Tuesday, May 21, 2024
Homeರಾಜ್ಯಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಹೆಸರಲ್ಲಿ ಉದ್ಯಮಿಗೆ 1.98 ಕೋಟಿ ದೋಖಾ

ಮುಂಬೈ ಕ್ರೈಂ ಬ್ರಾಂಚ್ ಪೊಲೀಸರ ಹೆಸರಲ್ಲಿ ಉದ್ಯಮಿಗೆ 1.98 ಕೋಟಿ ದೋಖಾ

ಬೆಂಗಳೂರು,ಡಿ.10-ನಗರದಲ್ಲಿ ಮತ್ತೊಂದು ಮಹಾನ್ ಆನ್‍ಲೈನ್ ವಂಚನೆ ಪ್ರಕರಣ ನಡೆದಿದೆ. ನಾವು ಮುಂಬೈ ಕ್ರೈಂ ಬ್ರಾಂಚ್‍ನವರು ಎಂದು ನಂಬಿಸಿದ ವಂಚಕರು ಫ್ಲೋರಿಂಗ್ ಉದ್ಯಮಿಯೊಬ್ಬರಿಗೆ ಬರೊಬ್ಬರಿ 1.98 ಕೋಟಿ ರೂ. ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆನ್‍ಲೈನ್ ವಂಚನೆ ಪ್ರಕರಣ ಕುರಿತಂತೆ ಕೋರಮಂಗಲದಲ್ಲಿ ವಾಸಿಸುತ್ತಿರುವ 52 ವರ್ಷದ ಉದ್ಯಮಿ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೇಗೆ ನಡೆಯಿತು ವಂಚನೆ: ಡಿ.2 ರಂದು ಉದ್ಯಮಿಗೆ ಕೋರಿಯರ್ ಬಾಯ್ ರೀತಿ ದೂರವಾಣಿ ಕರೆ ಮಾಡಿದ ವ್ಯಕ್ತಿಯೊಬ್ಬ ನಿಮಗೆ ಪಾರ್ಸಲ್‍ನಲ್ಲಿ ಸಿಂಥೆಟಿಕ್ಸ್ ಡ್ರಗ್ಸ್ ಬಂದಿದೆ. ಈ ಕುರಿತಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ನಿಮ್ಮೊಂದಿಗೆ ಮಾತನಾಡುತ್ತಾರೆ ಎಂದು ತಿಳಿಸುತ್ತಾನೆ.

ನಂತರ ಸ್ಕೈಪೆಯಲ್ಲಿ ಮಾತನಾಡಿದ ವಂಚಕರು ತಮ್ಮನ್ನು ಮುಂಬೈ ಕ್ರೈಂ ಬ್ರಾಂಚ್‍ನವರು ಎಂದು ಪರಿಚಯಿಸಿಕೊಂಡು ನಿಮ್ಮನ್ನು ತನಿಖೆ ನಡೆಸಬೇಕಾಗಿದೆ ಎಂದು ನಾನಾ ರೀತಿಯ ಪ್ರಶ್ನೆ ಕೇಳಲಾರಂಭಿಸುತ್ತಾರೆ. ಪತಿ ಎಷ್ಟು ಹೊತ್ತಾದರೂ ಮನೆಗೆ ಬಾರದಿರುವುದರಿಂದ ಉದ್ಯಮಿ ಪತ್ನಿ ಕೂಡ ಕಚೇರಿಗೆ ಆಗಮಿಸುತ್ತಾರೆ. ಈ ಸಂದರ್ಭದಲ್ಲಿ ವಂಚಕರು ಖಾಸಗಿ ಹೋಟೆಲ್‍ಗೆ ಬರುವಂತೆ ಸೂಚಿಸುತ್ತಾರೆ.

ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ

ವಂಚಕರ ಹೇಳಿಕೆಯಿಂದ ಭಯಭೀತರಾದ ದಂಪತಿ ಖಾಸಗಿ ಹೋಟೆಲ್‍ಗೆ ಹೋದಾಗ ಅವರು ಆನ್‍ಲೈನ್ ಮೂಲಕ ದಂಪತಿ ಅಕೌಂಟ್‍ನಿಂದ 1.98 ಕೋಟಿ ರೂ.ಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳುತ್ತಾರೆ. ಇದಾದ ನಂತರ ಉದ್ಯಮಿಗೆ ನನ್ನನ್ನು ಸಂಪರ್ಕಿಸಿರುವುದು ಮುಂಬೈ ಕ್ರೈಂ ಬ್ರಾಂಚ್‍ನವರಲ್ಲ. ಆನ್‍ಲೈನ್ ವಂಚಕರು ಎಂದು ತಿಳಿಯುತ್ತಿದ್ದಂತೆ ಡಿ.7 ರಂದು ಆಗ್ನೇಯ ಸಿಇಎನ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಉದ್ಯಮಿ ನೀಡಿರುವ ದೂರು ದಾಖಲಿಸಿಕೊಂಡಿರುವ ಸಿಇಎನ್ ಠಾಣೆ ಪೊಲೀಸರು ವಂಚಕರ ಪತ್ತೆಗೆ ಜಾಲ ಬೀಸಿದ್ದಾರೆ. ನಗರದಲ್ಲಿ ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ.

ಭಾರತ ವಿಶ್ವದ ಔಷಧಾಲಯ : ಎಸ್.ಜೈಶಂಕರ್

ಆನ್‍ಲೈನ್ ನಿಮಗೆ ಡ್ರಗ್ಸ್ ಬಂದಿದೆ ಎಂದು ನಂಬಿಸಿ ಉದ್ಯಮಿಗಳನ್ನು ಬೆದರಿಸಿ ಕೋಟ್ಯಾಂತರ ರೂಪಾಯಿ ಆನ್‍ಲೈನ್ ಮುಖಾಂತರ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಳ್ಳುತ್ತಿರುವ ವಂಚಕರು ಹೆಚ್ಚಾಗುತ್ತಿದ್ದಾರೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಠಾಣೆ ಪೊಲೀಸರು ವಂಚಕರ ಬಗ್ಗೆ ನಿಗಾ ಇಟ್ಟಿದ್ದು ಆನ್‍ಲೈನ್ ವಹಿವಾಟುಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾರೆ.

RELATED ARTICLES

Latest News