Sunday, May 12, 2024
Homeರಾಜ್ಯಈಡಿಗರಿಗೆ 2 ಸಚಿವ ಸ್ಥಾನ, 500 ಕೋಟಿ ರೂ. ಅನುದಾನಕ್ಕೆ ಬೇಡಿಕೆ

ಈಡಿಗರಿಗೆ 2 ಸಚಿವ ಸ್ಥಾನ, 500 ಕೋಟಿ ರೂ. ಅನುದಾನಕ್ಕೆ ಬೇಡಿಕೆ

ಬೆಂಗಳೂರು,ಡಿ.10- ಈಡಿಗ ಮತ್ತು ಅದರ ಉಪಪಂಗಡಗಳಿಗೆ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಮತ್ತು ನಿಗಮಕ್ಕೆ 500 ಕೋಟಿ ಅನುದಾನ ಒದಗಿಸಬೇಕೆಂಬ ಹಕ್ಕೋತ್ತಾಯ ಕೇಳಿಬಂತು. ನಗರದಲ್ಲಿಂದು ನಡೆದ ಈಡಿಗ ಹಾಗೂ ಅದರ ಉಪಪಂಗಡಗಳ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಬಹುತೇಕ ನಾಯಕರು ಎರಡು ಸಚಿವ ಸ್ಥಾನಗಳಿಗೆ ಬೇಡಿಕೆ ಇಟ್ಟರು.

ಆರಂಭದಲ್ಲಿ ಮಾತನಾಡಿದ ಸಂಘದ ಮುಖಂಡರು ಕೂಡ ಸಮುದಾಯಕ್ಕಾಗಿ ಎರಡು ಸಚಿವ ಸ್ಥಾನಗಳನ್ನು ನೀಡಬೇಕು ಎಂದರು. ಇದಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದನಿಗೂಡಿಸಿದರು. ನಿಗಮ ಮಂಡಳಿ ಮತ್ತು ಸಚಿವ ಸಂಪುಟದಲ್ಲಿ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯಬೇಕು. ಒಂದು ವೇಳೆ ಸಚಿವ ಸ್ಥಾನ ನೀಡುತ್ತಾರೋ ಬಿಡುತ್ತೀರೊ ನಿಮಗೆ ಸೇರಿದ್ದು ಆದರೆ ಆರ್ಯ-ಈಡಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರೂ.ಗಳ ಅನುದಾನವನ್ನಂತೂ ಕೊಡಲೇಬೇಕು. ಇದು ನಮ್ಮ ಒಕ್ಕೊರಲ ಆಗ್ರಹ ಎಂದರು.

ಆನಂತರ ಮಾತನಾಡಿದ ಸಮುದಾಯದ ಶಾಸಕ ಹರತಾಳ್ ಹಾಲಪ್ಪ, ರಾಜ್ಯದಲ್ಲಿ ಈಡಿಗ ಸಮುದಾಯ 50 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂಬುದು ಕಾಂತರಾಜ್ ಆಯೋಗದ ವರದಿಯಲ್ಲಿನ ಮಾಹಿತಿಗಳು ಹೇಳುತ್ತಿವೆ. ಈಗಾಗಲೇ ಮಧುಬಂಗಾರಪ್ಪ ಸಚಿವರಾಗಿದ್ದಾರೆ. ಮತ್ತೊಂದು ಸಚಿವ ಸ್ಥಾನವನ್ನು ನೀಡಬೇಕು, ದಟ್ಟದ ಮೇಲೆ ಮತ್ತು ದಟ್ಟದ ಕೆಳಗೆ ಎಂಬ ಎರಡು ಭೌಗೋಳಿಕ ಆದ್ಯತೆ ಆಧಾರದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಬೇಕು. ವಿಧಾನಪರಿಷತ್‍ಗೂ ಒಂದು ಸಚಿವ ಸ್ಥಾನ ನೀಡಬೇಕು ಎಂದು ಹೇಳುವ ಮೂಲಕ ಬಿ.ಕೆ.ಹರಿಪ್ರಸಾದ್ ಪರವಾಗಿ ವಕಾಲತ್ತು ವಹಿಸಿದರು.

