-ಸಿಂಚನ.ಎನ್.
ಹಿಂದೂ ಧರ್ಮ ಮತ್ತು ಸಂಸ್ಕೃತಿಯಲ್ಲಿ ಜೀವಂತವಾಗಿರುವ ತಂದೆ-ತಾಯಿ ಹಾಗೂ ಹಿರಿಯ ರನ್ನು ಗೌರವಿಸುವುದು ಎಷ್ಟು ಮುಖ್ಯವೋ, ನಮನ್ನು ಅಗಲಿ ಹೋದ ಪಿತೃಗಳನ್ನು ಸರಿಸುವುದು ಕೂಡ ಅಷ್ಟೇ ಪವಿತ್ರವಾದ ಕರ್ತವ್ಯ ಎಂದು ನಂಬಲಾಗಿದೆ. ನಮ ಅಸ್ತಿತ್ವಕ್ಕೆ ಕಾರಣರಾದ ಪೂರ್ವಜರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿಯೇ ಸನಾತನ ಧರ್ಮದಲ್ಲಿ ಪಿತೃಪಕ್ಷ ಎಂಬ ವಿಶೇಷ ಆಚರಣೆಯನ್ನು ಮಾಡಲಾ ಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯಮಿಯಿಂದ ಅರಂಭವಾಗಿ ಮಹಾಲಯ ಅಮಾವಾಸ್ಯೆಯವರೆಗೆ ನಡೆಯುವ ಈ 15 ದಿನಗಳ ಕಾಲಾವಧಿ ಪಿತೃಗಳ ಆರಾಧನೆಗೆ ಅತ್ಯಂತ ಶ್ರೇಷ್ಠವಾದ ಸಮಯವಾಗಿದೆ.
ಪುರಾಣಗಳ ಪ್ರಕಾರ ಈ ಸಮಯದಲ್ಲಿ ಯಮಲೋಕದ ಬಾಗಿಲು ತೆರೆಯುತ್ತದೆ ಹಾಗೂ ಪೂರ್ವಜರ ಆತಗಳು ಭೂಲೋಕಕ್ಕೆ ಬಂದು ಅವರ ವಂಶಸ್ಥರು ನೀಡುವ ಆಹಾರಗಳನ್ನು ಸೇವಿಸಿ ಅವರನ್ನು ಹರಸಿ ಹೋಗುತ್ತಾರೆ ಎಂಬ ನಂಬಿಕೆಯಿದೆ. ಈ ಸಂಪ್ರದಾಯಗಳನ್ನು ಪೂರ್ವಜರ ಕಾಲದಿಂದಲೂ ದಕ್ಷಿಣ ಭಾರತದಲ್ಲಿ ಅತ್ಯಂತ ನಿಷ್ಠೆಯಿಂದ ಆಚರಿಸಲಾಗುತ್ತದೆ. ಈ ಪಿತೃ ಪಕ್ಷ ಆಚರಣೆಯಿಂದ ಪಿತೃ ದೋಷ ಇದ್ದರೇ ಪರಿಹಾರವಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ. ಈ ದಿನಗಳಲ್ಲಿ ಭಕ್ತಿಯಿಂದ ನೀಡುವ ತರ್ಪಣ ಮತ್ತು ಶ್ರಾದ್ಧ ಕಾರ್ಯಗಳು ಪಿತೃಗಳ ಆತಕ್ಕೆ ಶಾಂತಿ ದೊರೆತು ತೃಪ್ತಗೊಂಡು ವಂಶಜರನ್ನು ಹರಸುತ್ತವೆ ಎಂದು ಹೇಳಲಾಗುತ್ತದೆ.
ಪಿತೃ ಪಕ್ಷದ ಕೊನೆಯ ದಿನವನ್ನು ಮಹಾಲಯ ಅಮಾವಾಸ್ಯೆ ಅಥವಾ ಸರ್ವಪಿತೃ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ವರ್ಷದ ಎಲ್ಲಾ ಅಮಾವಾಸ್ಯೆಗಳಿಗಿಂತ ಇದು ಅತ್ಯಂತ ಶಕ್ತಿಶಾಲಿ ಮತ್ತು ಮಹತ್ವದ್ದಾಗಿದೆ. ಯಾರಿಗೆ ತಮ ಹಿರಿಯರು ತೀರಿಕೊಂಡ ದಿನಾಂಕ ನೆನಪಿರುವುದಿಲ್ಲವೋ ಅವರೆಲ್ಲರೂ ಈ ಮಹಾಲಯ ಅಮಾವಾಸ್ಯೆಯಂದು ಶ್ರಾದ್ಧ ಅಥವಾ ತರ್ಪಣ ನೀಡುವುದರಿಂದ ಇಡೀ ವಂಶದ ಪಿತೃಗಳ ಆತಕ್ಕೆ ಮುಕ್ತಿ ಸಿಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಪಿತೃ ಪಕ್ಷ ಎನ್ನುವುದು ಕೇವಲ ಮೂಢನಂಬಿಕೆಯಲ್ಲ, ಅದು ನಮ ಪೂರ್ವಜರನ್ನು ನೆನೆಯುವ ಸುಂದರವಾದ ಸಂಸ್ಕೃತಿ. ತಂದೆ-ತಾಯಿಯ ಋಣವನ್ನು ತೀರಿಸಲು ಮನುಷ್ಯನಿಗೆ ಸಿಗುವ ಅತ್ಯುತ್ತಮ ಅವಕಾಶವಿದು. ಈ ಪವಿತ್ರ ದಿನಗಳಲ್ಲಿ ಹಿರಿಯರನ್ನು ಭಕ್ತಿಯಿಂದ ಸರಿಸಿ, ದಾನ-ಧರ್ಮಗಳನ್ನು ಮಾಡಿ ಪಿತೃಶಾಂತಿಗೆ ಪ್ರತಿಯೊಬ್ಬರೂ ತಪ್ಪದೇ ಪಿತೃಪಕ್ಷ ಆಚರಿಸುತ್ತಾರೆ.
