Friday, April 17, 2026
Homeರಾಷ್ಟ್ರೀಯವಿವಿಪಿ -2 ಯೋಜನೆಗೆ ಇಂದು ಅಮಿತ್‌ ಶಾ ಚಾಲನೆ

ವಿವಿಪಿ -2 ಯೋಜನೆಗೆ ಇಂದು ಅಮಿತ್‌ ಶಾ ಚಾಲನೆ

Amit Shah to launch second phase of Vibrant Villages Programme in Assam

ನವದೆಹಲಿ,ಫೆ.20- ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಇಂದು ವೈಬ್ರಂಟ್‌ ವಿಲೇಜಸ್‌‍ ಪ್ರೋಗ್ರಾಂ (ವಿವಿಪಿ)ನ ಎರಡನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ. ಇದು 15 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳ 1954 ಗಡಿ ಗ್ರಾಮಗಳನ್ನು ಒಳಗೊಂಡ ಯೋಜನೆಯಾಗಿದೆ.

ಗಡಿಗ್ರಾಮಗಳಲ್ಲಿ ಸಮಗ್ರ ಮತ್ತು ತಾಳಿಕೆಯೋಗ್ಯ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿರುವ ವಿವಿಪಿ -2 ಒಂದು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದ್ದು 2028-29ರ ಹಣಕಾಸು ವರ್ಷದವರೆಗೆ ಇದಕ್ಕಾಗಿ 6,839 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.

ಶಾ ಅವರು ಅಸ್ಸಾಂನ ಕಚರ್‌ನ ನಾಥನ್‌ಪುರದಲ್ಲಿ ಯೋಜನೆಯ ಎರಡನೇ ಹಂತಕ್ಕೆ ಚಾಲನೆ ನೀಡಲಿದ್ದಾರೆ.ಈ ಯೋಜನೆಯು ಗಡಿ ಗ್ರಾಮಗಳಿಂದ ವಲಸೆಯನ್ನು ತಡೆಯುತ್ತದೆ, ಅವರಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ, ಗಡಿಭದ್ರತಾ ವ್ಯವಸ್ಥೆಯನ್ನು ಬಲಪಡಿಸತ್ತದೆ. ಇದು ಹೆಚ್ಚಿನ ಗ್ರಾಮಗಳಿಗೆ ಈ ನೆರವನ್ನು ವಿಸ್ತರಿಸಿ ಗಡಿಭಾಗದ ಜನಜೀವನವನ್ನು ಹಸನುಗೊಳಿಸುತ್ತದೆ ಎಂದು ಶಾ ಅವರು ಎಕ್ಸ್ ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಯೋಜನೆಯು ಅಗತ್ಯ ಮೂಲಸೌಕರ್ಯ ಸುಧಾರಣೆ, ಮೂಲಭೂತ ಸೇವೆಗಳ ಲಭ್ಯತೆ ಹೆಚ್ಚಳ ಮತ್ತು ಸುಸ್ಥಿರ ಜೀವನಾಧಾರ ಅವಕಾಶಗಳ ಸೃಷ್ಟಿಗೆ ಆದ್ಯತೆ ನೀಡುತ್ತದೆ. ತನೂಲಕ 2047ರ ವೇಳೆಗೆ ವಿಕಸಿತ ಭಾರತದ ನಿರ್ಮಾಣದ ಪ್ರಧಾನಿ ಮೋದಿ ಅವರ ಮುನ್ನೋಟಕ್ಕೆ ಅನುಗುಣವಾಗಿ ಗಡಿಭಾಗದ ಜನಸಮುದಾಯವನ್ನು ಸಬಲೀಕರಿಸುತ್ತದೆ ಎಂದು ಶಾ ಹೇಳಿದ್ದಾರೆ.

RELATED ARTICLES

Latest News