ನವದೆಹಲಿ,ನ.30- ದೇಶದಲ್ಲಿ ಹಣಕಾಸು ಹಾಗೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆಯಾಗಲಿದ್ದು, ನಾಳೆಯಿಂದ ದುಬಾರಿ ದುನಿಯಾ ಪ್ರಾರಂಭವಾಗಲಿದೆ. ಬ್ಯಾಂಕಿಂಗ್, ಟೆಲಿಕಾಂ, ತಂತ್ರಜ್ಞಾನ ಮತ್ತು ಇತರೆ ಕ್ಷೇತ್ರಗಳಲ್ಲಿ ಬದಲಾವಣೆಗಳಾಗಿದ್ದು, ಸಿಮ್ ಕಾರ್ಡ್, ಕ್ರೆಡಿಟ್ ಕಾರ್ಡ್, ಗ್ಯಾಸ್ ಸಿಲಿಂಡರ್‍ಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ನಾಳೆಯಿಂದ ಜಾರಿಗೆ ಬರಲಿವೆ.
ಸಿಮ್ ಕಾರ್ಡ್: ಈ ಹೊಸ ನಿಯಮವು ಸಿಮ್ ಕಾರ್ಡ್‍ಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದೆ. ದೂರಸಂಪರ್ಕ ಇಲಾಖೆಯ ಪ್ರಕಾರ, ಈಗ ಕೆವೈಸಿ ಪ್ರಕ್ರಿಯೆಯಿಲ್ಲದೆ ಸಿಮ್ ಕಾರ್ಡ್‍ಗಳನ್ನು ಖರೀದಿಸಲು ಸಾಧ್ಯವಿಲ್ಲ. ಇದಲ್ಲದೆ ಸೀಮಿತ ಸಿಮ್ ಕಾರ್ಡ್‍ಗಳನ್ನು ಒಂದೇ ಐಡಿಯಲ್ಲಿ ಮಾರಾಟ ಮಾಡುವ ನಿಯಮವನ್ನು ಸಹ ಜಾರಿಗೆ ತರಲಾಗುವುದು. ಇದನ್ನು ಉಲ್ಲಂಘಿಸುವವರಿಗೆ 10 ಲಕ್ಷ ರೂ. ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳಲ್ಲಿ, ಸಿಮ್ ಕಾರ್ಡ್ ಮಾರಾಟಗಾರರು ಸಿಸ್ಟಮ್‍ನಡಿ ಕೆವೈಸಿ ಪ್ರಕ್ರಿಯೆಯ ಮೂಲಕ ನೋಂದಾಯಿಸಿಕೊಳ್ಳಬೇಕು.
ಎಚ್‍ಡಿಎಫ್‍ಸಿ ರೆಗಾಲಿಯಾ ಕ್ರೆಡಿಟ್ ಕಾರ್ಡ್: ಎಚ್‍ಡಿಎಫ್‍ಸಿ ಬ್ಯಾಂಕ್ ತನ್ನ ರೆಗಾಲಿಯಾ ಕ್ರೆಡಿಟ್ ಕಾರ್ಡ್‍ನ ನಿಯಮಗಳನ್ನು ಬದಲಾಯಿಸುತ್ತದೆ. ನಾಳೆಯಿಂದ ಬಳಕೆದಾರರು ಲಾಂಜ್ ಪ್ರವೇಶ ಪಡೆಯಲು ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಲಾಂಜ್ ಪ್ರವೇಶಕ್ಕಾಗಿ ಬಳಕೆದಾರರು ವರ್ಷದ ತ್ರೈಮಾಸಿಕದಲ್ಲಿ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ನ್ಯೂಜೆರ್ಸಿಯಲ್ಲಿ ಅಜ್ಜ, ಅಜ್ಜಿ, ಚಿಕ್ಕಪ್ಪನನ್ನು ಕೊಂದ ಭಾರತೀಯ ವಿದ್ಯಾರ್ಥಿ
ಜನವರಿಯಿಂದ ಮಾರ್ಚ್, ಏಪ್ರಿಲ್‍ನಿಂದ ಜೂನ್, ಜುಲೈನಿಂದ ಸೆಪ್ಟೆಂಬರ್, ಅಕ್ಟೋಬರ್‍ನಿಂದ ಡಿಸೆಂಬರ್ ತ್ರೈಮಾಸಿಕದಲ್ಲಿ ಬಳಕೆದಾರರು 1 ಲಕ್ಷ ರೂ.ವರೆಗೆ ಖರ್ಚು ಮಾಡುವುದು ಅಗತ್ಯವಾಗಿರುತ್ತದೆ. ನಂತರ ಅವರು ಲಾಂಜ್ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತದೆ.
ಬಳಕೆದಾರರು ತ್ರೈಮಾಸಿಕದಲ್ಲಿ ಎರಡು ಬಾರಿ ಮಾತ್ರ ಲಾಂಜ್ ಪ್ರವೇಶದ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಎರಡು ರೂಪಾಯಿಗಳ ವಹಿವಾಟು ಶುಲ್ಕವೂ ಇದೆ. ಆದಾಗ್ಯೂ, ಮಾಸ್ಟರ್ ಕಾರ್ಡ್ ಬಳಕೆದಾರರಿಗೆ 25 ರೂಪಾಯಿಗಳ ಶುಲ್ಕವನ್ನು ವಿಸಲಾಗುತ್ತದೆ, ಅದನ್ನು ನಂತರ ಮರುಪಾವತಿಸಲಾಗುತ್ತದೆ.
ಎಲ್‍ಪಿಜಿ ಸಿಲಿಂಡರ್ ಬೆಲೆ: ನಾಳೆಯಿಂದ ಎಲ್‍ಪಿಜಿ ಸಿಲಿಂಡರ್‍ಗಳ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ನವೆಂಬರ್‍ನಲ್ಲಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಮದುವೆಯ ಋತುವಿನ ಕಾರಣದಿಂದಾಗಿ ಅದರ ಬೆಲೆಯೂ ಹೆಚ್ಚಳ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ದೇಶೀಯ ಸಿಲಿಂಡರ್ ದರಗಳು ಬದಲಾವಣೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.
ಸಾಲದ ಹೊಸ ನಿಯಮಗಳು:
ಆರ್‍ಬಿಐ ನಾಳೆಯಿಂದ ಸಾಲಗಳಿಗೆ ಸಂಬಂಸಿದ ನಿಯಮಗಳನ್ನು ಜಾರಿಗೆ ತರಲಿದೆ. ಇದರಡಿ ಸಾಲವನ್ನು ಮರುಪಾವತಿ ಮಾಡಿದ 1 ತಿಂಗಳಿನೊಳಗೆ ಸಾಲ ನೀಡಲು ಬ್ಯಾಂಕ್ ಸಲ್ಲಿಸಿದ ಆಸ್ತಿ ದಾಖಲೆಗಳನ್ನು ಹಿಂದಿರುಗಿಸುವುದು ಅಗತ್ಯವಾಗಿರುತ್ತದೆ. ಬ್ಯಾಂಕ್ ಇದನ್ನು ಮಾಡದಿದ್ದರೆ ಅದು 5,000 ರೂ.ಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.