Homeಇದೀಗ ಬಂದ ಸುದ್ದಿಭೂಸ್ವಾಧೀನಾಧಿಕಾರಿ ಮತ್ತು ಗ್ರಾ.ಪಂ. ಸಹಾಯಕ `ಲೋಕಾ' ಬಲೆಗೆ

ಭೂಸ್ವಾಧೀನಾಧಿಕಾರಿ ಮತ್ತು ಗ್ರಾ.ಪಂ. ಸಹಾಯಕ `ಲೋಕಾ’ ಬಲೆಗೆ

Lokayukta Raid on Land Acquisition Officer and Gram Panchayat Assistant

ಶಿವಮೊಗ್ಗ,ಫೆ.15- ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಹಾಗೂ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ ಸಿದ್ದಲಿಂಗ ರೆಡ್ಡಿ ಮತ್ತು ಗ್ರಾಮ ಸಹಾಯಕ ರಾಜೇಶ್‌ ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಓತಿಘಟ್ಟ ಗ್ರಾಮದ ಕೇಶವಮೂರ್ತಿ ಎಂಬುವವರು ತಮ ಎರಿಟಿಗಾ ಕಾರನ್ನು ಕಳೆದ ಎರಡು ವರ್ಷಗಳಿಂದ ಶಿವಮೊಗ್ಗ ವಿಶೇಷ ಭೂ ಸ್ವಾಧೀನಾಧಿಕಾರಿ ಕಛೇರಿಗೆ ಬಾಡಿಗೆಗೆ ನೀಡಿದ್ದರು. ಕಳೆದ 2025ರ ನವೆಂಬರ್‌ ತಿಂಗಳ ಬಾಡಿಗೆ ಹಣದ ಚೆಕ್‌ ನೀಡಲು ಸಿದ್ದಲಿಂಗ ರೆಡ್ಡಿ ಅವರು 40,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಬಗ್ಗೆ ಕೇಶವಮೂರ್ತಿ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಿನ್ನೆ ಸಂಜೆ ಸಿದ್ದಲಿಂಗ ರೆಡ್ಡಿ ಅವರ ಸೂಚನೆ ಯಂತೆ ಹೊಳಲೂರು ನಾ ಕಛೇರಿಯ ಗ್ರಾಮ ಸಹಾಯಕ ರಾಜೇಶ್‌ ,ಶಿವಮೊಗ್ಗದ ನೆಹರೂ ಸ್ಟೇಡಿಯಂ ಬಳಿ ಕೇಶವಮೂರ್ತಿ ಅವರಿಂದ 40,000 ರೂ. ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಇಬ್ಬರನ್ನೂ ಬಂಧಿಸಿದ್ದಾರೆ.

ಲೋಕಾಯುಕ್ತ ಪೊಲೀಸ್‌‍ ಅಧೀಕ್ಷಕ ಎಂ.ಎಸ್‌‍.ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಡಿವೈಎಸ್‌‍ಪಿ ಚಂದ್ರಶೇಖರ್‌ಬಿ.ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪೊಲೀಸ್‌‍ ನಿರೀಕ್ಷಕರಾದ ಕೆ.ಪಿ.ರುದ್ರೇಶ್‌‍, ಗುರುರಾಜ್‌ ಮೈಲಾರ್‌, ವೀರಬಸಪ್ಪ ಎಲ್‌ ಕುಸಲಾಪುರ ಮತ್ತು ಸಿಬ್ಬಂದಿ ಯೋಗೇಶ್‌.ಜಿ.ಸಿ, ಟೀಕಪ್ಪ, ಸುರೇಂದ್ರ.ಹೆಚ್‌‍.ಸಿ, ಬಿ.ಟಿ.ಚನ್ನೇಶ್‌ ದೇವರಾಜ್‌‍, ಅರುಣ್‌ ಕುಮಾರ್‌,ಯು.ಬಿ, ಪ್ರಕಾಶ್‌ ಬಾರಿಮರದ್‌, ಆದರ್ಶ್‌, ಚಂದ್ರಿಬಾಯಿ, ಪ್ರದೀಪ್‌‍, ಗೋಪಿ, ಚೇತನ್‌ ಮತ್ತು ಆನಂದ್‌ ಪಾಲ್ಗೊಂಡಿದ್ದರು.

RELATED ARTICLES

Latest News