Homeರಾಜಕೀಯಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದ ದೆವ್ವಗಳನ್ನ ಓಡಿಸುವ ದಿನ ದೂರವಿಲ್ಲ : ಖರ್ಗೆಗೆ ಅಶೋಕ್‌ ಎಚ್ಚರಿಕೆ

ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದ ದೆವ್ವಗಳನ್ನ ಓಡಿಸುವ ದಿನ ದೂರವಿಲ್ಲ : ಖರ್ಗೆಗೆ ಅಶೋಕ್‌ ಎಚ್ಚರಿಕೆ

R Ashok warns Priyank Kharge

ಬೆಂಗಳೂರು,ಫೆ.16- ಕಳೆದ ನಾಲ್ಕು ದಶಕಗಳಿಂದಲೂ ಕಲ್ಯಾಣ ಕರ್ನಾಟಕದ ಜನರ ಕೃಪಾಕಟಾಕ್ಷದಿಂದ ಅಧಿಕಾರ ಅನುಭವಿಸಿ, ಅಭಿವೃದ್ಧಿಗೆ ಮಾತ್ರ ನಾಳೆ ಬಾ ಎಂಬ ಶಾಶ್ವತವಾದ ಬೋರ್ಡು ಹಾಕಿಕೊಂಡು ಈ ಭಾಗದ ಜನತೆಗೆ ನಂಬಿಕೆ ದ್ರೋಹ ಮಾಡುತ್ತಿರುವ ದೆವ್ವಗಳನ್ನ ಓಡಿಸುವ ದಿನ ಬಹಳ ದೂರವಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಆರ್‌ಎಸ್‌‍ಎಸ್‌‍ ಸಂಘಟನೆಯನ್ನು ವಾಚಾಮಗೋಚರವಾಗಿ ಬೈದರೆ, ನಿರಂತರವಾಗಿ ನಿಂದಿಸಿದರೆ ಹೈಕಮಾಂಡ್‌ ನಾಯಕರನ್ನು ಮೆಚ್ಚಿಸಿ ಪಕ್ಷದಲ್ಲಿ ಏನಾದರೂ ಸ್ಥಾನಮಾನ ಪಡೆಯಬಹುದು, ಇನ್ನೂ ಹೆಚ್ಚಿನ ಅಧಿಕಾರ ಸಿಗಬಹುದು ಎಂಬ ಭ್ರಮೆಯಲ್ಲಿರುವ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅದನ್ನೇ ನಿತ್ಯ ಚಾಳಿ ಮಾಡಿಕೊಂಡಿದ್ದಾರೆ. ಎಂದು ವಾಗ್ದಳಿ ನಡೆಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನಿಂದನೆ ಮಾಡುವುದೂ ಒಂದೇ ಆಕಾಶಕ್ಕೆ ಉಗಿಯುವುದೂ ಒಂದೇ ಎಂದು ತಿರಗೇಟು ನೀಡಿದ್ದಾರೆ.ಮತ್ತೊಂದು ಪೋಸ್ಟ್‌ ನಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿನ ಔಷಧಗಳ ಕೊರತೆ ಆಡಳಿತಾತಕ ವೈಫಲ್ಯದ ಸ್ಪಷ್ಟ ಸಂಕೇತ ಎಂಬುದು ಸರ್ಕಾರದ ಕಾರ್ಯವೈಖರಿಗೆ ಕನ್ನಡಿಯಾಗಿದೆ.

ಬಡರೋಗಿಗಳ ಹಿತದೃಷ್ಟಿಯಿಂದ ಈ ಕೂಡಲೇ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರ ರಾಜೀನಾಮೆ ಪಡೆದು ಯಾರಾದರೂ ಸಮರ್ಥರಿಗೆ ಆರೋಗ್ಯ ಖಾತೆಯನ್ನ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ್‌ ಒತ್ತಾಯಿಸಿದ್ದಾರೆ.

RELATED ARTICLES

Latest News