ಕಾಂಗ್ರೆಸ್ಸಿಗರನ್ನು ಮಾತ್ರ ಟಾರ್ಗೆಟ್ ಮಾಡಿ ಐಟಿ ದಾಳಿ ಮಾಡಲಾಗುತ್ತಿದೆ : ಸಿಎಂ ಸಿದ್ದರಾಮಯ್ಯ

ಬಿಜೆಪಿಯ ಶಾಸಕ ಮಾಲೀಕಯ್ಯಗುತ್ತೇದಾರ್ ಮಾತನಾಡಿ, ಬಿ.ಕೆ.ಹರಿಪ್ರಸಾದ್ ಅವರು ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಮುಂದಿನ ದಿನಗಳಲ್ಲಿ ಸಂಘ ಹಾಗೂ ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಹರಿಪ್ರಸಾದ್ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು. ಅವರಲ್ಲಿರುವ ಅಸಮಾಧಾನವನ್ನು ನಿವಾರಣೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಎರಡು ಸಚಿವ ಸ್ಥಾನದ ಕೂಗಿಗೆ ಮಾಲೀಕಯ್ಯ ಗುತ್ತೇದಾರ್ ಕೂಡ ಬೆಂಬಲ ವ್ಯಕ್ತಪಡಿಸಿದರು. ಉಳಿದಂತೆ ಸಮುದಾಯದ ಹೆಣ್ಣುಮಕ್ಕಳ ವಿದ್ಯಾರ್ಥಿನಿಲಯಗಳಿಗೆ ನಿವೇಶನ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು.

ಕಾಂತರಾಜ್ ಆಯೋಗದ ವರದಿಯನ್ನು ಕೂಡಲೇ ಬಹಿರಂಗಗೊಳಿಸಿ ಎಂದು ಬಹುತೇಕ ನಾಯಕರು ಆಗ್ರಹಿಸಿದರು. ನಿಗಮದ ಅಭಿವೃದ್ಧಿ ಚಟುವಟಿಕೆಗಳಿಗೆ 500 ಕೋಟಿ ರೂ. ಅನುದಾನದ ನೀಡುವುದು, ಸಮುದಾಯದ ನಾಯಕರಿಗೆ ರಾಜಕೀಯ ಸ್ಥಾನಮಾನ ಸೇರಿದಂತೆ ಹಲವು ಹಕ್ಕೋತ್ತಾಯಗಳು ಕೇಳಿಬಂದವರು.
ಹೆಂಡ, ಸಾರಾಯಿ ನಿಷೇಧದ ಬಳಿಕ ಅದರ ವ್ಯಾಪಾರದಲ್ಲಿ ತೊಡಗಿದ್ದವರು ನಿರುದ್ಯೋಗಿಗಳಾಗಿದ್ದು ಅವರ ಪುನರ್ವಸತಿಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಮಾತನಾಡಿ, ಸಣ್ಣ ಪ್ರಮಾಣದಲ್ಲಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಹಿಡುವಳಿ ಮಾಡುತ್ತಿರುವ ರೈತರಿಗೆ ಜಮೀನುಗಳನ್ನು ಸಕ್ರಮ ಮಾಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು. ಸಿದ್ದರಾಮಯ್ಯ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಆಚರಣೆಗೆ ಸರ್ಕಾರಿ ಆದೇಶ ಹೊರಡಿಸಿದರು. ನಾರಾಯಣ ಗುರುಗಳ ಅಧ್ಯಯನ ಪೀಠಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಮತ್ತು ಶಾಲಾ ಪಠ್ಯದಲ್ಲಿ ನಾರಾಯಣ ಗುರುಗಳ ವಿಷಯ ಸೇರಿಸಬೇಕೆಂದು ಕೋರಿದರು.

ತೆಂಗು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಎಚ್‍ಡಿಕೆ ಪಾದಯಾತ್ರೆ

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ವಿನಯ್‍ಕುಮಾರ್ ಸೊರಕೆ, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ನಟ ಶ್ರೀಮುರುಳಿ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗವಹಿಸಿದ್ದರು.

RELATED ARTICLES

Latest News