Homeಬೆಂಗಳೂರು15 ಡ್ರಗ್ಸ್ ಪೆಡ್ಲರ್‌ಗಳ ಬಂಧನ : 21.5 ಕೋಟಿ ಮೌಲ್ಯದ ಮಾದಕ ವಶ

15 ಡ್ರಗ್ಸ್ ಪೆಡ್ಲರ್‌ಗಳ ಬಂಧನ : 21.5 ಕೋಟಿ ಮೌಲ್ಯದ ಮಾದಕ ವಶ

15 drug peddlers arrested: Drugs worth Rs 21.5 crore seized

ಬೆಂಗಳೂರು,ಫೆ.17- ನಗರದ ವಿವಿಧ ಕಡೆಗಳಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮೂವರು ವಿದೇಶಿ ಪ್ರಜೆಗಳು ಹಾಗೂ ಹೊರರಾಜ್ಯದ 12 ಮಂದಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 21.50 ಕೋಟಿ ಮೌಲ್ಯದ ಗಾಂಜಾ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸಿಸಿಬಿ ಪೊಲೀಸರು ಹಾಗೂ ಅಮೃತಹಳ್ಳಿ, ಹೆಬ್ಬಗೋಡಿ, ಜೆ.ಬಿ.ನಗರ, ಶೇಷಾದ್ರಿಪುರಂ, ಮಹಾಲಕ್ಷೀ ಲೇಔಟ್‌ ಮತ್ತು ಗೋವಿಂದಪುರ ಠಾಣೆಗಳ ಪೊಲೀಸರುಗಳಿಗೆ ಆರೋಪಿಗಳು ಮಾದಕ ವಸ್ತುಗಳಾದ ಹೈಡ್ರೋ ಗಾಂಜಾ, ಗಾಂಜಾ, ಎಂಡಿಎಂಎ, ಕೊಕೇನ್‌, ಎಲ್‌ಎಸ್‌‍ಡಿ ಪಿಲ್‌್ಸ, ಎಲ್‌ಎಸ್‌‍.ಡಿ ಸ್ಟ್ರಿಪ್‌್ಸ ಮತ್ತು ಹ್ಯಾಶಿಷ್‌ ಆಯಿಲ್‌ ಅನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.

ಖಚಿತ ಮಾಹಿತಿಗಳನ್ನಾಧಾರಿಸಿ ಠಾಣೆಗಳಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿಕೊಂಡು ಸ್ಥಳಗಳ ಮೇಲೆ ದಾಳಿ ಮಾಡಿ, ಮೂವರು ವಿದೇಶಿ ಪ್ರಜೆಗಳು ಹಾಗೂ 12 ಮಂದಿ ಹೊರರಾಜ್ಯದ ಡ್ರಗ್‌ಪೆಡ್ಲರ್‌ಗಳನ್ನೊಳಗೊಂಡಂತೆ ಒಟ್ಟು 15 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ವಿದೇಶ ಹಾಗೂ ಹೊರರಾಜ್ಯದ ಅಪರಿಚಿತ ವ್ಯಕ್ತಿಗಳಿಂದ ಮಾದಕ ವಸ್ತು ಹೈಡ್ರೋ ಗಾಂಜಾ, ಗಾಂಜಾ, ಎಂಡಿಎಂಎ, ಕೊಕೇನ್‌, ಎಲ್‌ಎಸ್‌‍ಡಿ ಪಿಲ್ಸ್ , ಎಲ್‌ಎಸ್‌‍.ಡಿ ಸ್ಟ್ರಿಪ್ಸ್ ಮತ್ತು ಹ್ಯಾಶಿಷ್‌ ಆಯಿಲ್‌ ಅನ್ನು ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ, ಐಟಿ-ಬಿಟಿ ಉದ್ಯೋಗಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ಹೇಳಿದ್ದಾರೆ.

ಆರೋಪಿಗಳಿಂದ ಮಾದಕ ವಸ್ತುಗಳಾದ 9 ಕೆ.ಜಿ 460 ಗ್ರಾಂ ಹೈಡ್ರೋ ಗಾಂಜಾ, 30 ಕೆ.ಜಿ ಗಾಂಜಾ, 5 ಕೆ.ಜಿ 677 ಗ್ರಾಂ ಎಂಡಿಎಂಎ, 131 ಗ್ರಾಂ ಕೊಕೇನ್‌, 29 ಎಲ್‌ಎಸ್‌‍ಡಿ ಪಿಲ್‌್ಸ, 27 ಗ್ರಾಂ ಎಲ್‌ಎಸ್‌‍.ಡಿ ಸ್ಟ್ರಿಪ್‌್ಸ ಮತ್ತು 462 ಮಿಲಿ ಹ್ಯಾಶಿಷ್‌ ಆಯಿಲ್‌, 1 ಕಾರು, 1 ದ್ವಿಚಕ್ರ ವಾಹನ, 4 ಮೊಬೈಲ್‌ ಫೋನ್‌ಗಳು ಮತ್ತು 24,500 ರೂ. ನಗದನ್ನು ವಶಪಡಿಸಿಕೊಂಡಿದ್ದು, ಎನ್‌ಸಿಬಿ ಪ್ರಕಾರ, ಇವುಗಳ ಒಟ್ಟು ಮೌಲ್ಯ 10.59 ಕೋಟಿ ರೂ.ಗಳೆಂದು ಅಂದಾಜಿಸಲಾಗಿದ್ದು, ಮಾರುಕಟ್ಟೆ ಮೌಲ್ಯ 21.50 ಕೋಟಿ ರೂ.ಗಳಾಗಿವೆ.

ಇವರಿಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ವಿದೇಶಿ ಮತ್ತು ಹೊರರಾಜ್ಯದ ಆರೋಪಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತವೆ. ಈ ಕಾರ್ಯಾಚರಣೆಗಳನ್ನು ವಿವಿಧ ವಿಭಾಗಗಳ ಉಪ ಪೊಲೀಸ್‌‍ ಆಯುಕ್ತರುಗಳಾದ ಅಪರಾಧ-2 ರಾಜಾ ಇಮಾಮ್‌ ಕಾಸಿಂ, ನೇಮಗೌಡ, ಅಕ್ಷಯ್‌ ಎಂ ಹಾಕೆ, ಡಾ.ವಿಕ್ರಮ್‌ ಅಮಟೆ, ಮಿಥುನ್‌ ಕುಮಾರ್‌, ನಾರಾಯಣ್‌ ರವರುಗಳ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್‌‍ ಆಯುಕ್ತರು ಗಳಾದ ಮಹಾನಂದ. ವೇಣುಗೋಪಾಲ್‌, ರಾಮಚಂದ್ರ, ಲಕ್ಷೀಕಾಂತ್‌, ರಂಗಪ್ಪ, ಮುರುಗೇಂದ್ರಯ್ಯ, ಸತೀಶ್‌ ರವರುಗಳ ನೇತೃತ್ವದಲ್ಲಿ ಪೊಲೀಸ್‌‍ ಇನ್‌್ಸಪೆಕ್ಟರ್‌ಗಳು ಹಾಗೂ ಇತರೆ ಸಿಬ್ಬಂದಿಗಳ ತಂಡ ಪ್ರಕರಣಗಳನ್ನು ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News