Sunday, November 10, 2024
Homeಬೆಂಗಳೂರುಲಾಂಗ್‍ನಿಂದ ಬೆದರಿಸಿ ಸುಲಿಗೆ ಮಾಡಿದ್ದ ನಾಲ್ವರು ಖಾಕಿ ಬಲೆಗೆ

ಲಾಂಗ್‍ನಿಂದ ಬೆದರಿಸಿ ಸುಲಿಗೆ ಮಾಡಿದ್ದ ನಾಲ್ವರು ಖಾಕಿ ಬಲೆಗೆ

ಬೆಂಗಳೂರು,ನ.27-ಬಾರ್ ಹಾಗೂ ಚಹಾ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ಬೆದರಿಸಿ ಪುಂಡಾಟ ಮೆರೆದು ಹಣ ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ನಾಲ್ವರನ್ನು ಆರ್‍ಟಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್(29), ಅರ್ಪಿತ ಅಹಮದ್(21), ಮೋಹಿತ್ ಅಲಿಯಾಸ್ ಮೋಹನ್(24) ಮತ್ತು ಸೈಯದ್ ಮಾಜಾ(18) ಬಂಧಿತ ಸುಲಿಗೆಕೋರರು.

ಆರೋಪಿ ಇಮ್ರಾನ್ ವಿರುದ್ಧ 30 ಪ್ರಕರಣಗಳು ದಾಖಲಾದರೆ ಮತ್ತೊಬ್ಬ ಆರೋಪಿ ಅರ್ಪಿತ್ ಅಹಮದ್ ವಿರುದ್ಧ 21 ಪ್ರಕರಣಗಳು ದಾಖಲಾಗಿವೆ. ನ.21ರಂದು ರಾತ್ರಿ 11.55ರ ಸುಮಾರಿನಲ್ಲಿ ನಾಲ್ಕು ಮಂದಿಯ ಗುಂಪೆಪೊಂದು ಆರ್‍ಟಿನಗರದ ಬಾರ್ ಅಂಡ್ ರೆಸ್ಟೋರೆಂಟ್‍ಗೆ ನುಗ್ಗಿ ಲಾಂಗ್‍ನಿಂದ ಬೆದರಿಸಿ ಕ್ಯಾಶ್ ಕೌಂಟರ್‍ನಲ್ಲಿದ್ದ 40 ಸಾವಿರ ಹಣ ಸುಲಿಗೆ ಮಾಡಿತ್ತು.

ಅಲ್ಲದೆ ಈ ಗುಂಪು ಡಿಜೆ ಹಳ್ಳಿ ಪೆಪೊಲೀಸ್ ಠಾಣಾ ವ್ಯಾಪ್ತಿಯ ಚಹಾ ಅಂಗಡಿ ಮಾಲೀಕ ಬಾಗಿಲು ಹಾಕುತ್ತಿದ್ದಾಗ ಚಹಾ ಮಾಡಿಕೊಡುವಂತೆ ಲಾಂಗ್‍ನಿಂದ ಬೆದರಿಸಿದೆ. ಚಹಾ ಮಾಡಲು ಒಪ್ಪದಿದ್ದಾಗ ಮಾಲೀಕನ ಬಳಿಯಿದ್ದ ಹಣ ಸುಲಿಗೆ ಮಾಡಿ ಈ ಗುಂಪು ಪರಾರಿಯಾಗಿತ್ತು. ಈ ಬಗ್ಗೆ ಆರ್‍ಟಿನಗರ ಹಾಗೂ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದವು.

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

ಈ ಪ್ರಕರಣದ ತನಿಖೆ ಕೈಗೊಂಡ ಆರ್‍ಟಿ ನಗರ ಠಾಣೆ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿದ್ದ ಸಿ.ಸಿ.ಕ್ಯಾಮರಾಗಳನ್ನು ಪರಿಶೀಲಿಸಿ, ಕೃತ್ಯವೆಸಗಿದ ವ್ಯಕ್ತಿಯ ಚಹರೆ ಪಡೆದುಕೊಂಡು, ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಬಂಧಿಸಿ 4 ದ್ವಿಚಕ್ರ ವಾಹನಗಳು ಮತ್ತು 12,500 ನಗದು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿ ಇಮ್ರಾನ್, ಪೀಣ್ಯ, ನೆಲಮಂಗಲ ಟೌನ್, ಗ್ರಾಮಾಂತರ, ಕಡೂರು, ಡಿ.ಜೆ.ಹಳ್ಳಿ, ಬೆಂಗಳೂರು ನಗರ ರೈಲೆ ್ವ ಪೊಲೀಸ್ ಠಾಣೆ, ಕಾಟನ್‍ಪೇಟೆ, ಕೆಂಗೇರಿ, ಕುಮಾರಸ್ವಾಮಿಲೇಔಟ್, ವಿದ್ಯಾರಣ್ಯಪುರ, ಯಲಹಂಕ ನ್ಯೂಟೌನ್, ಯಲಹಂಕ, ಸಂಪಿಗೇಹಳಿ ್ಳ, ಜೆ.ಸಿ.ನಗರ ಪೊಲೀಸ್ ಠಾಣೆಗಳ ಸುಲಿಗೆ, ದರೋಡೆಗೆ ಸಂಚು, ಕೊಲೆ ಯತ್ನ, ಹಲ್ಲೆ, ದ್ವಿಚಕ್ರ ವಾಹನ ಕಳವು ಪ್ರಕರಣ ಸೇರಿದಂತೆ 31 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ಗೊತ್ತಾಗಿದೆ.

