ಬೆಂಗಳೂರು, ನ.27- ಶಿವಾಜಿ ನಗರದಲ್ಲಿ ಸುಮಾರು 50 ವರ್ಷದ ಹಳೆಯದಾದ ಬಿಬಿಎಂಪಿ ಸರ್ನರಿ ಶಾಲಾ ಕಟ್ಟಡ ಕುಸಿದು ಬಿದ್ದಿದ್ದು ಭಾರಿ ಅನಾಹುತ ತಪ್ಪಿದೆ. ಕುಕ್ಸ್ ರಸ್ತೆಯ ಬಿ ಕ್ರಾಸ್ ನಲ್ಲಿರುವ ಬಿಬಿಎಂಪಿ ನರ್ಸರಿ ಶಾಲಾ ಕಟ್ಟಡ ಇಂದು ಬೆಳಗಿನ ಜಾವ ಮೂರು ಗಂಟೆ ಸುಮಾರಿನಲ್ಲಿ ಕುಸಿದು ಬಿದ್ದಿದ್ದು ವಾಹನಗಳು ಜಖಂ ಆಗಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಳೆಯದಾದ ಕಟ್ಟಡದಲ್ಲಿ ಶಾಲೆ ನಡೆಯುತ್ತಿದ್ದು ಬೆಳಗಿನ ಜಾವ ಕುಸಿದು ಬಿದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಒಂದು ವೇಳೆ ಶಾಲಾ ಸಮಯದಲ್ಲಿ ಕುಸಿದಿದ್ದರೆ ಭಾರಿ ಸಾವು – ನೋವು ಸಂಭವಿಸುತ್ತಿತ್ತು ಕಟ್ಟಡದ ಅವಶೇಷಗಳಡಿ ಸಿಲುಕಿದ ವಾಹನಗಳಿಗೆ ಹಾನಿಯಾಗಿದೆ.
ಡಿಸಂಬರ್‌ನಲ್ಲಿ ಆಗಲಿವೆ ಹಲವಾರು ಮಹತ್ವದ ಬದಲಾವಣೆಗಳು
ಶಾಲೆಯಲ್ಲಿ 80 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು , ಹಳೆಯದಾದ ಕಟ್ಟಡದಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಿಕೆ ಅಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಕಟ್ಟಡದ ಅವಶೇಷಗಳನ್ನು ತೆರವು ಗೊಳಿಸಿದ್ದಾರೆ.