡೆದಿತ್ತು ಈ ಬಗ್ಗೆ ಗಾಜುವಾಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು.ಗಾಜುವಾಕ, ಅರಿಲೋವಾ, ಮಲ್ಕಪುರಂ, ಪೆಂಡುರ್ತಿ ಮತ್ತು ದುವ್‌ವಾಡ ಪ್ರದೇಶಗಳಲ್ಲಿ ಇದೇ ರೀತಿಯ ಕಳ್ಳತನಗಳು ವರದಿಯಾಗಿವೆ ಎಂದು ಮಾಧುರಿ ಹೇಳಿದರು, ವಿಶಾಖಪಟ್ಟಣ ನಗರದೊಳಗಿನ 26 ಪ್ರಕರಣಗಳಿಗೆ ದಾಖಲಾಗಿದೆ.

ಈ ಪ್ರಕರಣಗಳಲ್ಲಿ,1ಕೆಜಿಗೂ ಹೆಚ್ಚು ಚಿನ್ನ, ಸುಮಾರು 6,333 ಗ್ರಾಂ ಬೆಳ್ಳಿ ಮತ್ತು 40,500 ರೂ. ಮೌಲ್ಯದ ನಗದು ಕಳವು ಮಾಡಲಾಗಿದ್ದು ಎಂದು ಅಂದಾಜಿಸಲಾಗಿದೆ.ಆರೋಪಿಗೆ ದೀರ್ಘ ಅಪರಾಧ ಇತಿಹಾಸವಿದ್ದು, 15 ನೇ ವಯಸ್ಸಿನಲ್ಲಿ ಕಾಕಿನಾಡದಲ್ಲಿ ಮೊದಲು ಬಾಲಾಪರಾಧಿ ಜೈಲಿಗೆ ಹೋಗಿದ್ದ ಎಂದು ತಿಳಿದರು.

RELATED ARTICLES

Latest News