ಶಿವಮೊಗ್ಗ,ಫೆ.21-ಪತಿ ಸಾವಿನಿಂದ ಮನನೊಂದಿದ್ದ ಪತ್ನಿಯೂ ಕೂಡ ಒಂದು ವಾರ ಕಳೆಯುವ ಮುನ್ನವೇ ನೇಣಿಗೆ ಶರಣಾದ ಘಟನೆ ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ನಡೆದಿದೆ. ಭದ್ರಾವತಿ ತಾಲೂಕಿನ ಗೋಣಿಬೀಡು ಗ್ರಾಮದ ಸ್ವಾತಿ.ಜೆ (36) ಆತಹತ್ಯೆಗೆ ಶರಣಾದ ಗೃಹಿಣಿ.
ಇವರ ಪತಿ ಜಗದೀಶ್ ಅವರು ಕೆಎಸ್‌ಐಎಸ್‌ಎಫ್ ಶಿವಮೊಗ್ಗ ಘಟಕದಲ್ಲಿ ದಲಾಯತ್ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಫೆ.14ರಂದು ಜಗದೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದರು. ಪತಿ ಮೃತಪಟ್ಟ ನೋವಿನಲ್ಲಿ ವಾರ ಕಳೆಯುವುದರೊಳಗೆ ಸ್ವಾತಿ ಕೂಡ ಅದೇ ದಾರಿ ತುಳಿದಿದ್ದಾರೆ.
ಆತಹತ್ಯೆಗೂ ಮುನ್ನ ಗೃಹಿಣಿಯು ಪೊಲೀಸ್ ಸಿಬ್ಬಂದಿಯೊಬ್ಬರು ತನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಈ ಬಗ್ಗೆ ತನ್ನ ತಾಯಿಗೆ ಮೆಸೇಜ್ ಮಾಡಿದ್ದು, ಅದರಲ್ಲಿ ಮೋಹನ್ ಎಂಬವರ ಹೆಸರನ್ನು ಉಲ್ಲೇಖಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಮೋಹನ್ ಎಂಬ ಪೊಲೀಸ್ ಸಿಬ್ಬಂದಿ ತನಗೆ ಮೆಸೇಜ್ ಮಾಡಿದ್ದರು. ಆತನ ನಂಬರ್ ಬ್ಲಾಕ್ ಮಾಡಿದ್ದಕ್ಕೆ, ಆತ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಸುಮನೆ ಬಿಡಬೇಡಿ ಎಂದು ಸ್ವಾತಿ ಡೆತ್‌ನೋಟ್‌ನಲ್ಲಿ ಆರೋಪಿಸಿದ್ದಾರೆ ಎಂದು ತಿಳಿದು ಬಂದಿದೆ.ಘಟನೆ ಕುರಿತು ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
