Tuesday, April 21, 2026
Homeರಾಜ್ಯಬೆಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ 11.5 ಕೋಟಿ ಮೌಲ್ಯದ ಡ್ರಗ್ಸ್ ವಶ, ಇಬ್ಬರ ಬಂಧನ

ಬೆಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ 11.5 ಕೋಟಿ ಮೌಲ್ಯದ ಡ್ರಗ್ಸ್ ವಶ, ಇಬ್ಬರ ಬಂಧನ

Bengaluru: Drugs worth Rs 11.5 crore seized from apartment, two arrested

ಬೆಂಗಳೂರು,ಮಾ.3-ಅಪಾರ್ಟ್‌ಮೆಂಟ್‌ನಲ್ಲಿ ಸಭ್ಯರಂತೆ ವಾಸಿಸುತ್ತ ಡ್ರಗ್ಸ್ ದಂಧೆಯಲ್ಲಿ ತೊಡಗಿ ಸಿಕೊಂಡಿದ್ದ ಜೋಡಿ ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಸಿಸಿಬಿ ಪೊಲೀಸರು, ಫ್ಲಾಟ್‌ನಲ್ಲಿ ಅಡಗಿಸಿಟ್ಟಿದ್ದ 11.50 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶಪಡಿಸಿ ಕೊಂಡಿದ್ದಾರೆ.

ಕೇರಳ ಮೂಲದ ಅಶ್ವಿನ್‌ ಹಾಗೂ ಮುಬಿನಾ ಬಂಧಿತ ಆರೋಪಿಗಳು. ಇವರು ಕಳೆದ 1 ವರ್ಷ ದಿಂದ ಬಾಗಲೂರಿನ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ನ ಫ್ಲಾಟ್‌ವೊಂದರಲ್ಲಿ ವಾಸಿಸುತ್ತಿದ್ದರು. ಬಂಧಿತರಿಂದ 8,335 ಎಲ್‌ಎಸ್‌‍ಡಿ ಸ್ಟ್ರೀಪ್ಸ್ ಗಳು, 5 ಕೆಜಿ ಹೈಡ್ರೋ ಗಾಂಜಾ, 534 ಗ್ರಾಂ ಚರಸ್‌‍, ಎರಡು ಮೊಬೈಲ್‌ ಹಾಗೂ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರು ಫ್ಲಾಟ್‌ನಲ್ಲಿ ಸಭ್ಯರಂತೆ ವಾಸಿಸುತ್ತಿದ್ದರು. ಇವರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರಬಹುದು ಎಂಬ ಶಂಕೆ ಮೇಲೆ ಇವರಿಬ್ಬರ ಮೇಲೆ ಪೊಲೀಸರು ವಿಶೇಷ ನಿಗಾ ಇಟ್ಟಿದ್ದರು.

ಬಂದ ಖಚಿತ ಮಾಹಿತಿ ಮೇರೆಗೆ ಎಸಿಪಿ ಮಹಾನಂದ್‌ ನೇತೃತ್ವದಲ್ಲಿ ಇನ್ಸ್ ಪೆಕ್ಟರ್‌ ಮಂಜಪ್ಪ ಹಾಗೂ ವಿಶೇಷ ಸಿಬ್ಬಂದಿಗಳ ತಂಡ ಅವರ ಫ್ಲಾಟ್‌ ಮೇಲೆ ದಾಳಿ ಮಾಡಿದಾಗ ಸಭ್ಯ ಜೋಡಿಯಂತೆ ನೆಲೆಸಿದ್ದವರ ಕರ್ಮಕಾಂಡ ಬಯಲಾಗಿದ್ದು, ಜೋಡಿಯನ್ನು ಬಂಧಿಸಿ ಮಾದಕ ವಸ್ತುಗಳನ್ನೆಲ್ಲಾ ಜಪ್ತಿ ಮಾಡಿದ್ದಾರೆ.

ಆರೋಪಿಗಳು ಥೈಲ್ಯಾಂಡ್‌ನಲ್ಲಿ ನೆಲೆಸಿರುವ ಕೇರಳ ಮೂಲದ ವ್ಯಕ್ತಿಯೂ ಕಳುಹಿಸಿಕೊಡುವ ಮಾದಕ ವಸ್ತುಗಳನ್ನು ಆತನ ನಿರ್ದೇಶನದಂತೆ ಗಿರಾಕಿಗಳಿಗೆ ತಲುಪಿಸಿ ಅಕ್ರಮ ಸಂಪಾದನೆ ಮಾಡುವ ವ್ಯವಸ್ಥಿತ ಕೃತ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಜೋಡಿ ವಿರುದ್ಧ ಬಾಗಲೂರು ಪೊಲೀಸ್‌‍ ಠಾಣೆಯಲ್ಲಿ ಎನ್‌ಡಿಪಿಎಸ್‌‍ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಈ ತಂಡ ಕಾರ್ಯಾಚರಣೆ ಮುಂದುವರೆಸಿ ವಿದೇಶದಿಂದ ಅಂಚೆ ಮೂಲಕ ಪಾರ್ಸಲ್‌ನಲ್ಲಿ ತರಿಸಿಕೊಳ್ಳಲಾಗಿದ್ದ 1.5 ಕೆಜಿ ಹೈಡ್ರೋ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ಯಾರಿಗೂ ಅನುಮಾನ ಬಾರದಿರಲಿ ಎಂದು ಹೈಡ್ರೋಗಾಂಜಾವನ್ನು ಚಾಕಲೇಟ್‌ ಮತ್ತು ಬಿಸ್ಕೇಟ್‌ ಬಾಕ್‌್ಸಗಳಲ್ಲಿ ವ್ಯವಸ್ಥಿತವಾಗಿ ಪ್ಯಾಕ್‌ ಮಾಡಿದ್ದರು.