ಮತ್ತೊಬ್ಬ ಆರೋಪಿ ಹಲಸೂರು ಪೊಲೀಸ್ ಠಾಣೆಯ ದ್ವಿಚಕ್ರವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿರುತಾನೆ. ಪ್ರಕರಣದ ಮೂರನೇ ಆರೋಪಿ ಅರ್ಪಿತ್ ಅಹಮ್ಮದ್ ಬಾಣಸವಾಡಿ, ಸೂರ್ಯನಗರ, ಹೆಣ್ಣೂರು, ಭಾರತಿನಗರ, ಪರಪ್ಪನ ಅಗ್ರಹಾರ, ಕೊಡಿಗೇಹಳ್ಳಿ, ಪುಲಕೇಶಿನಗರ, ಅಮೃತಹಳ್ಳಿ, ಕೊತ್ತನೂರು, ಎಲೆಕ್ಟ್ರಾನಿಕ್ ಸಿಟಿ, ಕಮರ್ಷೀಯಲ್ ಸ್ಟ್ರೀಟ್, ಕಬ್ಬನ್ ಪಾರ್ಕ್, ಕೆ.ಜಿ.ಹಳ್ಳಿ, ಸದಾಶಿವನಗರ ಪೊಲೀಸ್ ಠಾಣೆಗಳ ಸುಲಿಗೆ, ದರೋಡೆಗೆ ಸಂಚು, ಹಲ್ಲೆ, ದ್ವಿಚಕ್ರವಾಹನ ಕಳವು ಪ್ರಕರಣ ಸೇರಿದಂತೆ 21ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿಗೆ ಹೋಗಿ ಬಂದಿರುವುದು ತನಿಖೆಯಿಂದ ತಿಳಿದು ಬಂದಿರುತ್ತದೆ.

ನಾಸಾ ಕಣ್ಣಿಗೆ ಬಿದ್ದ ‘ದುಷ್ಟ ಕಣ್ಣು’

ಆರೋಪಿಗಳ ಬಂಧನದಿಂದ ಆರ್.ಟಿ.ನಗರ ಪೊಲೀಸ್ ಠಾಣೆಯ 3 ಸುಲಿಗೆ ಪ್ರಕರಣ, ಬಾಣಸವಾಡಿ ಪೆಪೊಲೀಸ್ ಠಾಣೆಯ 1 ದ್ವಿಚಕ್ರವಾಹನ ಕಳವು ಪ್ರಕರಣ, ನೆಲಮಂಗಲ ಟೌನ್ ಪೊಲೀಸ್ ಠಾಣೆಯ 1 ದ್ವಿಚಕ್ರವಾಹನ ಕಳವು ಪ್ರಕರಣ, ಬಾಗಲೂರು ಪೊಲೀಸ್ ಠಾಣೆಯ-1 ಸುಲಿಗೆ ಪ್ರಕರಣ, ತಮಿಳುನಾಡು ರಾಜ್ಯದ ಶೂಲಗಿರಿ ಪೊಲೀಸ್ ಠಾಣೆಯ-1 ಸುಲಿಗೆ ಪ್ರಕರಣ, ಹುಡ್ಕೋ ಪೊಲೀಸ್ ಠಾಣೆಯ 1 ದ್ವಿ ಚಕ್ರವಾಹನ ಕಳವು ಪ್ರಕರಣ, ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯ-1 ಸಾರ್ವಜನಿಕರ ಆಸ್ತಿ ನಷ್ಟ ಪ್ರಕರಣ, ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯ ಹಲ್ಲೆ ಪ್ರಕರಣ ಸೇರಿದಂತೆ ಒಟ್ಟು 10 ಪ್ರಕರಣಗಳು ಪತ್ತೆಯಾಗಿರುತ್ತವೆ.

ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸೈದುಲು ಅಡಾವತ್ ರವರ ಮಾರ್ಗದರ್ಶನದಲ್ಲಿ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮನೋಜ್‍ಕುಮಾರ್ , ಇನ್ಸ್ಕ್ಟರ್, ಚಿತ್ತರಂಜನ್ ನೇತೃತ್ವದ ತಂಡ ಈ ಕಾರ್ಯಾಚರಣೆ ಕೈಗೊಂಡು ಸುಲಿಗೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News