ವಾಸ್ತು ಪ್ರಕಾರ ಪಿತೃಪಕ್ಷ:
ವಾಸ್ತು ನಂಬಿಕೆಗಳ ಪ್ರಕಾರ, ಪೂರ್ವಜರ ಭಾವಚಿತ್ರಗಳನ್ನು ಇರಿಸುವ ಸ್ಥಳ ಮತ್ತು ಅವುಗಳ ಸುತ್ತಮುತ್ತಲಿನ ಪರಿಸರವೂ ಮುಖ್ಯವಾಗಿದೆ. ಈ ಭಾವಚಿತ್ರಗಳ ಹತ್ತಿರ ಕೆಲವು ವಸ್ತುಗಳನ್ನು ಇರಿಸದಂತೆ ಸಾಂಪ್ರದಾಯಿಕವಾಗಿ ಸಲಹೆ ನೀಡಲಾಗುತ್ತದೆ, ಏಕೆಂದರೆ ಅವು ಮನೆಯೊಳಗಿನ ಸಾಮರಸ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಂಬಲಾಗಿದೆ.
ವಾಸ್ತುಶಾಸ್ತ್ರದ ಪ್ರಕಾರ, ದಿವಂಗತ ಸಂಬಂಧಿಕರ ಭಾವಚಿತ್ರಗಳನ್ನು ನೈಋತ್ಯ ಮೂಲೆಯಲ್ಲಿ ಅಥವಾ ದಕ್ಷಿಣ ದಿಕ್ಕಿನ ಗೋಡೆಯ ಮೇಲೆ ಇರಿಸಬೇಕು. ಕೆಲವು ಸಂಪ್ರದಾಯಗಳು ನೈಋತ್ಯ ಮೂಲೆಯನ್ನು ಸೂಕ್ತವೆಂದು ಪರಿಗಣಿಸಿದರೆ, ಇನ್ನು ಕೆಲವರು ಇದು ಪೂರ್ವಜರಿಗೆ ಮೀಸಲಾದ ಸಾಂಪ್ರದಾಯಿಕ ದಿಕ್ಕು ಎಂದು ಹೇಳುತ್ತಾರೆ. ದೇವರುಗಳ ಚಿತ್ರಗಳು ಅಥವಾ ವಿಗ್ರಹಗಳೊಂದಿಗೆ ಪೂರ್ವಜರ ಭಾವಚಿತ್ರಗಳನ್ನು ಪೂಜಾ ಕೋಣೆಯೊಳಗೆ ಇರಿಸಬಾರದು. ಸಂಪ್ರದಾಯದಂತೆ ಮನೆಯಲ್ಲಿ ಪೂರ್ವಜರು ಮತ್ತು ದೇವತೆಗಳಿಗೆ ಪ್ರತ್ಯೇಕ ಸ್ಥಾನಗಳನ್ನು ನೀಡಲಾಗುತ್ತದೆ.
ಧಾರ್ಮಿಕ ವಿಗ್ರಹಗಳು ಅಥವಾ ಚಿತ್ರಗಳಿಗೆ ನೇರವಾಗಿ ಎದುರಾಗಿ ಪೂರ್ವಜರ ಭಾವಚಿತ್ರಗಳನ್ನು ಇರಿಸಬಾರದು. ಈ ಎರಡು ಸ್ಥಳಗಳನ್ನು ಪ್ರತ್ಯೇಕವಾಗಿರಿಸುವುದರಿಂದ ಮನೆಯಲ್ಲಿ ಸಮತೋಲನ ಮತ್ತು ಶಾಂತಿಯುತ ವಾತಾವರಣವನ್ನು ಕಾಪಾಡಿ ಕೊಳ್ಳಲು ಸಹಾಯವಾಗುತ್ತದೆ ಎಂದು ನಂಬಲಾಗಿದೆ.
ಪೂರ್ವಜರ ಭಾವಚಿತ್ರಗಳ ಸುತ್ತಲೂ ಅಥವಾ ಅವುಗಳ ಮುಂದೆ ತ್ಯಾಜ್ಯ, ಬಳಕೆಗೆ ಬಾರದ ವಸ್ತುಗಳು ಮತ್ತು ಅನಗತ್ಯ ಗೊಂದಲಮಯ ವಸ್ತುಗಳನ್ನು ಇರಿಸಬಾರದು. ವಾಸ್ತು ಶಾಸ್ತ್ರವು ಅಂತಹ ಪರಿಸರವನ್ನು ಸೂಕ್ತವಲ್ಲವೆಂದು ಪರಿಗಣಿಸುತ್ತದೆ ಮತ್ತು ಗೊಂದಲಮಯ ವಸ್ತುಗಳನ್ನು ನಕಾರಾತಕ ಶಕ್ತಿ ಹಾಗೂ ಮನೆಯಲ್ಲಿನ ಅಡೆತಡೆಗಳೊಂದಿಗೆ ಸಂಬಂಧಿಸುತ್ತದೆ.
