Friday, February 23, 2024
Homeರಾಜ್ಯಮಗಳನ್ನು ಕೊಂದು ತಂದೆ-ತಾಯಿ ಆತ್ಮಹತ್ಯೆ

ಮಗಳನ್ನು ಕೊಂದು ತಂದೆ-ತಾಯಿ ಆತ್ಮಹತ್ಯೆ

ಮಡಿಕೇರಿ, ಡಿ.10- ಹನ್ನೆರಡು ವರ್ಷದ ಮಗಳನ್ನು ಕೊಂದು ತಂದೆ- ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರ ಹೊರವಲಯದ ಕಗ್ಗೋಡ್ಲುವಿನ ಹೋಂಸ್ಟೇನಲ್ಲಿ ನಡೆದಿದೆ. ಕೇರಳದ ವಿನೋದ್(30), ಜೀವಿ ಅಬ್ರಹಮ್(28) ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಹಣಕಾಸು ವಿಚಾರದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೇರಳದಿಂದ ಕಳೆದ ಶುಕ್ರವಾರ ಮಗಳೊಂದಿಗೆ ಈ ದಂಪತಿ ಕಗ್ಗೋಡ್ಲುವಿನ ಹೋಂ ಸ್ಟೇಗೆ ಬಂದು ನೆಲೆಸಿದ್ದರು. ಈ ನಡುವೆ ತಮ್ಮ 12 ವರ್ಷದ ಮಗಳನ್ನು ಕೊಲೆ ಮಾಡಿ ದಂಪತಿ ಹೋಂಸ್ಟೇನ ಹುಕ್‍ಗೆ ನೇಣು ಹಾಕಿ
ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.

ನಿನ್ನೆ ಬಹಳ ಹೊತ್ತಾದರೂ ಹೋಂಸ್ಟೇನಿಂದ ಯಾರೂ ಹೊರಗೆ ಬರದಿದ್ದಾಗ ಅನುಮಾನಗೊಂಡ ಹೋಂಸ್ಟೇ ಸಿಬ್ಬಂದಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಅನುಮಾನಗೊಂಡು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ

ಸುದ್ದಿ ತಿಳಿದು ಸ್ಥಳಕ್ಕೆ ದಾವಿಸಿ ಬಂದ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಬಾಗಿಲು ಒಡೆದು ನೋಡಿದಾಗ ಶವಗಳು ಪತ್ತೆಯಾಗಿವೆ. ಸ್ಥಳ ಪರಿಶೀಲಿಸಿದಾಗ ಡೆತ್‍ನೋಟ್ ಸಹ ಸಿಕ್ಕಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES

Latest News