ವಶಪಡಿಸಿಕೊಳ್ಳಲಾಗಿರುವ ಹೈಡ್ರೋ ಗಾಂಜಾದ ಮೌಲ್ಯವು ಒಂದೂವರೆ ಕೋಟಿ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.ಬಂಧಿತರ ವಿರುದ್ಧ ಎನ್‌ಡಿಪಿಎಸ್‌‍ ಆಕ್ಟ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ತನಿಖೆ ಚುರುಕು: ಡ್ರಗ್ಸ್ ಪೆಡ್ಲರ್‌ ಜೋಡಿ ವಾಸಿಸುತ್ತಿದ್ದ ಪ್ರದೇಶದ ಸುತ್ತಮುತ್ತ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಐಟಿ-ಬಿಟಿ ಕಂಪನಿಗಳು ಇದ್ದು, ಹೈಟೆಕ್‌ ಮಂದಿ ವಾರಾಂತ್ಯಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ಮಾಡುವ ಮೋಜು ಮಸ್ತಿಗೆ ಡ್ರಗ್‌್ಸ ಸರಬರಾಜು ಮಾಡುತ್ತಿದ್ದರೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್‌‍ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳಿಗೆ ವಿದೇಶದಿಂದ ಡ್ರಗ್‌್ಸ ಸರಬರಾಜು ಮಾಡುತ್ತಿದ್ದ ವ್ಯಕ್ತಿಯ ವಿವರ ಹಾಗೂ ವಿಳಾಸ ಪತ್ತೆಯಾಗಿದೆ. ಆತ ಭಾರಿ ಪ್ರಮಾಣದ ಮಾದಕ ದ್ರವ್ಯವನ್ನು ಯಾವ ರೀತಿ ಪಾರ್ಸೆಲ್‌ ರವಾನಿಸುತ್ತಿದ್ದ ಎಂಬ ಬಗ್ಗೆಯೂ ತನಿಖೆಗೆ ಆದೇಶಿಸಿದ್ದು ಶೀಘ್ರದಲ್ಲೇ ಪ್ರಕರಣ ಕಿಂಗ್‌ಪಿನ್‌ ವ್ಯಕ್ತಿಯನ್ನು ಬಂಧಿಸಲಾಗುವುದೆಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡ್ರಗ್‌್ಸ ಜೋಡಿಗೆ ಅಪಾರ್ಟ್‌ಮೆಂಟ್‌ನ ಫ್ಲಾಟ್‌ ಬಾಡಿಗೆಗೆ ನೀಡಿದ್ದ ವ್ಯಕ್ತಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಿಗಳಿರುವ ಈ ವ್ಯಕ್ತಿಯ ಸಂಬಂಧದ ಬಗ್ಗೆಯೂ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಆಯುಕ್ತರು ಹೇಳಿದರು.

ಸರಬರಾಜಿಗೂ ಮುನ್ನ ಡ್ರಗ್‌್ಸ ಸೀಜ್‌: ಬಂಧಿತ ಆರೋಪಿಗಳು ಹೋಲಿ ಹಬ್ಬದ ಸಂದರ್ಭದಲ್ಲಿ ತಮ ಗಿರಾಕಿಗಳಿಗೆ ಹಾಗೂ ವಿಕೆಂಡ್‌ ಪಾರ್ಟಿಗಳಿಗೆ ಡ್ರಗ್‌್ಸ ಸರಬರಾಜು ಮಾಡುವ ಮುನ್ನವೇ ಅವರನ್ನು ಬಂಧಿಸಿ 11.50 ಕೋಟಿ ಮೌಲ್ಯದ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಸೀಮಂತ್‌ಕುಮಾರ್‌ ಸಿಂಗ್‌ ಮಾಹಿತಿ ನೀಡಿದರು.

ಇಬ್ಬರು ವಿದೇಶಿ ಮಹಿಳೆಯರ ವಶ: ಅದೇ ರೀತಿ ಇದೇ ಪೊಲೀಸ್‌‍ ತಂಡ ವೀಸಾ ಅವಧಿ ಮುಗಿದಿದ್ದರೂ ಮೈಕೋ ಲೇಔಟ್‌ ಪೊಲೀಸ್‌‍ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿ ಮಹಿಳೆಯರನ್ನು ವಶಕ್ಕೆ ಪಡೆದು ಫಾರಿನರ್‌ರ‍ಸ ಡಿಟೆನ್ಷನ್‌ ಸೆಂಟರ್‌ಗೆ ಕಳುಹಿಸಿದ್ದಾರೆಂದು ಅವರು ವಿವರಿಸಿದರು.

RELATED ARTICLES

Latest News