Homeಕ್ರೀಡಾ ಸುದ್ದಿಆಲ್‌ ಇಂಗ್ಲೆಂಡ್‌ ಬ್ಯಾಡಿಂಟನ್‌ ಟೂರ್ನಿ : ಲಕ್ಯಸೇನ್‌ ಸೆಮಿ ಫೈನಲ್‌ಗೆ ಲಗ್ಗೆ

ಆಲ್‌ ಇಂಗ್ಲೆಂಡ್‌ ಬ್ಯಾಡಿಂಟನ್‌ ಟೂರ್ನಿ : ಲಕ್ಯಸೇನ್‌ ಸೆಮಿ ಫೈನಲ್‌ಗೆ ಲಗ್ಗೆ

All England Open: Lakshya Sen storms into semis after thrashing World No. 6 Li

ಬರ್ಮಿಂಗ್‌ಹ್ಯಾಮ್‌, ಮಾ.7- ಆಲ್‌ ಇಂಗ್ಲೆಂಡ್‌ ಬ್ಯಾಡಿಂಟನ್‌ ಟೂರ್ನಿಯ ಸೆಮಿ ಫೈನಲ್‌ ಪ್ರವೇಶಿಸಿರುವ ಲಕ್ಯಸೇನ್‌ ತಮ ಕನಸಿನ ಓಟವನ್ನು ಮುಂದುವರೆಸಿದ್ದು ಭಾರತದ ಭರವಸೆಯನ್ನು ಜೀವಂತವಾಗಿರಿಸಿದ್ದಾರೆ.ವಿಶ್ವದ ಕ್ರಮಾಂಕದ ಆಟಗಾರ ಚೀನಾದ ಲೀ ಫೆಂಗ್‌ ಅವರನ್ನು ನೇರ ಗೇಮ್‌ಗಳ ಮಣಿಸಿದ ಲಕ್ಯಸೇನ್‌ ಸೆಮಿಫನಲ್‌ಗೆ ಲಗ್ಗೆ ಹಾಕಿದರು.

2022ರಲ್ಲಿ ಇಲ್ಲಿ ಫೈನಲ್‌ ಪಂದ್ಯವಾಡಿದ್ದ ವಿಶ್ವ 12ನೇ ಕ್ರಮಾಂಕದ ಭಾರತೀಯ ಆಟಗಾರ ಸೇನ್‌ ಇಲ್ಲಿನ ಯುಟಿಲಿಟಾ ಅರೇನಾದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ 21-13-, 21-16 ನೇರ ಗೇಮ್‌ಗಳಲ್ಲಿ ಲೀ ಅವರನ್ನು ಪರಾಭವಗೊಳಿಸಿದರು. ಪಂದ್ಯ ಒಂದು ಗಂಟೆಯಲ್ಲಿ ಮುಗಿಯಿತು.

ಕಳೆದ ಬಾರಿ ಇದೇ ಎದುರಾಳಿಗೆ ಇಲ್ಲಿ ಕ್ವಾಟಫೈನಲ್‌ ಸೋತಿದ್ದ ಲಕ್ಯಸೇನ್‌ ಈ ಬಾರಿ ಸೇಡು ತೀರಿಸಿಕೊಂಡಂತಾಗಿದ್ದು ಈ ಪಂದ್ಯ ಅವರಿಗೆ ಸರಣಾರ್ಹವಾಗಿದೆ.ಮೊದಲ ಗೇಮ್‌ನಲ್ಲಿ ಪಾರಮ್ಯ ಸಾಧಿಸಿದ ಲಕ್ಯಸೇನ್‌ ಅವರು ಲೀ ಅವರಿಗೆ ಪುಟಿದೇಳಲು ಅವಕಾಶವೇ ನೀಡಲಿಲ್ಲ. ದಿಟ್ಟ ಆಟದ ಮೂಲಕ ಸೇನ್‌ ಅರ್ಹ ಜಯ ಸಂಪಾದಿಸಿದರು.

RELATED ARTICLES
spot_img

Latest News