Homeರಾಜ್ಯಛತ್ತೀಸ್‌‍ಗಢ : ಮಗನ ಸಾವು ಸಹಿಸಲಾರದೆ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

ಛತ್ತೀಸ್‌‍ಗಢ : ಮಗನ ಸಾವು ಸಹಿಸಲಾರದೆ ಆತ್ಮಹತ್ಯೆಗೆ ಶರಣಾದ ತಂದೆ-ತಾಯಿ

Couple Dies By Suicide After Son's Death In Accident, 4-Page Note Found

ಛತ್ತೀಸ್‌‍ಗಢ, ಫೆ. 17: ಮಗನೇ ನಮ್ಮ ಪ್ರಪಂಚವಾಗಿದ್ದ ಅವನೇ ಇಲ್ಲದ ಮೇಲೆ ನಾವ್ಯಾಕೆ ಬದುಕಿರಬೇಕು ಎಂಬ ನಿರ್ಧಾರಕ್ಕೆ ಬಂದ ಪೋಷಕರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಛತ್ತೀಸ್‌‍ಗಢದಲ್ಲಿ ನಡೆದಿದೆ.

ಅಪಘಾತವೊಂದರಲ್ಲಿ ಈ ದಂಪತಿ ತಮ ಕರುಳ ಕುಡಿಯನ್ನು ಕಳೆದುಕೊಂಡಿದ್ದರು. ಆತನೇ ನಮ್ಮ ಪ್ರಪಂಚವಾಗಿದ್ದ, ಈಗ ಅವನೇ ಇಲ್ಲದ ಮೇಲೆ ನಾವು ಬದುಕಿ ಪ್ರಯೋಜನವೇನು ಎಂದು ಡೆತ್‌ ನೋಟ್‌ ಬರೆದಿಟ್ಟು ದಂಪತಿ ಸಾವಿಗೆ ಶರಣಾಗಿದ್ದಾರೆ.

ನನ್ನ ಮಗನಿಲ್ಲದ ಪ್ರಪಂಚ ನಮಗೆ ಬೇಡ ಎಂದು ಕೃಷ್ಣಪಟೇಲ್‌ ಮತ್ತು ಅವರ ಪತ್ನಿ ರಮಾಬಾಯಿ ಅವರು ಡೆತ್‌ನೋಟ್‌ ಬರೆದಿಟ್ಟು ಮನೆ ಅಂಗಳದಲ್ಲಿದ್ದ ಬೇವಿನ ಮರಕ್ಕೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಜಂಜ್‌ಗೀರ್‌- ಚಂಪಾ ಜಿಲ್ಲೆಯ ಶಿವರಿನಾರಾಯಣ ಪೊಲೀಸ್‌‍ ಠಾಣೆ ಪ್ರದೇಶದಲ್ಲಿ, ಈ ಘಟನೆ ನಡೆದಿದೆ. ದಂಪತಿ ನಾಲ್ಕು ಪುಟಗಳ ಆತ್ಮಹತ್ಯೆ ಪತ್ರ ಬರೆದಿಟ್ಟಿದ್ದರು. ಜತೆಗೆ ವಿಡಿಯೋ ಸಂದೇಶವನ್ನು ಕೂಡ ಮಾಡಿಟ್ಟಿದ್ದರು. ಅವರ ಮಾತುಗಳು ಇಡೀ ಕುಟುಂಬದವರನ್ನೇ ಶೋಕಸಾಗರದಲ್ಲಿ ಮುಳುಗಿಸಿತ್ತು.

ಈ ಪೋಷಕರಿಗೆ ಇದ್ದಿದ್ದು ಒಬ್ಬನೇ ಮಗ ಆದಿತ್ಯ ಆತನಿಗೆ 21 ವರ್ಷ ವಯಸ್ಸಾಗಿತ್ತು, 2024ರಲ್ಲಿ ಮಸ್ತೂರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ವೃತ್ತಿಯಲ್ಲಿ ಮೇಸ್ತ್ರಿ ಆಗಿದ್ದ ಕೃಷ್ಣ (48) ಮತ್ತು ರಮಾ ಬಾಯಿ (47)ಗೆ ಆದಿತ್ಯನೇ ಪ್ರಪಂಚವಾಗಿದ್ದ. ಅಪಘಾತದ ಬಳಿಕ ಮನೆಗೆ ಬರ ಸಿಡಿಲು ಬಡಿದಂತಾಗಿತ್ತು.

ಆದಿತ್ಯ ಅಂದು ದೇವಸ್ಥಾನಕ್ಕೆ ಹೋಗುವುದಿಲ್ಲ ಎಂದರೂ ತಾನೇ ಬಲವಂತವಾಗಿ ಅವನನ್ನು ಕಳುಹಿಸಿಕೊಟ್ಟು ತಪ್ಪು ಮಾಡಿದೆ. ಮಗ ಶಾಶ್ವತವಾಗಿ ನಮ್ಮನ್ನು ಬಿಟ್ಟು ಹೋಗಿದ್ದಾನೆ. ಆದರೆ ನಾವು ಮಾತ್ರ ಜೀವಂತವಾಗಿದ್ದೇವೆ ಎಂದು ದಂಪತಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ.

ಪುತ್ರ ಶೋಕದಲ್ಲಿ ನರಳುತ್ತಿದ್ದ ದಂಪತಿ ಮಗನ ಅಗಲಿಕೆ ಸಹಿಸಲಾರದೆ ಮನೆ ಅಂಗಳದಲ್ಲಿರುವ ಬೇವಿನ ಮರಕ್ಕೆ ಸೀರೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಏಕೈಕ ಮಗನನ್ನು ಕಳೆದುಕೊಂಡ ಅಸಹನೀಯ ದುಃಖವು ಈ ತಪ್ಪು ಹೆಜ್ಜೆ ಇಡಲು ಕಾರಣವಾಯಿತು. ಮಗನನ್ನು ಕಳೆದುಕೊಂಡಾಗಿನಿಂದ ನಮಗೆ ನೆಮದಿಯೇ ಇರಲಿಲ್ಲ. ದೀರ್ಘಕಾಲದ ನೋವಿನ ನಂತರ, ನನ್ನ ಮನಸ್ಸು ಈಗ ಶಾಂತವಾಗಿದೆ. ನಾವು ಕೂಡ ಆತನೊಂದಿಗೆ ಹೋಗುತ್ತಿದ್ದೇನೆ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

RELATED ARTICLES

Latest News